ಇಡ್ಲಿ, ದೋಸೆ, ಉಪ್ಪಿಟ್ಟು ತಿಂದು ಬೋರ್ ಆಗಿದ್ರೆ, ನಿಮಗಾಗಿ ಇಲ್ಲಿದೆ ಒಂದು ಸೂಪರ್, ಹೆಲ್ದಿ ಮತ್ತೆ ಟೇಸ್ಟಿ ರಾಗಿ ಚಿಲ್ಲಾ!
ರಾಗಿ ಹಿಟ್ಟು
ಕಡಲೆ ಹಿಟ್ಟು
ಮೊಸರು
ಈರುಳ್ಳಿ
ಟೊಮೆಟೊ
ಹಸಿಮೆಣಸಿನಕಾಯಿ
ಕ್ಯಾರೆಟ್ ತುರಿ
ಕೊತ್ತಂಬರಿ ಸೊಪ್ಪು
ಜೀರಿಗೆ
ಉಪ್ಪು
ಎಣ್ಣೆ
ನೀರು
ಮೊದಲು ಒಂದು ಬೌಲ್ ತಗೊಳ್ಳಿ. ಅದಕ್ಕೆ ರಾಗಿ ಹಿಟ್ಟು ಮತ್ತು ಕಡಲೆ ಹಿಟ್ಟು ಹಾಕಿ ಮಿಕ್ಸ್ ಮಾಡಿ. ನಂತರ ಮೊಸರು, ಉಪ್ಪು, ಜೀರಿಗೆ ಹಾಕಿ. ಈಗ ಹೆಚ್ಚಿಟ್ಟುಕೊಂಡ ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ, ಕ್ಯಾರೆಟ್ ತುರಿ ಮತ್ತೆ ಕೊತ್ತಂಬರಿ ಸೊಪ್ಪನ್ನು ಹಿಟ್ಟಿಗೆ ಹಾಕಿ. ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ದೋಸೆ ಹಿಟ್ಟಿಗಿಂತ ಸ್ವಲ್ಪ ತೆಳ್ಳಗೆ ಕಲಸಿಕೊಳ್ಳಿ. ಗಂಟಿಲ್ಲದೆ ನೀಟಾಗಿ ಮಿಕ್ಸ್ ಮಾಡಿ. ಹಿಟ್ಟು ತುಂಬಾ ಗಟ್ಟಿಯೂ ಇರಬಾರದು, ನೀರಾಗಿಯೂ ಇರಬಾರದು. 5 ನಿಮಿಷ ಹಾಗೆಯೇ ಮುಚ್ಚಿಡಿ. ಈಗ ಒಲೆ ಮೇಲೆ ತವಾ ಇಟ್ಟು ಬಿಸಿ ಮಾಡಿ. ತವಾ ಬಿಸಿಯಾದ ಮೇಲೆ ಸ್ವಲ್ಪ ಎಣ್ಣೆ ಸವರಿ. ಒಂದು ಸೌಟು ಹಿಟ್ಟು ತಗೊಂಡು ತವಾ ಮೇಲೆ ಹಾಕಿ, ದೋಸೆಯಂತೆ ಹರಡಿ.
ಸುತ್ತಲೂ ಸ್ವಲ್ಪ ಎಣ್ಣೆ ಹಾಕಿ. ಉರಿಯನ್ನು ಮೀಡಿಯಂನಲ್ಲಿಟ್ಟು ಮುಚ್ಚಳ ಮುಚ್ಚಿ 2 ನಿಮಿಷ ಬೇಯಿಸಿ. ಕೆಳಗಡೆ ಚೆನ್ನಾಗಿ ಬೆಂದ ಮೇಲೆ ಮಗುಚಿ ಹಾಕಿ, ಇನ್ನೊಂದು ಬದಿ ಕೂಡ 1-2 ನಿಮಿಷ ಬೇಯಿಸಿ.
ಅಷ್ಟೇ.. ಬಿಸಿಬಿಸಿಯಾದ ರಾಗಿ ಚಿಲ್ಲಾ ರೆಡಿ!



