September 10, 2026
Thursday, September 10, 2026
spot_img

ಕೋಟಿ ಕೋಟಿ ದುಡ್ಡಿದ್ರೂ ಸಿಗದ ಶಾಂತಿ ಕೈಂಚಿ ಧಾಮದಲ್ಲಿ ಸಿಗುತ್ತೆ: ಏನಿದು ನೀಮ್ ಕರೋಲಿ ಬಾಬಾರ ಚಮತ್ಕಾರ?

ಸಿನಿಮಾ ಥಿಯೇಟರ್‌ನಲ್ಲಿ ‘ಹನುಮಾನ್ ಅಂಶ್’ ಅನ್ನೋ ಸಿನಿಮಾ 120 ಕೋಟಿ ರೂಪಾಯಿ ಬಾಚಿ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸ್ತಿದೆ. “ಏನಪ್ಪಾ ಇದು, ಒಬ್ಬ ಸನ್ಯಾಸಿ ಮೇಲೆ ಸಿನಿಮಾ ಮಾಡಿದ್ರೆ ಜನ ಇಷ್ಟೊಂದು ಮುಗಿಬಿದ್ದು ನೋಡ್ತಿದ್ದಾರಲ್ಲ” ಎಂದು ನಿಮಗನ್ನಿಸಬಹುದು. ಆದ್ರೆ, ಈ ಸಿನಿಮಾದ ಹಿಂದೆ ಇರೋದು ಬರೀ ಕಥೆಯಲ್ಲ, ಪ್ರಪಂಚವನ್ನೇ ಆಳೋ ದೊಡ್ಡ ದೊಡ್ಡ ಸಾಹುಕಾರರ ಲೈಫ್ ಚೇಂಜ್ ಮಾಡಿದ ‘ನೀಮ್ ಕರೋಲಿ ಬಾಬಾ’ ಅವರ ಪವರ್.

ನಿಮಗೆ ಗೊತ್ತಾ? ಇವತ್ತು ನಾವೆಲ್ಲರೂ ಕೈಯಲ್ಲಿ ಹಿಡಿದಿರೋ ಐಫೋನ್ ಕಂಪನಿ ಹುಟ್ಟೋಕೆ, ಪ್ರತಿದಿನ ಯೂಸ್ ಮಾಡೋ ಫೇಸ್‌ಬುಕ್ ಮತ್ತೆ ಗೂಗಲ್ ಬೆಳೆದು ನಿಲ್ಲೋಕೆ ಉತ್ತರಖಂಡದ ಒಂದು ಪುಟ್ಟ ಆಶ್ರಮವೇ ಇನ್ಸ್ಪಿರೇಷನ್!

1974ರಲ್ಲಿ 19 ವರ್ಷದ ಹುಡುಗನೊಬ್ಬ ಕೈಯಲ್ಲಿ ದುಡ್ಡಿಲ್ಲದೆ, ಬರಿಗಾಲಿನಲ್ಲಿ ಭಾರತದ ಬೀದಿಗಳಲ್ಲಿ ಅಲೆದಾಡ್ತಿದ್ದ. ಆ ಹುಡುಗ ಬೇರ್ಯಾರೂ ಅಲ್ಲ, ಆಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್. ಲೈಫ್‌ನಲ್ಲಿ ಏನೋ ಸಾಧಿಸಬೇಕು, ಆದ್ರೆ ಮನಸ್ಸಿಗೆ ಶಾಂತಿ ಇಲ್ಲ ಎಂದು ಹುಡ್ಕೊಂಡು ನೀಮ್ ಕರೋಲಿ ಬಾಬಾರ ಕೈಂಚಿ ಧಾಮಕ್ಕೆ ಬಂದಿದ್ದ. ಬಾಬಾ ಅವರನ್ನು ನೇರವಾಗಿ ಭೇಟಿಯಾಗೋಕೆ ಆಗದಿದ್ದರೂ, ಆ ಆಶ್ರಮದಲ್ಲಿ ಸಿಕ್ಕ ಶಾಂತಿ ಮತ್ತು ವೈಬ್ರೇಷನ್ ಅವರ ಇಡೀ ಆಲೋಚನೆಯನ್ನೇ ಬದಲಾಯಿಸಿತು. ಅಲ್ಲಿಂದ ವಾಪಸ್ ಹೋದಮೇಲೆಯೇ ‘ಆಪಲ್’ ಅನ್ನೋ ಜಗತ್ತಿನ ದೊಡ್ಡ ಸಾಮ್ರಾಜ್ಯ ಹುಟ್ಟಿದ್ದು.

