ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಎಂದ ತಕ್ಷಣ ನಮಗೆಲ್ಲ ನೆನಪಾಗೋದು ಸಿಕ್ಸರ್, ಫೋರ್‌ಗಳ ಮಳೆ. ಆದರೆ, ಇತ್ತೀಚೆಗೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ತಂದಿರೋ ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮ ಮಾತ್ರ ಮೈದಾನದಲ್ಲಿ ರಿಯಲ್ ‘ಇಂಪ್ಯಾಕ್ಟ್’ ಮಾಡೋ ಬದಲು, ಬೌಲರ್‌ಗಳ ಹೊಟ್ಟೆಗೆ ಹೊಡೆಯುತ್ತಿದೆ ಅನ್ನೋ ಮಾತು ಜೋರಾಗಿದೆ. ಈ ನಿಯಮದ ವಿರುದ್ಧ ಈಗಾಗಲೇ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಗರಂ ಆಗಿದ್ದಾಯ್ತು. ಇದೀಗ ‘ಮಿಸ್ಟರ್ ಐಪಿಎಲ್’ ಅಂತಾನೇ ಫೇಮಸ್ ಆಗಿರೋ ಸುರೇಶ್ ರೈನಾ ಕೂಡ ಧ್ವನಿ ಎತ್ತಿದ್ದಾರೆ.
ರೈನಾ ಮಾತನಾಡಿ. “ಇಂಪ್ಯಾಕ್ಟ್ ಪ್ಲೇಯರ್ ಬರೋಕಿಂತ ಮುಂಚೆ T20ಯಲ್ಲಿ 170 ರನ್ ಹೊಡಿದ್ರೆ ಅದೇ ದೊಡ್ಡ ಟಾರ್ಗೆಟ್ ಆಗಿರ್ತಿತ್ತು. ಆದ್ರೆ ಈಗ 250 ಹೊಡಿದ್ರೂ ಚೇಸ್ ಮಾಡ್ತಾರೆ, ನಾಳೆ ದಿನ 300 ರನ್ ಹೊಡಿದ್ರೂ ಆಶ್ಚರ್ಯವಿಲ್ಲ” ಎಂದು ರೈನಾ ಆತಂಕ ವ್ಯಕ್ತಪಡಿಸಿದ್ದಾರೆ. ತಂಡದಲ್ಲಿ ಒಬ್ಬ ಹೆಚ್ಚುವರಿ ಬ್ಯಾಟರ್ ಇರ್ತಾನೆ ಅನ್ನೋ ಧೈರ್ಯಕ್ಕೆ, ಬ್ಯಾಟರ್‌ಗಳು ಕಣ್ಣು ಮುಚ್ಚಿಕೊಂಡು ಬ್ಯಾಟ್ ಬೀಸ್ತಿದ್ದಾರೆ. ಇದರಿಂದ ಬೌಲರ್‌ಗಳಿಗೆ ವಿಕೆಟ್ ತೆಗೆಯೋಕೆ ಜಾಗನೇ ಇಲ್ಲದಂತಾಗಿ, ಅವರ ತಲೆಯಲ್ಲಿ ರನ್ ಬಿಟ್ಟುಕೊಡಬಾರದು ಅನ್ನೋ ಟೆನ್ಷನ್ ಒಂದೇ ಓಡ್ತಿದೆ ಎಂದು ಹೇಳಿದ್ದಾರೆ.
ಸುರೇಶ್ ರೈನಾ ಅವರಿಗೆ ಮತ್ತೊಂದು ದೊಡ್ಡ ಬೇಸರ ಅಂದ್ರೆ ಆಟಗಾರರ ಫಿಟ್‌ನೆಸ್ ಮತ್ತು ಆಲ್‌ರೌಂಡರ್‌ಗಳ ಅಭಿವೃದ್ಧಿ ಕುಂಠಿತವಾಗುತ್ತಿರೋದು. “ಸೂಪರ್ ಫಿಟ್‌ನೆಸ್ ಇರೋ ಆಟಗಾರರು ಬರಿ ಬ್ಯಾಟಿಂಗ್ ಮಾಡಿ ಪೆವಿಲಿಯನ್‌ನಲ್ಲಿ ಬಂದು ಬೆಂಚ್ ಕಾಯ್ತಿದ್ದಾರೆ. ಫೀಲ್ಡಿಂಗ್ ಮಾಡದೇ ಇದ್ರೆ ಕ್ರಿಕೆಟ್ ಬೆಳವಣಿಗೆ ಹೆಂಗೆ ಸಾಧ್ಯ? ನಾಳೆ ವರ್ಲ್ಡ್ ಕಪ್‌ನಲ್ಲಿ ಇಂತ ರೂಲ್ಸ್ ಇರಲ್ಲ. ಭಾರತಕ್ಕೆ ಒಳ್ಳೆ ಆಲ್‌ರೌಂಡರ್‌ಗಳು ಸಿಗಬೇಕಾದ್ರೆ ಆಟಗಾರರು ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮೂರರಲ್ಲೂ ಸಕ್ರಿಯವಾಗಿರಬೇಕು” ಅನ್ನೋದು ರೈನಾ ಅವರ ನೇರ ಮಾತು.
