ಹೊಸದಿಗಂತ ವರದಿ ಗಂಗಾವತಿ:
ರಾಜ್ಯದ ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಬ್ಬ ವ್ಯಾಪಾರಸ್ಥ ಸಿಎಂ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ವಾಗ್ದಾಳಿ ನಡೆಸಿದ್ದಾರೆ.

6ನೇ ದಿನದ ಬಿಜೆಪಿಯ ಬಳ್ಳಾರಿ ಚಲೋ ಪಾದಯಾತ್ರೆ ಅಂಗವಾಗಿ ಮಾತನಾಡಿದ ಅವರು, ಇವರು ಎಲ್ಲವನ್ನೂ ವ್ಯಾಪಾರ ದೃಷ್ಟಿಯಿಂದ ನೋಡುತ್ತಾರೆ ಎಂದು ಟೀಕಿಸಿದರು.
ಜನಸೇವೆ ಎಂದರೇನು? ಕಲ್ಯಾಣ ಕರ್ನಾಟಕದ ಬಡವರು ಹೇಗಿದ್ದಾರೆ ಎಂಬ ಕಳಕಳಿ ಇಲ್ಲ; ಸಂಕಷ್ಟದಲ್ಲಿರುವ ಅವರಿಗೆ ಪರಿಹಾರ ಕೊಡಬೇಕೇ? ಎಂಬ ಯೋಚನೆ ಅವರಿಗೆ ಇಲ್ಲ ಎಂದು ದೂರಿದರು.
ಇದನ್ನೂ ಓದಿ:
ಬೆಳಿಗ್ಗೆ ಎದ್ದರೆ ಸಾಕು; ಎಷ್ಟು ದುಡಿಯಬೇಕೆಂದು ಯೋಚಿಸುತ್ತಾರೆ. ವ್ಯಾಪಾರವೇ ಬೇರೆ; ಜನಸೇವೆಯೇ ಬೇರೆ ಎಂಬುದನ್ನು ತಿಳಿದುಕೊಳ್ಳಬೇಕೆಂದು ಹೇಳಿದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಜನರ ಸೇವೆ ಮಾಡುವ ವ್ಯಕ್ತಿಯಾಗಿದ್ದರು. ಅವರು ರಾಜೀನಾಮೆ ಕೊಡಲು ಎರಡು ತಿಂಗಳ ಸಮಯ ಕೇಳಿದ್ದರು ಎಂದು ಹೇಳಿದ್ದಾರೆ.



