ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ರಿಟನ್‌ನಾದ್ಯಂತ ವಾಯು ಸಂಚಾರ ನಿಯಂತ್ರಣ ದೋಷದಿಂದಾಗಿ ಬರೋಬ್ಬರಿ ಒಂದು ಸಾವಿರಕ್ಕೂ ಅಧಿಕ ವಿಮಾನಗಳು ರದ್ದಾಗಿವೆ.
ವಾಯು ನಿಯಂತ್ರಣ ಸಮಸ್ಯೆಯಿಂದಾಗಿ ಪ್ರಯಾಣಿಕರು ವಿಮಾನ ನಿಲ್ದಾಣದ ರನ್‌ವೇಗಳು ಮತ್ತು ಟರ್ಮಿನಲ್‌ಗಳಲ್ಲಿ ಗಂಟೆಗಟ್ಟಲೆ ಸಿಲುಕಿಕೊಂಡಿದ್ದಾರೆ ಎಂದು ಫ್ಲೈಟ್-ಟ್ರ್ಯಾಕಿಂಗ್ ವೆಬ್‌ಸೈಟ್ ಫ್ಲೈಟ್‌ರಾಡರ್ 24 ತಿಳಿಸಿದೆ. ಪ್ರಯಾಣಿಕರು ಏರ್‌ಪೋರ್ಟ್‌ಗೆ ಆಗಮಿಸಿ ಪ್ರೋಸೆಸ್‌ಗಳನ್ನು ಮುಗಿಸಿ ವಿಮಾನಕ್ಕಾಗಿ ಕಾಯುವ ವೇಳೆ ರದ್ದಾಗಿರುವ ಸುದ್ದಿ ತಿಳಿದುಬಂದಿದೆ. ಏರ್‌ಪೋರ್ಟ್‌ನಲ್ಲಿ ಒಟ್ಟಾರೆ ಸಾವಿರಾರು ಮಂದಿ ಇದ್ದು, ಅಲ್ಲಿಂದ ಹೊರಕ್ಕೆ ಬರುವುದೇ ಕಷ್ಟವಾಗಿತ್ತು ಎಂದು ಪ್ರಯಾಣಿಕರು ಹೇಳಿದ್ದಾರೆ.
ಬ್ರಿಟನ್‌ನ ರಾಷ್ಟ್ರೀಯ ವಾಯು ಸಂಚಾರ ಸೇವೆಗಳು, ತನ್ನ ವಿಮಾನ ಸಂಸ್ಕರಣಾ ವ್ಯವಸ್ಥೆಯಲ್ಲಿನ ಸಮಸ್ಯೆಯನ್ನು ಸಂಜೆ ಪರಿಹರಿಸಿರುವುದಾಗಿ ತಿಳಿಸಿವೆ. ಜೋಸಿ ಡೊನೊಘ್ಯೂ ಐರ್ಲೆಂಡ್‌ಗೆ ಹೋಗುವ ರಯಾನ್ಏರ್ ವಿಮಾನ ರದ್ದಾಗುವ ಮೊದಲು ಗ್ಯಾಟ್ವಿಕ್ ವಿಮಾನದಲ್ಲಿ ಮೂರು ಗಂಟೆಗಳ ಕಾಲ ಪ್ರಯಾಣಿಕರು ಸಿಲುಕಿಕೊಂಡಿದ್ದರು ಎನ್ನಲಾಗಿದೆ.