ಇಂಪ್ಯಾಕ್ಟ್ ಪ್ಲೇಯರ್ ರೂಲ್ ಬೇಡ ಅಂತಿರೋದು ರೈನಾ ಒಬ್ಬರೇ ಅಲ್ಲ. ಈಗಾಗಲೇ ಟೀಮ್ ಇಂಡಿಯಾದ ಹಿಟ್‌ಮ್ಯಾನ್ ರೋಹಿತ್ ಶರ್ಮಾ, ರನ್ ಮೆಷಿನ್ ವಿರಾಟ್ ಕೊಹ್ಲಿ ಮತ್ತು ಆಲ್‌ರೌಂಡರ್ ಅಕ್ಷರ್ ಪಟೇಲ್ ಕೂಡ “ಈ ರೂಲ್‌ನಿಂದ ಕ್ರಿಕೆಟ್‌ನ ಅಸಲಿ ಗಮ್ಮತ್ತು ಹಾಳಾಗ್ತಿದೆ” ಎಂದು ಓಪನ್ ಆಗಿ ಹೇಳಿದ್ದಾರೆ.
ಬ್ಯಾಟಿಂಗ್ ಮತ್ತು ಬೌಲಿಂಗ್ ನಡುವೆ ಒಂದು ಸಮಬಲದ ಪೈಪೋಟಿ ಇದ್ದರೆನೇ ಪಂದ್ಯ ನೋಡೋಕೆ ಮಜಾ. ಆದ್ರೆ ಈಗ ಬರಿ ಬ್ಯಾಟರ್ಸ್‌ಗಳದ್ದೇ ದರ್ಬಾರ್ ನಡೀತಿರೋದ್ರಿಂದ, ಗ್ರೌಂಡ್‌ನಲ್ಲಿ ಕ್ರಿಕೆಟ್‌ನ ಸೌಂದರ್ಯವೇ ಕಾಣೆಯಾಗಿದೆ ಎಂಬುದು ಮಾಜಿ ಹಾಗೂ ಹಾಲಿ ಆಟಗಾರರ ಒಮ್ಮತದ ಅಭಿಪ್ರಾಯ.
ಒಟ್ಟಿನಲ್ಲಿ, ಸಿಕ್ಸರ್-ಬೌಂಡರಿಗಳ ಸುರಿಮಳೆಯಿಂದ ಫ್ಯಾನ್ಸ್‌ಗೆ ಸದ್ಯಕ್ಕೆ ಎಂಟರ್‌ಟೇನ್‌ಮೆಂಟ್ ಸಿಗ್ತಿರಬಹುದು, ಆದ್ರೆ ಲಾಂಗ್ ಟರ್ಮ್‌ನಲ್ಲಿ ಭಾರತೀಯ ಕ್ರಿಕೆಟ್‌ಗೆ ಇದು ಒಳ್ಳೆಯದಲ್ಲ ಅನ್ನೋದು ದಿಗ್ಗಜರ ಗಂಭೀರ ಎಚ್ಚರಿಕೆ. ಚರ್ಚೆಯಲ್ಲಿರೋ ಈ ರೂಲ್‌ನ ಬಿಸಿಸಿಐ ಮುಂದಿನ ಸೀಸನ್‌ನಲ್ಲಾದ್ರೂ ತೆಗೆದುಹಾಕುತ್ತಾ ಎಂದು ಕಾಯ್ದು ನೋಡಬೇಕಿದೆ.



