ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಜನರಿಗೆ ಸಂಜೆ ಆಗ್ತಿದ್ದಂಗೆ ಟಿವಿ ಮುಂದೆ ಕೂರೋಕೆ ಒಂದು ನೆಪ ಬೇಕು ಅಂದ್ರೆ ಅದು ನಮ್ಮ ‘ಬಿಗ್ ಬಾಸ್’! ಹೌದು, ಪ್ರತಿ ವರ್ಷದಂತೆ ಈ ಬಾರಿಯೂ ನಮ್ಮ ಕನ್ನಡಿಗರ ನೆಚ್ಚಿನ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದೆ. ಈ ಸಲದ ಹವಾ ಮಾಮೂಲಿಯಾಗಿರಲ್ಲ, ಯಾಕಂದ್ರೆ ಶೋನಲ್ಲಿ ಸಕತ್ ಚೇಂಜಸ್ ಇದೆ, ದೊಡ್ಡ ದೊಡ್ಡ ಟ್ವಿಸ್ಟ್‌ಗಳಿವೆ.
ಬಿಗ್ ಬಾಸ್ ಅಂದಮೇಲೆ ಅಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇರ್ಲೇಬೇಕು. ಸತತ 13ನೇ ವರ್ಷವೂ ಕಿಚ್ಚನೇ ಈ ಶೋಗೆ ಬಾಸ್. ವರದಿಗಳ ಪ್ರಕಾರ, ಈ ಸೀಸನ್ ಹೋಸ್ಟ್ ಮಾಡೋಕೆ ಸುದೀಪ್ ಅವರು ಬರೋಬ್ಬರಿ 15 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ಇಡೀ ಸೌತ್ ಇಂಡಿಯಾದಲ್ಲಿ ಒಂದೇ ರಿಯಾಲಿಟಿ ಶೋನ 13 ವರ್ಷ ಸತತವಾಗಿ ನಡೆಸಿಕೊಡ್ತಿರೋ ಹೆಗ್ಗಳಿಕೆ ಸುದೀಪ್‌ಗೆ ಸಲ್ಲುತ್ತೆ. ಶನಿವಾರ, ಭಾನುವಾರ ಪಂಚಾಯಿತಿ ಮಾಡೋಕೆ ಕಿಚ್ಚ ಬಂದ್ರೆ ಸಾಕು, ಟಿವಿ ರೇಟಿಂಗ್ಸ್ ಎಲ್ಲಾ ನೆಕ್ಸ್ಟ್ ಲೆವೆಲ್‌ಗೆ ಹೋಗುತ್ತೆ.
ಹೋದ ಸೀಸನ್‌ನಲ್ಲಿ ಮೈಸೂರು ಅರಮನೆ ಥೀಮ್ ಇಟ್ಟುಕೊಂಡು ಕನ್ನಡಿಗರ ಮನಸ್ಸು ಗೆದ್ದಿದ್ದರು. ಆದ್ರೆ ಈ ಸಲ ಪ್ರಮೋ ನೋಡಿದ್ರೆ ಮೈ ಜುಮ್ ಅನ್ನುತ್ತೆ. ಇಡೀ ಶೋಗೆ ‘ಏವಿಯೇಷನ್’ ಅಂದ್ರೆ ವಿಮಾನದ ಥೀಮ್ ಇಟ್ಟಿದ್ದಾರೆ. ಸುದೀಪ್ ಅವರು ಪೈಲಟ್ ಯೂನಿಫಾರ್ಮ್ ಹಾಕೊಂಡು “ಫ್ಲೈಟ್ ಟೇಕ್ ಆಫ್‌ಗೆ ರೆಡಿ” ಎಂದು ಹೇಳುತ್ತಿರೋದು ವೈರಲ್ ಆಗಿದೆ. ಬಿಗ್ ಬಾಸ್ ಮನೆಯ ಒಳಗಿನ ಇಂಟೀರಿಯರ್ ಕೂಡ ವಿಮಾನದ ಒಳಗಿದ್ದಂತೆಯೇ ಡಿಸೈನ್ ಮಾಡಿದ್ದಾರೆ.
