ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡಿಗರು ಬಹುನಿರೀಕ್ಷೆಯಿಂದ ಕಾಯುತ್ತಿರುವ ಬಿಗ್ ಬಾಸ್ ಸೀಸನ್ 13 ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ ಕಂಟೆಸ್ಟೆಂಟ್ಸ್ ಲಿಸ್ಟ್ ಎನ್ನುವ ನೂರಾರು ವಿಡಿಯೋಗಳು ವೈರಲ್ ಆಗಿವೆ. ಈ ಹಿನ್ನೆಲೆಯಲ್ಲಿ ಕಲರ್ಸ್ ಕನ್ನಡ ಹಾಗೂ ಜಿಯೋ ಹಾಟ್ಸ್ಟಾರ್ ಅಧಿಕೃತ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದೆ. ಇದರಲ್ಲಿ ಕಾಣಿಸಿರುವ ಕಂಟೆಸ್ಟೆಂಟ್ಸ್ ಝಲಕ್ ನೋಡಿ ಯಾರೆಲ್ಲಾ ಇರಬಹುದು ಎಂದು ಜನ ಊಹಿಸೋಕೆ ಶುರು ಮಾಡಿದ್ದಾರೆ.
ಇದೇ ಭಾನುವಾರದಂದು ಎಲ್ಲಾ ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ. ಅಗ್ನಿಪರೀಕ್ಷೆಯಲ್ಲಿ ಗೆದ್ದ ಮೂರು ಸ್ಪರ್ಧಿಗಳು ಬಿಗ್ಬಾಸ್ ಮನೆಯೊಳಗೆ ತೆರಳೋದು ಖಚಿತ. ಇನ್ನುಳಿದ ಸೆಲೆಬ್ರಿಟಿಗಳು ಯಾರು? ಇದಕ್ಕೆ ಅರ್ಧಂಬರ್ಧ ಉತ್ತರ ಸಿಕ್ಕಿದೆ.
https://www.instagram.com/reel/Dc3muSWFBnA/?utm_source=ig_embed&ig_rid=AuQk7S8e4aeOP9C28D2LGs6
ಕಲರ್ಸ್ ಕನ್ನಡದ ಪ್ರೋಟೋದಲ್ಲಿ ಕಂಟೆಸ್ಟೆಂಟ್ಸ್ ಯಾವ ರೀತಿಯವರು ಎನ್ನುವ ಝಲಕ್ ಸಿಕ್ಕಿದೆ. ಹಾಡುಗಾರರು, ನೃತ್ಯಗಾರರು, ಮಾಡೆಲ್, ಗರಡಿ ಮನೆ ಹೀಗೆ ಸುಮಾರು ವಿಷಯಗಳನ್ನು ಇಲ್ಲಿ ತೋರಿಸಲಾಗಿದೆ. ಜೊತೆಗೆ ಕಂಟೆಸ್ಟೆಂಟ್ಗಳ ಸೈಡ್ ಹಾಗೂ ಬ್ಯಾಕ್ ಶಾಟ್ ಕೂಡ ಇಟ್ಟಿದ್ದು, ಜನ ಊಹಿಸುವ ಆಟ ಶುರು ಮಾಡಿಕೊಂಡಿದ್ದಾರೆ.
ಕಮೆಂಟ್ ಬಾಕ್ಸ್ನಲ್ಲಿ ತಮಗೆ ಅನಿಸಿದ ಹೆಸರುಗಳನ್ನು ಹಾಕುತ್ತಾ ಹೋಗಿದ್ದಾರೆ. ಶ್ರಾವಣಿ, ತಾಂಡವ್ ರಾಮ್, ಸಂಗೀತಾ ಭಟ್, ಡ್ರ್ಯಾಗನ್ ಮಂಜು, ಸೌಂದರ್ಯ, ಸಿಂಧು, ಸ್ಯಾಂಡಿ, ಕೋಟೆ ಪ್ರಭಾಕರ್,ಸೂರಜ್ ಇರಬಹುದು ಎಂದು ಜನ ಊಹಿಸಿದ್ದಾರೆ. ಕಂಟೆಸ್ಟೆಂಟ್ಸ್ಗೋಸ್ಕರ ಕಾಯುವ ಜನ ಒಂದುಕಡೆಯಾದ್ರೆ ಯಾವ ಕಂಟೆಸ್ಟೆಂಟ್ಸ್ ಆದ್ರೂ ಬರಲಿ ನಾವು ಬಿಗ್ಬಾಸ್ ನೋಡೋದು ಕಿಚ್ಚ ಸುದೀಪ ಅವರಿಗಾಗಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ.



