September 28, 2026
Monday, September 28, 2026
spot_img

ವಾಲ್ಮೀಕಿ ಹಗರಣ: 5 ಗಂಟೆಗಳ ED ವಿಚಾರಣೆ ಬಳಿಕ ‘ನನ್ನ ಪಾತ್ರ ಏನೂ ಇಲ್ಲ’ ಎಂದ ಬಿ. ನಾಗೇಂದ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ED ಅಧಿಕಾರಿಗಳು ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಬರೋಬ್ಬರಿ 5 ಗಂಟಿಗಳ ಕಾಲ ವಿಚಾರಣೆ ಮಾಡಿದ್ದಾರೆ.

ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿ. ನಾಗೇಂದ್ರ, ಕಳೆದ ಬಾರಿ ಸಮನ್ಸ್ ನೀಡಿದ್ದರೂ ವಿಚಾರಣೆಗೆ ಬರಲು ಸಾಧ್ಯವಾಗಿಲ್ಲಮ, ಅದಕ್ಕೆ ಈಗ ಬಂದು ಉತ್ತರ ಕೊಟ್ಟಿದ್ದೇನೆ,ಇನ್ನೊಮ್ಮೆ ಕರೆದರೆ ಖಂಡಿತ ಬರುತ್ತೇನೆ ಎಂದರು.

ಇದನ್ನೂ ಓದಿ:

ನನ್ನ ಪಾತ್ರ ಇಲ್ಲ

ವಾಲ್ಮೀಕಿ ನಿಗಮದ ಹಣ ಅಕ್ರಮವಾಗಿ ವರ್ಗಾವಣೆಯಾದ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ನಾಗೇಂದ್ರ ಸ್ಪಷ್ಟಪಡಿಸಿದರು. ‘ಇದು ಬ್ಯಾಂಕ್‌ ವಂಚನೆ ಪ್ರಕರಣವಾಗಿದ್ದು, ಯೂನಿಯನ್ ಬ್ಯಾಂಕ್‌ನವರಿಂದ ಆಗಿರುವ ಕೆಲಸ’ ಎಂದು ಅವರು ಆರೋಪಿಸಿದರು.

ರಾಜಕೀಯ ಕಾರಣಕ್ಕಾಗಿ ತಮ್ಮ ಮೇಲೆ ಆರೋಪ ಮಾಡಲಾಗಿದೆ. ಜತೆಗೆ ತಮ್ಮ ಸಚಿವ ಸ್ಥಾನಕ್ಕೆ ನೀಡಿದ ರಾಜೀನಾಮೆಯೂ ಪಕ್ಷದ ಹಿತದೃಷ್ಟಿಯಿಂದ ಸ್ವಯಂಪ್ರೇರಿತವಾಗಿ ಕೈಗೊಂಡ ನಿರ್ಧಾರವಾಗಿತ್ತು ಎಂದು ನಾಗೇಂದ್ರ ಹೇಳಿದರು.

Must Read