ಈ ಬಾರಿ ಬರಿ ಸೆಲೆಬ್ರಿಟಿಗಳು, ನಟ-ನಟಿಯರಷ್ಟೇ ಅಲ್ಲ, ನಮ್ಮ ನಿಮ್ಮಂಥ ಸಾಮಾನ್ಯ ಜನರಿಗೂ ಬಿಗ್ ಬಾಸ್ ಮನೆಗೆ ಹೋಗೋಕೆ ಸುವರ್ಣ ಅವಕಾಶ ಕೊಟ್ಟಿದ್ದಾರೆ. ಇದಕ್ಕಾಗಿಯೇ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಅನ್ನೋ ಸ್ಪೆಷಲ್ ಸೆಲೆಕ್ಷನ್ ಪ್ರಕ್ರಿಯೆ ನಡೆಸಲಾಗಿತ್ತು. ಆದ್ರೆ, ಈ ಸೆಲೆಕ್ಷನ್ ಫೇರ್ ಆಗಿ ನಡೆದಿಲ್ಲ, ಎಂದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಕಾಂಟ್ರವರ್ಸಿ ಕೂಡ ಶುರುವಾಗಿದೆ. ಏನೇ ಇರಲಿ, ಈ ಗೊಂದಲಗಳ ನಡುವೆಯೂ ಸಾಮಾನ್ಯ ಜನರು ಮನೆಗೆ ಹೋದರೆ ಗದ್ದಲ ಮಾತ್ರ ಗ್ಯಾರಂಟಿ.
ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಲ್ಲಿ ಒಂದಿಷ್ಟು ಹೆಸರುಗಳು ಭಾರಿ ಸೌಂಡ್ ಮಾಡ್ತಿವೆ. ನಂದಗೋಕುಲ ಯಶವಂತ್, ‘ಜಿಮ್ ಸೀನಾ’ ಅಲಿಯಾಸ್ ಸುಶ್ಮಿತ್ ಜೈನ್, ಅಮೋಘ್ ಆದಿತ್ಯ, ಆಸಿಯಾ ಫಿರ್ದೋಸ್, ಗಗನಾ ಮತ್ತು ಅಥರ್ವ್ ಎಸ್ ಅವರ ಹೆಸರುಗಳು ಕಂಟೆಸ್ಟೆಂಟ್ಸ್ ಲಿಸ್ಟ್‌ನಲ್ಲಿ ಮುಂಚೂಣಿಯಲ್ಲಿವೆ. ಆದರೆ ಅಂತಿಮವಾಗಿ ಯಾರು ವಿಮಾನ ಏರ್ತಾರೆ ಅನ್ನೋದು ಇಂದು ಗೊತ್ತಾಗಲಿದೆ.
ಕಿರುತೆರೆಯಲ್ಲಿ ಈ ಧಮಾಕ ನೋಡೋಕೆ ‘ಕಲರ್ಸ್ ಕನ್ನಡ’ ಚಾನೆಲ್ ಟ್ಯೂನ್ ಮಾಡಬೇಕು. ಓಟಿಟಿಯಲ್ಲಿ ನೋಡೋರಿಗೆ ‘ಜಿಯೋಹಾಟ್‌ಸ್ಟಾರ್’ ಇದೆ. ಅಷ್ಟೇ ಅಲ್ಲದೆ, 24 ಗಂಟೆಯೂ ಬಿಗ್ ಬಾಸ್ ಮನೆಯಲ್ಲಿ ಏನೇನ್ ನಡೀತಿದೆ ಎಂದು ಲೈವ್ ಆಗಿ ನೋಡೋಕೆ ಜಿಯೋಹಾಟ್‌ಸ್ಟಾರ್‌ನಲ್ಲಿ ಅವಕಾಶವಿದೆ. ಒಟ್ಟಿನಲ್ಲಿ, ಈ ಸಲದ ಬಿಗ್ ಬಾಸ್ ಸೀಸನ್ 13 ಕನ್ನಡಿಗರಿಗೆ ದೊಡ್ಡ ಮಟ್ಟದ ಎಂಟರ್‌ಟೇನ್‌ಮೆಂಟ್ ಕೊಡೋದಂತೂ ಪಕ್ಕಾ!



