ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೀತು ಮೋಹನ್‌ದಾಸ್ ನಿರ್ದೇಶನ ಮಾಡಿರುವ ಟಾಕ್ಸಿಕ್ ಸಿನಿಮಾ ಸದ್ಯ ಥಿಯೇಟರ್‌ನಲ್ಲಿದೆ. ರಿಲೀಸ್‌ಗೂ ಮುನ್ನ ಭಾರೀ ಹೈಪ್ ಸೃಷ್ಟಿಸಿದ್ದ ಚಿತ್ರವನ್ನು ನೋಡೋಕೆ ಜನ ಮೊದಮೊದಲು ಮುಗಿಬಿದ್ದು ಹೋಗಿದ್ದರು. ಆದರೆ ಕಾಲಕ್ರಮೇಣ ಸಿನಿಮಾ ಕ್ರೇಝ್ ಕಡಿಮೆ ಆಗಿದೆ. ನೆಗೆಟಿವ್ ವಿಮರ್ಶೆಗಳ ಹೊಡೆತಕ್ಕೆ ಸಿಕ್ಕ ಟಾಕ್ಸಿಕ್ ಈವರೆಗೂ 337 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕಲೆಕ್ಷನ್ ಡಲ್ ಆಗುತ್ತಾ ಹೋದರೆ ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗೋದು ಗ್ಯಾರಂಟಿ ಎನ್ನಲಾಗಿದೆ.
ಸಿನಿಮಾ ರಿಲೀಸ್‌ಗೂ ಮುನ್ನ ಝೀ 5 ಟಾಕ್ಸಿಕ್ ಒಟಿಟಿ ರೈಟ್ಸ್ 100 ಕೋಟಿ ರೂಪಾಯಿಗೆ ಕೇಳಿತ್ತು. ಆದರೆ ಸಿನಿಮಾ ತಂಡ ಅಷ್ಟು ಕಮ್ಮಿಗೆ ಕೊಡೋದಿಲ್ಲ. 200 ಕೋಟಿ ರೂಪಾಯಿ ಕೊಡಿ ಎಂದು ಡಿಮ್ಯಾಂಡ್ ಇಟ್ಟಿದ್ದರು ಎನ್ನಲಾಗಿದೆ. ಸಿನಿಮಾ ರಿಲೀಸ್ ಆಗಿ ಗ್ರೇಟ್ ಹಿಟ್ ಆದರೆ ಇನ್ನಷ್ಟು ಲಾಭ ಪಡೆಯಬಹುದು ಎಂದು ತಂಡ ನಿರ್ಧರಿಸಿತ್ತು. ಆದರೆ ಇದೀಗ ಎಲ್ಲವೂ ಉಲ್ಟಾ ಆಗಿದೆ. ಸಿನಿಮಾ ಬಗ್ಗೆ ಇನ್ನಷ್ಟು ನೆಗೆಟಿವಿಟಿ ಹರಡುವ ಮುನ್ನ ಚಿತ್ರತಂಡ ಒಟಿಟಿ ಹಕ್ಕನ್ನು ಬರೀ 30 ಕೋಟಿ ರೂಪಾಯಿಗೆ ಝೀ5 ಗೆ ಮಾರಾಟ ಮಾಡಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಿನಿಮಾ ರಿಲೀಸ್‌ಗೂ ಮುನ್ನವೇ ರೈಟ್ಸ್ ಬಿಟ್ಟುಕೊಟ್ಟಿದ್ದರೆ ಇನ್ನೂ 70 ಕೋಟಿ ಲಾಭ ಆಗಿರೋದು ಎಂದು ಜನ ಕಮೆಂಟ್ ಮಾಡ್ತಿದ್ದಾರೆ. ಎರಡು ನಿಮಿಷಕ್ಕೆ ಒಂದು ಫೈಟ್, 15 ನಿಮಿಷಕ್ಕೆ ಒಂದು ರೊಮ್ಯಾನ್ಸ್ ಇದ್ದರೆ ಕಥೆ ಹೇಳೋಕೆ ಟೈಮ್ ಎಲ್ಲಿದೆ. ಇವುಗಳಿಗೆ ಸ್ವಲ್ಪ ಕತ್ತರಿ ಹಾಕಿ ಕಥೆ ಬಗ್ಗೆ ಫೋಕಸ್ ಮಾಡ್ಬೇಕಿತ್ತು ಎಂದು ಅಭಿಮಾನಿಗಳು ಹೇಳ್ತಿದ್ದಾರೆ.
https://www.instagram.com/p/Dc-7ni0BVOe/?stkn=M20yYXB3YnFvNmI4



