September 7, 2026
Monday, September 7, 2026
spot_img

ಬೆಂಗಳೂರಿನಲ್ಲಿ ಬೀದಿಗಿಳಿಯಲಿರುವ Gen-Z : KPSC ಅಕ್ರಮದ ವಿರುದ್ಧ ಬೃಹತ್‌ ಪ್ರತಿಭಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಯಾರಿಗೇನಾದರೇನು ನಮ್ಮದು ಡೋಂಟ್‌ ಕೇರ್‌ ಅಂತಿದ್ದ ಜನರೇಷನ್‌ ಝೀ ಇದೀಗ ಕೆಪಿಎಸ್‌ಸಿ ಅಕ್ರಮದ ವಿರುದ್ಧ ಹೋರಾಡೋಕೆ ತಯಾರಾಗಿದ್ದಾರೆ. ಹೌದು, ಬೆಂಗಳೂರಿನ ಫ್ರೀಂ ಪಾರ್ಕ್‌ನಲ್ಲಿ ಸೆ. ಒಂಬತ್ತರಂದು Gen Zಗಳು ಕೆಪಿಎಎಸ್‌ಸಿ ಅಕ್ರಮದ ವಿರುದ್ಧ ಬೃಹತ್‌ ಪ್ರತಿಭಟನೆಗೆ ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದಾರೆ.

ಕಷ್ಟಪಟ್ಟು ಓದಿ, ಜೀವನವನ್ನೇ ಓದಿಗೆ ಮುಡಿಪಾಗಿಟ್ಟು, ಮನೆ ಫಂಕ್ಷನ್‌, ಅನಾರೋಗ್ಯ ಎಲ್ಲವನ್ನೂ ಬದಿಗಿಟ್ಟು ಪರೀಕ್ಷೆಗೆ ತಯಾರಾಗಿ ಎಕ್ಸಾಂ ಬರೆಯೋದು ಯಾವ ಲಾಭಕ್ಕೆ? ಅಕ್ರಮ ಮಾಡೋದೇ ಆದರೆ ನಾವು ಅಷ್ಟೆಲ್ಲಾ ಕಷ್ಟಪಟ್ಟಿದ್ದು ವೇಸ್ಟ್‌ ಆಗಿಲ್ವಾ? ಎಂದು Gen Zಗಳು ಪ್ರಶ್ನಿಸಿದ್ದಾರೆ. ಲಕ್ಷಾಂತರ ಮಂದಿ ಈ ಹೋರಾಟಕ್ಕೆ ಕೈ ಜೋಡಿಸುವ ಆಶ್ವಾಸನೆ ನೀಡಿದ್ದು, ಕೆಪಿಎಸ್‌ಸಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆಯಾಗದೇ ನಮ್ಮ ಹೋರಾಟ ನಿಲ್ಲೋದಿಲ್ಲ ಎಂದು ಘೋಷಣೆ ಮಾಡಿದ್ದಾರೆ.

