ಬಿಸಿ ಬಿಸಿ, ಗರಂ ಗರಂ ಮೇಥಿ ಪರಾಠ ಮಾಡೋದು ಹೇಗೆ?
- ಗೋಧಿ ಹಿಟ್ಟು
- ಮೆಂತ್ಯ ಸೊಪ್ಪು
- ಹಸಿಮೆಣಸಿನಕಾಯಿ
- ಶುಂಠಿ-ಬೆಳ್ಳುಳ್ಳಿ ಪೇಸ್ಟ್
- ಖಾರದ ಪುಡಿ
- ಜೀರಿಗೆ
- ಅರಿಶಿನ ಪುಡಿ
- ಅಜವೈನ
- ಮೊಸರು
- ಎಣ್ಣೆ ಅಥವಾ ತುಪ್ಪ
- ಉಪ್ಪು
ಮೊದಲಿಗೆ ಮೆಂತ್ಯ ಸೊಪ್ಪನ್ನು ಚೆನ್ನಾಗಿ ತೊಳೆದು, ನೀರೆಲ್ಲಾ ಬಸಿದು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಒಂದು ಪಾತ್ರೆಗೆ ಗೋಧಿ ಹಿಟ್ಟು ಹಾಕಿ. ಅದಕ್ಕೆ ಹೆಚ್ಚಿದ ಮೆಂತ್ಯ ಸೊಪ್ಪು, ಹಸಿಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಜೀರಿಗೆ, ಅರಿಶಿನ, ಅಜವೈನ, ರುಚಿಗೆ ತಕ್ಕಷ್ಟು ಉಪ್ಪು ಮತ್ತು 2 ಚಮಚ ಮೊಸರು ಸೇರಿಸಿ. ನೀರು ಹಾಕುವ ಮುನ್ನವೇ ಹಿಟ್ಟು ಮತ್ತು ಮಸಾಲೆಗಳನ್ನು ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿ. ಮೊಸರು ಮತ್ತು ಸೊಪ್ಪಿನ ತೇವಾಂಶದಿಂದ ಹಿಟ್ಟು ಮೃದುವಾಗುತ್ತದೆ. ಈಗ ಸ್ವಲ್ಪ ಸ್ವಲ್ಪವೇ ನೀರು ಚಿಮುಕಿಸುತ್ತಾ ಹಿಟ್ಟನ್ನು ಚಪಾತಿ ಹಿಟ್ಟಿಗಿಂತ ಸ್ವಲ್ಪ ಮೃದುವಾಗಿ ನಾದಿಕೊಳ್ಳಿ. ಕೊನೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ, 15 ನಿಮಿಷ ಮುಚ್ಚಿಡಿ. ಕಲಸಿದ ಹಿಟ್ಟಿನಿಂದ ಮಧ್ಯಮ ಗಾತ್ರದ ಉಂಡೆಗಳನ್ನು ಮಾಡಿ. ಸ್ವಲ್ಪ ಹಿಟ್ಟು ಉದುರಿಸಿ, ಚಪಾತಿಯಂತೆ ಲಟ್ಟಿಸಿಕೊಳ್ಳಿ. ಕಾದ ಹೆಂಚಿನ ಮೇಲೆ ಲಟ್ಟಿಸಿದ ಪರೋಠಾ ಹಾಕಿ. ಎರಡೂ ಕಡೆ ಸ್ವಲ್ಪ ಬೆಂದ ಮೇಲೆ ಮೇಲಿಂದ ತುಪ್ಪ ಅಥವಾ ಎಣ್ಣೆ ಹಾಕಿ. ಸಣ್ಣ ಉರಿಯಲ್ಲಿ ತಿರುಗಿಸಿ ಬೇಯಿಸಿ.
ಈಗ ಬಿಸಿ ಬಿಸಿಯಾದ, ಘಮಘಮಿಸುವ ಮೇಥಿ ಪರಾಠ ರೆಡಿ!



