September 8, 2026
Tuesday, September 8, 2026
spot_img

ವಡೋದರಾದಲ್ಲಿ ಪ್ರಧಾನಿ ಮೋದಿ: 35,000 ಕೋಟಿ ವೆಚ್ಚದ ಬೃಹತ್ ಯೋಜನೆಗಳಿಗೆ ಶಂಕುಸ್ಥಾಪನೆ, ವಿಪಕ್ಷಗಳ ವಿರುದ್ಧ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದ ಆರ್ಥಿಕತೆ ಮತ್ತು ಸಾರಿಗೆ ರಂಗದ ಚಿತ್ರಣವನ್ನೇ ಬದಲಿಸಬಲ್ಲ 35,000 ಕೋಟಿಗೂ ಹೆಚ್ಚಿನ ಮೊತ್ತದ ಬೃಹತ್ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ವಡೋದರಾದಲ್ಲಿ ಚಾಲನೆ ನೀಡಿದ್ದಾರೆ. ಈ ಮಹಾ ಯೋಜನೆಯ ಅಡಿಯಲ್ಲಿ ಭಾರತೀಯ ರೈಲ್ವೆಯ ಮಹತ್ವಾಕಾಂಕ್ಷೆಯ ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್‌ನ ಮೂರು ಪ್ರಮುಖ ರೈಲ್ವೆ ಮಾರ್ಗಗಳನ್ನು ದೇಶಕ್ಕೆ ಸಮರ್ಪಿಸಲಾಗಿದೆ.

ಇದರೊಂದಿಗೆ ರಾಜ್ಯದ ಸಾರಿಗೆ ಸಂಪರ್ಕವನ್ನು ಮತ್ತಷ್ಟು ಗಟ್ಟಿಗೊಳಿಸುವ ಹಲವು ರಾಷ್ಟ್ರೀಯ ಹೆದ್ದಾರಿ ಯೋಜನೆಗಳು, ನೂತನ ರೈಲು ಸೇವೆಗಳು ಮತ್ತು ಗುಜರಾತ್ ಸರ್ಕಾರದ ವಿವಿಧ ಜನಪರ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಯೋಜನೆಗಳು ಭಾರತದ ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕಾ ವಲಯಕ್ಕೆ ಅಭೂತಪೂರ್ವ ವೇಗವನ್ನು ನೀಡಲಿವೆ ಎಂದು ತಿಳಿಸಿದ್ದಾರೆ.

ಗುಜರಾತ್‌ನ ವಡೋದರಾದಲ್ಲಿ ನಡೆದ ‘ನಮೋ ಫಾರ್ ವಿಕ್ಷಿತ್ ಭಾರತ್’ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದ ಸಾರಿಗೆ ರಂಗದಲ್ಲಿ ಮಹತ್ತರ ಬದಲಾವಣೆ ತಂದಿರುವ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ವಿರೋಧ ಪಕ್ಷಗಳನ್ನು ‘ನಾರಾಜ್ ಫೂಫಾ’ಎಂದು ತಮಾಷೆಯಾಗಿ ಕಾಲೆಳೆದರು.

ವಿರೋಧ ಪಕ್ಷಗಳ ವಿರುದ್ಧ ವ್ಯಂಗ್ಯ

ಗೂಡ್ಸ್ ರೈಲುಗಳ ವೇಗ ಮತ್ತು ಸಾಮರ್ಥ್ಯದ ಬಗ್ಗೆ ಮಾತನಾಡಿದ ಪ್ರಧಾನಿ, ವಿರೋಧ ಪಕ್ಷಗಳ ಟೀಕೆಗಳ ಬಗ್ಗೆ ಲೇವಡಿ ಮಾಡಿದ್ದಾರೆ. ನಮ್ಮ ದೇಶದ ಈ ಪ್ರಗತಿಯನ್ನು ನೋಡಿ ನಮ್ಮ ‘ನಾರಾಜ್ ಫೂಫಾಜಿ’ ತಕ್ಷಣವೇ ಗೊಣಗಲು ಶುರು ಮಾಡುತ್ತಾರೆ. ‘ಹಾಗಾದರೆ ಟ್ರಕ್ ಡ್ರೈವರ್‌ಗಳ ಗತಿ ಏನು? ಆ ಟ್ರಕ್‌ಗಳೆಲ್ಲಾ ಎಲ್ಲಿಗೆ ಹೋಗಬೇಕು? ಹೊಸದಾಗಿ ಟ್ರಕ್ ಕೊಂಡವರ ಕಥೆ ಏನು?’ ಎಂದು ಪ್ರಶ್ನೆ ಮಾಡುತ್ತಾರೆ. ಸದ್ಯಕ್ಕಂತೂ ಅವರಿಗೆ ದೂರು ನೀಡಲು ಒಂದು ಹೊಸ ವಿಷಯ ಸಿಕ್ಕಂತಾಗಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