ಪಾರದರ್ಶಕ ಪರೀಕ್ಷೆಯ ಹಕ್ಕಿದೆ

ಪರೀಕ್ಷೆ ಎಂದರೆ ಏನು ಅರ್ಥ? ಎಲ್ಲರಿಗೂ ಅದು ಒಂದೇ ಆಗಿರಬೇಕು, ಹಣವಿದ್ದವರಿಗೆ ಒಂದು ಸೌಕರ್ಯ, ಇಲ್ಲದವರಿಗೆ ಏನೂ ಇಲ್ಲ ಎನ್ನುವ ಈ ಸಿಸ್ಟಮ್‌ ಇಂದೇ ಬದಲಾಗಬೇಕು. ಎಲ್ಲರಿಗೂ ಸಮಾನವಾಗಿ ಪರೀಕ್ಷೆ ನಡೆಸಿ ಲಂಚ ಪಡೆಯದೇ ಕೆಲಸ ನೀಡಬೇಕು. ನ್ಯಾಯಸಮ್ಮತ ಹಾಗೂ ಪಾರದರ್ಶನ ಪರೀಕ್ಷೆ ಹಾಗೂ ಆಯ್ಕೆ ಪ್ರಕ್ರಿಯೆ ನಮ್ಮ ಗುರಿ ಎಂದು ಹೇಳಿದ್ದಾರೆ. ಸರ್ಕಾರಿ ಉದ್ಯೋಗ ಅಂದ್ರೆ ಯಾರಿಗೆ ಇಷ್ಟ ಇರೋದಿಲ್ಲ? ನಮ್ಮ ಭವಿಷ್ಯ ಸೆಟಲ್‌ ಆಗಲಿ ಅನ್ನೋದಕ್ಕೆ ಪರೀಕ್ಷೆ ಬರೆಯಲು ನಾನಾ ಕಷ್ಟಗಳನ್ನು ಅನುಭವಿಸುತ್ತೀವಿ. ಊಟ, ನಿದ್ದೆ, ಸ್ನೇಹಿತರ ಭೇಟಿ, ಟ್ರಿಪ್‌ ಎಲ್ಲವನ್ನೂ ತ್ಯಜಿಸಿ ಪುಸ್ತಕದ ಜೊತೆ ದಿನದ ಎಲ್ಲ ಸಮಯವನ್ನು ಕಳೆಯುತ್ತೇವೆ. ಇಷ್ಟೆಲ್ಲಾ ಶ್ರದ್ಧೆಯಿಂದ ಓದು ನಮಗೆ ಪಾರದರ್ಶಕ ಪರೀಕ್ಷೆಯ ಹಕ್ಕಿದೆ ಎಂದಿದ್ದಾರೆ.

ಮಕ್ಕಳ ಹೋರಾಟಕ್ಕೆ ಪೋಷಕರ ಬೆಂಬಲ

ಹಿಂದೆಲ್ಲಾ ಮಕ್ಕಳು ಪ್ರತಿಭಟನೆಗೆ ಹೋಗುತ್ತೀವಿ ಎಂದು ಹೇಳಿದರೆ ಮಕ್ಕಳು ತಡೆದು ನಿಮ್ಮ ಪಾಡಿಗೆ ನೀವಿರಿ ಎಂದು ಹೇಳುತ್ತಿದ್ದರು. ಆದರೆ Gen Z ಪೋಷಕರು ಹೋರಾಡಿ ಮಕ್ಕಳೇ ನಿಮ್ಮ ಜೊತೆ ನಾವಿದ್ದೇವೆ ಎಂದು ಹೇಳ್ತಿದ್ದಾರೆ. ಪರೀಕ್ಷೆ ಅಟೆಂಡ್‌ ಮಾಡಲು ಮಕ್ಕಳು ಪಟ್ಟ ಕಷ್ಟವನ್ನು ಕಣ್ಣಾರೆ ಕಂಡಿದ್ದೀವಿ. ಒಂದು ಅಕ್ರಮದಿಂದ ಇಡೀ ಪರೀಕ್ಷೆಯೇ ರದ್ದಾಗುತ್ತದೆ. ಇನ್ನೂ ಸಾವಿರಾರು ಸಮಸ್ಯೆಗಳಿವೆ. ಇಡೀ ವ್ಯವಸ್ಥೆಯೇ ಬದಲಾಗಬೇಕು. ಮಕ್ಕಳಿಗೆ ನಾವೂ ಸಾಥ್‌ ನೀಡುತ್ತೇವೆ ಎಂದು ಪೋಷಕರು ಹೇಳಿದ್ದಾರೆ. ಹೀಗಾಗಿ ಸಾವಿರಾರು ಜನರು ಸೆ. ಒಂಬತ್ತರಂದು ಫ್ರೀಡಂ ಪಾರ್ಕ್‌ ಬಳಿ ಜಮಾಯಿಸುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !