Sunday, September 14, 2025

ಸ್ಪೀಡ್ ಪೋಸ್ಟ್, ರಿಜಿಸ್ಟರ್ ಸಹಿತ ಎಲ್ಲವೂ ಆನ್ ಲೈನ್: ಅಂಚೆ ಕಚೇರಿಯ ಡಿಜಿಟಲ್ ವ್ಯವಸ್ಥೆಗೆ ವಿಜಯಪುರ ಜಿಲ್ಲೆಯ ಜನತೆ ಖುಷ್!


ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಸುಸ್ಥಿರ ಮತ್ತು ಸುರಕ್ಷಿತ ಡಿಜಿಟಲ್ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಡಿಜಿಟಲ್ ಇಂಡಿಯಾ ಅಭಿಯಾನ ವಿಜಯಪುರ ಜಿಲ್ಲೆಯಲ್ಲಿ ಯಶಸ್ವಿಯಾಗಿ ಜಾರಿಗೊಂಡಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.


ಈ ಬಗ್ಗೆ ಮಾತನಾಡಿದ ಪ್ರಧಾನ ಅಂಚೆಪಾಲಕ ಜಿ‌.ಬಿ. ಚಕ್ರಸಾಲಿ, ಅಂಚೆ ಇಲಾಖೆಯಲ್ಲಿ ಸಂಪೂರ್ಣವಾಗಿ ಡಿಜಿಟಲ್ ಮೂಲಕ ವ್ಯವಹಾರ ಮಾಡಲಾಗತ್ತೆ. ಸ್ಪೀಡ್ ಪೋಸ್ಟ್, ರಿಜಿಸ್ಟರ್ ಸೇರಿದಂತೆ ಎಲ್ಲವೂ ಆನ್ ಲೈನ್ ಮೂಲಕ‌ ಮಾಡಲಾಗಿದೆ ಎಂದಿದ್ದಾರೆ. ಸಿಬ್ಬಂದಿ ಜಗನ್ನಾಥ್ ದೇಸಾಯಿ ಮಾತನಾಡಿ ಅಂಚೆ ಕಚೇರಿ ಡಿಜಿಟಲೀಕರಣ ಗೊಂಡಿರುವುದು ಗ್ರಾಮೀಣ ಭಾಗದ ಜನರಿಗೆ ತುಂಬಾ ಅನುಕೂಲಕರವಾಗಿದೆ. ಪಿಎಂ ಕಿಸಾನ್, ವೃದ್ಯಾಪ ವೇತನ, ಅಂಗವಿಕಲರ ವೇತನ ನೇರವಾಗಿ ಅಕೌಂಟ್ ಗೆ ಜಮೆ ಆಗಲಿದೆ ಎಂದು ಅಭಿಪ್ರಾಯಿಸಿದ್ದಾರೆ.


ಡಿಜಿಟಲ್ ಇಂಡಿಯಾವು ಸರ್ಕಾರಿ ಸೇವೆಗಳನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸುವುದು, ಆನ್‌ ಲೈನ್ ಶಿಕ್ಷಣ ಮತ್ತು ಕೌಶಲ್ಯಗಳ‌ ವಿಸ್ತರಣೆ, ಉದ್ಯೋಗ ಸೃಷ್ಟಿ ಉದ್ದೇಶ ಹೊಂದಿದೆ. ಇದು ಪಾರದರ್ಶಕತೆ, ವೇಗವಾದ ವಹಿವಾಟುಗಳು ಮತ್ತು ಸುರಕ್ಷಿತ ಡಿಜಿಟಲ್ ಸಂಪರ್ಕ ಒದಗಿಸಲು ನೆರವಾಗುತ್ತದೆ. ಇದರಿಂದಾಗಿ ಭೌತಿಕ ದಾಖಲೆ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುತ್ತದೆ. ಎಲ್ಲಾ ಸರ್ಕಾರಿ ಸೇವೆಗಳನ್ನು ಆನ್‌ ಲೈನ್ ಮೂಲಕ ಸುಲಭವಾಗಿ ಪಡೆಯಬಹುದು, ಇದರಿಂದಾಗಿ ನಾಗರಿಕರಿಗೆ ಸಮಯ ಮತ್ತು ಶ್ರಮದ ಉಳಿತಾಯವಾಗುತ್ತದೆ. ಜಿಲ್ಲೆಯ ಅಂಚೆ ಕಚೇರಿಯಲ್ಲಿಯೂ ಡಿಜಿಟಲ್ ವ್ಯವಸ್ಥೆಯನ್ನು ಅಳವಡಿಸಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ಇದನ್ನೂ ಓದಿ