2014 ರ ಮೊದಲು ಒಂದು ಕಿ.ಮೀ ಕೆಲಸವೂ ಆಗಿರಲಿಲ್ಲ

ಹಳೆಯ ಸರ್ಕಾರದ ವೈಫಲ್ಯವನ್ನು ನೆನಪಿಸಿದ ಪ್ರಧಾನಿ ಮೋದಿ, 2014 ರಲ್ಲಿ ನೀವು ನನ್ನನ್ನು ದೆಹಲಿಗೆ ಕಳುಹಿಸುವ ಮುನ್ನ 7 ರಿಂದ 8 ವರ್ಷಗಳ ಕಾಲ ಹಿಂದಿನ ಸರ್ಕಾರ ಅಧಿಕಾರದಲ್ಲಿತ್ತು. ಆದರೆ ಆ ಇಡೀ ಅವಧಿಯಲ್ಲಿ ಈ ಫ್ರೈಟ್ ಕಾರಿಡಾರ್ ಯೋಜನೆಯ ಒಂದು ಕಿಲೋಮೀಟರ್ ಕಾಮಗಾರಿಯನ್ನೂ ಪೂರ್ಣಗೊಳಿಸಲು ಅವರಿಂದ ಸಾಧ್ಯವಾಗಿರಲಿಲ್ಲ. ಅವರ ವೇಗದಲ್ಲೇ ದೇಶ ನಡೆದಿದ್ದರೆ, ಮುಂದಿನ ಮೂರ್ನಾಲ್ಕು ತಲೆಮಾರುಗಳಾದರೂ ಈ ಕೆಲಸ ಮುಗಿಯುತ್ತಿರಲಿಲ್ಲ. 2014 ರ ನಂತರ ನಾನು ಗುಜರಾತ್ ಭೂಮಿಯಲ್ಲಿ ಕಲಿತ ಪಾಠ ಮತ್ತು ತರಬೇತಿಯನ್ನು ದೆಹಲಿಗೆ ಕೊಂಡೊಯ್ದು, ಈ ಯೋಜನೆಗೆ ರಾಕೆಟ್ ವೇಗ ನೀಡಿದೆ ಎಂದರು.

ಲಾರಿ ಪ್ರಯಾಣ ಈಗ ಜಸ್ಟ್ 12 ಗಂಟೆ

ಪ್ರಸ್ತುತ ದೇಶಾದ್ಯಂತ 2,800 ಕಿಲೋಮೀಟರ್ ಉದ್ದದ ವಿಶೇಷ ಕಾರಿಡಾರ್ ಕಾಮಗಾರಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಪ್ರತಿದಿನ 430ಕ್ಕೂ ಹೆಚ್ಚು ಸರಕು ರೈಲುಗಳು ಸಂಚರಿಸುತ್ತಿವೆ. ಈ ಹಿಂದೆ 100 ಕಿಲೋಮೀಟರ್ ಚಲಿಸಲು 6.5 ಗಂಟೆ ತೆಗೆದುಕೊಳ್ಳುತ್ತಿದ್ದ ಸರಕು ರೈಲುಗಳು, ಈಗ ಕೇವಲ ಮೂರು ಗಂಟೆಯೊಳಗೆ ತಲುಪುತ್ತಿವೆ. ಸಾಮಾನ್ಯವಾಗಿ ಲಾರಿ ಅಥವಾ ಟ್ರಕ್‌ಗಳಲ್ಲಿ ಸರಕು ಸಾಗಿಸಲು 30 ಗಂಟೆ ಬೇಕಾಗುತ್ತಿದ್ದ ಜಾಗಕ್ಕೆ, ಇನ್ಮುಂದೆ ಈ ರೈಲ್ವೆ ಕಾರಿಡಾರ್ ಮೂಲಕ ಕೇವಲ 10 ರಿಂದ 12 ಗಂಟೆಗಳಲ್ಲಿ ತಲುಪಬಹುದು. ಇದರಿಂದ ಇಂಧನ ಉಳಿತಾಯವಾಗುವುದಲ್ಲದೆ, ಸಾರಿಗೆ ವೆಚ್ಚವೂ ತಗ್ಗಿಲಿದೆ ಎಂದು ತಿಳಿಸಿದರು.

ಇದನ್ನೂ ಓದಿ:

‘ಉಚಿತ ಆನ್‌ಲೈನ್ ಕೋಚಿಂಗ್’

ಇದೇ ಸಮಾವೇಶದಲ್ಲಿ ಪ್ರಧಾನಿ ಮೋದಿ ದೇಶದ ಯುವಕರಿಗೆ ಮತ್ತೊಂದು ಭರ್ಜರಿ ಸಿಹಿ ಸುದ್ದಿ ನೀಡಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಆರ್ಥಿಕ ಹೊರೆಯನ್ನು ತಗ್ಗಿಸಲು, ದೇಶದ ಅತ್ಯುತ್ತಮ ಶಿಕ್ಷಕರಿಂದ ಸಂಪೂರ್ಣ ಉಚಿತ ಆನ್‌ಲೈನ್ ಕೋಚಿಂಗ್ ಸಿಸ್ಟಮ್ನೀಡಲು ಸರ್ಕಾರ ಮುಂದಾಗಿದ್ದು, ಇನ್ಮುಂದೆ ಯುವಕರ ಕೋಚಿಂಗ್ ಜವಾಬ್ದಾರಿಯನ್ನು ಸರ್ಕಾರವೇ ಹೊರಲಿದೆ ಎಂದು ಪ್ರಧಾನಿ ಭರವಸೆ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !