ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಬಿಗ್‌ಬಾಸ್ ಫೀವರ್ ಆರಂಭವಾಗಿದೆ. ರಾತ್ರಿಯಾದ ನಂತರ ಜನ ಟಿವಿ ಮುಂದಿನ ಚೇರ್‌ಗೆ ಗಮ್ ಹಾಕಿಕೊಂಡು ಕೂರುವ ಸಂದರ್ಭ ಬಂದುಬಿಟ್ಟಿದೆ. ಈ ಬಾರಿಯಾದ್ರೂ ಬಿಗ್‌ಬಾಸ್‌ನಲ್ಲಿ ಸ್ವಲ್ಪ ಜಗಳ ಕಡಿಮೆ ಇರಲಿ ಎಂದು ಅಭಿಮಾನಿಗಳು ಹೇಳ್ತಾ ಇದ್ದಾರೆ. ಆದರೆ ಮನೆಗೆ ಎಂಟ್ರಿ ಕೊಟ್ಟ ಎರಡನೇ ದಿನವೇ ಜಗಳ ಆರಂಭವಾಗಿದೆ. ಸದ್ಯ ಬಿಗ್‌ಬಾಸ್ ಸ್ಪರ್ಧಿಗಳನ್ನು ಫ್ಲೈಟ್‌ನಲ್ಲಿ ಇರಿಸಲಾಗಿದೆ. ಅವರಿಗೆ ಸೀಟ್ ನಂಬರ್‌ಗಳನ್ನು ನೀಡಿದ್ದು, ಅಲ್ಲಿಯೇ ಮಲಗಬೇಕಾಗಿದೆ. ಇದರಿಂದಾಗಿ ಯಾರಿಗೂ ಸರಿಯಾಗಿ ನಿದ್ದೆಯಾಗಿಲ್ಲ. ಇನ್ನು ಸ್ನಾನ ಮಾಡೋದಕ್ಕಾಗಿ ಎಲ್ಲ ಸ್ಪರ್ಧಿಗಳಿಗೆ ಸೇರಿ ಒಂದೂವರೆ ಗಂಟೆಯಷ್ಟು ಸಮಯ ನೀಡಲಾಗಿದೆ.
ಎಲ್ಲರೂ ಸಮಯ ನೋಡಿಕೊಳ್ಳುತ್ತಾ ಸ್ನಾನ ಮಾಡಬೇಕು ಎಂದು ಅಭ್ಯರ್ಥಿಗಳು ತಮ್ಮ ತಮ್ಮಲ್ಲೇ ಮಾತನಾಡಿಕೊಂಡು ಸ್ನಾನಕ್ಕೆ ಹೋಗಿದ್ದಾರೆ. ಆದರೆ ಅಗ್ನಿಪರೀಕ್ಷೆ ಮೂಲಕ ಗೆದ್ದು ಬಂದ ಕಿರಣ್ ಶಾಸ್ತ್ರಿ ಹಾಗೂ ನಟಿ ವೈಷ್ಣವಿ ನಡುವೆ ಜಗಳ ಹತ್ತಿಕೊಂಡಿದೆ. ನಿಗದಿಪಡಿಸಿದ ಸಮಯಕ್ಕಿಂತ ಶಾಸ್ತ್ರಿ ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ. ಉಳಿದವರಿಗೆ ಸ್ನಾನ ಮಾಡೋದಕ್ಕೆ ಟೈಮ್ ಇಲ್ಲ ಎಂದು ಗರಂ ಆಗಿದ್ದಾರೆ.
ಸ್ನಾನಕ್ಕೆ ಯಾರು ಹೋಗಿದ್ದಾರೆ ಎಂದು ವೈಷ್ಣವಿ ಹಲವು ಬಾರಿ ಕೇಳಿದ್ದಾರೆ. ಯಾವಾಗ ಕೇಳಿದರೂ ಕಿರಣ್ ಶಾಸ್ತ್ರಿ ಇನ್ನೂ ಬಂದಿಲ್ಲ ಎಂದು ಇತರೆ ಅಭ್ಯರ್ಥಿಗಳು ಹೇಳಿದ್ದಾರೆ. ಇದರಿಂದ ಗರಂ ಆದ ವೈಷ್ಣವಿ ಸಿಟ್ಟಿನಲ್ಲಿ ಎಷ್ಟೊತ್ತು ಸ್ನಾನ ಮಾಡ್ತೀರ? ಇತರರ ಬಗ್ಗೆ ಸ್ವಲ್ಪನೂ ಕಾಳಜಿ ಇಲ್ವಾ? ಸ್ವಾರ್ಥಿ ಆಗಬಾರದು ಎಂದು ಅವಾಝ್ ಹಾಕಿದ್ದಾರೆ.
ಈ ಹಿಂದೆಯೂ ನಟಿ ವಿನಯಾ ಪ್ರಸಾದ್ ಪುತ್ರಿ ಪ್ರಥಮ ಜೊತೆ ಕಿರಣ್ ಶಾಸ್ತ್ರಿ ಜಟಾಪಟಿ ಮಾಡಿಕೊಂಡಿದ್ದರು. ಬಂದ ಕೆಲ ಕ್ಷಣದಲ್ಲೇ ಪ್ರಥಮ ಅವರನ್ನು ಆನೆ, ಆಂಟಿ ಎಂದೆಲ್ಲಾ ಕೂಗಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಬಾರಿ ನಾಮಿನೇಷನ್‌ನಲ್ಲಿ ಕಿರಣ್ ಶಾಸ್ತ್ರಿ ಹೆಸರಿರೋದು ಪಕ್ಕಾ ಅನ್ನೋದು ಪ್ರೇಕ್ಷಕರ ಲೆಕ್ಕಾಚಾರವಾಗಿದೆ. ಇದು ನಿಜವಾ ಇಲ್ವಾ? ಕಾಲವೇ ಹೇಳಬೇಕಿದೆ.