2015ರಲ್ಲಿ ಫೇಸ್‌ಬುಕ್ ಮುಚ್ಚಿಹೋಗೋ ಹಂತಕ್ಕೆ ಬಂದಾಗ, ಮಾರ್ಕ್ ಜುಕರ್‌ಬರ್ಗ್ ಆತಂಕದಲ್ಲಿದ್ದರು. ಆಗ ಅವರಿಗೆ “ಭಾರತದ ಕೈಂಚಿ ಧಾಮಕ್ಕೆ ಹೋಗಿ ಬಾ, ಎಲ್ಲ ಸರಿಹೋಗುತ್ತೆ” ಎಂದು ಐಡಿಯಾ ಕೊಟ್ಟಿದ್ದೇ ಸ್ಟೀವ್ ಜಾಬ್ಸ್. ಜುಕರ್‌ಬರ್ಗ್ ಅಲ್ಲಿಗೆ ಬಂದು ಕೆಲವು ದಿನವಿದ್ದು ಹೋದಮೇಲೆ, ಫೇಸ್‌ಬುಕ್ ಇವತ್ತು ‘ಮೆಟಾ’ ಆಗಿ ಜಗತ್ತನ್ನೇ ಆಳ್ತಿದೆ. ಗೂಗಲ್‌ನ ಸಹ-ಸಂಸ್ಥಾಪಕ ಲ್ಯಾರಿ ಪೇಜ್, ಈಬೇ ಸಂಸ್ಥಾಪಕ ಜಫ್ರಿ ಸ್ಕೋಲ್.. ಹೀಗೆ ಜಗತ್ತಿನ ಅತಿ ಶಕ್ತಿಶಾಲಿ ಬಿಲಿಯನೇರ್‌ಗಳೆಲ್ಲ ತಮ್ಮ ತಲೆಬಾಗಿಸಿದ್ದು ಇದೇ ಬಾಬಾರ ಪಾದದ ಹತ್ತಿರ.

ಬರೀ ಫಾರಿನರ್ಸ್ ಅಷ್ಟೇ ಅಲ್ಲ, ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡು ಕಷ್ಟದಲ್ಲಿದ್ದಾಗ, ಹೆಂಡತಿ ಅನುಷ್ಕಾ ಜೊತೆ ಓಡೋಡಿ ಬಂದಿದ್ದು ಇದೇ ಕೈಂಚಿ ಧಾಮಕ್ಕೆ. ಇಲ್ಲಿ ಸಿಗೋ ಆ ಪಾಸಿಟಿವ್ ಎನರ್ಜಿ, ಪ್ರೀತಿ ಮತ್ತು ಪ್ರಶಾಂತತೆ ಅನುಭವಿಸಿದ ಮೇಲೆಯೇ ಕೊಹ್ಲಿ ಮತ್ತೆ ಹಳೆ ಫಾರ್ಮ್‌ಗೆ ಮರಳಿ ಮೈದಾನದಲ್ಲಿ ರನ್ ಮಳೆ ಹರಿಸಿದ್ದು.

ಕೈಂಚಿ ಧಾಮಕ್ಕೆ ಹೋದವರೆಲ್ಲರೂ ಹೇಳೋದು ಒಂದೇ ಮಾತು “ಅಲ್ಲಿಗೆ ಕಾಲಿಡ್ತಿದ್ದಂತೆ ಮನಸ್ಸಿನಲ್ಲಿದ್ದ ಎಲ್ಲ ಗೊಂದಲ, ಭಯ ಮಾಯವಾಗಿ ಒಂದು ರೀತಿಯ ಅದ್ಭುತ ಪ್ರಶಾಂತತೆ ಆವರಿಸಿಕೊಳ್ಳುತ್ತೆ”. ಯಾವುದೇ ಆಡಂಬರವಿಲ್ಲದೆ, ಪ್ರೀತಿ ಮತ್ತು ಸರಳತೆಯಿಂದಲೇ ಜನರ ಮನಸ್ಸು ಗೆದ್ದವರು ನೀಮ್ ಕರೋಲಿ ಬಾಬಾ. ಇವತ್ತು ಸೋಶಿಯಲ್ ಮೀಡಿಯಾ, ವರ್ಡ್ ಆಫ್ ಮೌತ್ ಮೂಲಕ ಕೋಟ್ಯಂತರ ಜನ ಅಲ್ಲಿಗೆ ಹರಿದು ಬರ್ತಿದ್ದಾರೆ.

ನಿಮಗೂ ಜೀವನದಲ್ಲಿ ಟೆನ್ಷನ್ ಜಾಸ್ತಿಯಾಗಿ, ನೆಮ್ಮದಿ ಬೇಕು ಅನ್ಸಿದ್ರೆ ಅಥವಾ ನಿಮ್ಮ ನಿಜವಾದ ದಾರಿ ಯಾವುದು ಎಂದು ಗೊತ್ತಾಗ್ತಿಲ್ವಾ? ಹಾಗಾದ್ರೆ ಒಮ್ಮೆ ಕೈಂಚಿ ಧಾಮಕ್ಕೆ ಹೋಗಿ ಬನ್ನಿ. ಜಗತ್ತನ್ನೇ ಆಳೋ ದೊಡ್ಡ ದೊಡ್ಡ ಮಂದಿಗೇ ದಾರಿ ತೋರಿಸಿದ ಆ ಜಾಗ, ಖಂಡಿತ ನಿಮಗೂ ಹೊಸ ಭರವಸೆ ಕೊಡುತ್ತೆ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !