September 5, 2026
Saturday, September 5, 2026
spot_img

ತಳ್ಳಿಗೆರೆಯಲ್ಲಿ ಅಮಾನವೀಯ ಕೃತ್ಯ: ವಿಷಪ್ರಾಶನಕ್ಕೆ ಒಂದೇ ದಿನ ನಾಲ್ಕು ಶ್ವಾನಗಳ ಬ*ಲಿ

ಹೊಸದಿಗಂತ ವರದಿ ಯಲ್ಲಾಪುರ:

ಯಲ್ಲಾಪುರ ಪಟ್ಟಣದ ತಳ್ಳಿಗೆರೆಯಲ್ಲಿ ವಿಷ ಪ್ರಾಶನಕ್ಕೆ ಶ್ವಾನಗಳು ಬಲಿಯಾದ ಅಮಾನವೀಯ ಘಟನೆ ನಡೆದಿದೆ.

ಒಂದೇ ದಿನ ಎಕಾಏಕಿ ನಾಲ್ಕು ನಾಯಿಗಳು ಸಾವನ್ನಪ್ಪಿದ ವಿಷಯ ತಿಳಿಯುತ್ತಲೆ ಸ್ಥಳಕ್ಕಾಗಮಿಸಿದ ಸ್ಥಳೀಯ ಮುಖಂಡ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ್ ಮಿರಾಶಿ ಸಂಬಂಧಿಸಿದ ಅಧಿಕಾರಿಗಳಿಗೆ ಕರೆಮಾಡಿ ಸಾವನಪ್ಪಿದ ಶ್ವಾನಗಳನ್ನು ಬೇರೆಡೆಗೆ ಸಾಗಿಸಲು ಸೂಚಿಸಿದರು.

ಮೊದಲಿಗೆ ಅಲ್ಲಿಯ ಜನರು ಹಾವಿನ ಕಡಿತಕ್ಕೆ ಈ ರೀತಿ ನಾಯಿಗಳು ಸಾವನ್ನಪ್ಪಿವೆ ಎಂದು ಭಾವಿಸಿದ್ದರು, ಸ್ಥಳೀಯ ಜನರ ಆತಂಕ ಕಂಡು ವಿಷಪೂರಿತ ಹಾವನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸುವ ಪ್ರಯತ್ನ ಮಾಡಿಸಿದರು ಆದರೆ ಹಾವು ಸಿಗಲಿಲ್ಲ.

ಇದನ್ನೂ ಓದಿ:

ಸಾವನ್ನಪ್ಪಿದ ನಾಯಿಗಳನ್ನು ಪಟ್ಟಣ ಪಂಚಾಯತ ಸಿಬ್ಬಂದಿಗಳು ಬೇರೆಡೆಗೆ ಸಾಗಿಸಿದರು ಶನಿವಾರ ಬೆಳಗ್ಗೆ ಮತ್ತೆರಡು ನಾಯಿಗಳು ಸತ್ತು ಬಿದ್ದಿರುವುದು ಕಂಡು ಬಂತು ಆಗ ಅನುಮಾನಗೊಂಡು ಪರಿಶೀಲಿಸಿದಾಗ ನಾಯಿಗಳಿಗೆ ವಿಷವಿಕ್ಕಿರುವುದು ಮೇಲ್ನೋಟಕ್ಕೆ ದೃಡವಾಗಿದೆ.

ಇಂತಹ ಅಮಾನವೀಯ ಕೃತ್ಯ ಎಸಗಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ, ಇದರಿಂದ ವಿಷ ವಸ್ತುವನ್ನು ಹಸುಗಳು ಅಥವಾ ಇತರೆ ಪ್ರಾಣಿಗಳು ತಿನ್ನುವ ಆತಂಕವಿದ್ದು ಇದೊಂದು ಅತ್ಯಂತ ಹೇಯ ಕೃತ್ಯವಾಗಿದೆ ಇದನ್ನು ತನಿಖೆಗೆ ಒಳಪಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !