October 12, 2026
Monday, October 12, 2026
spot_img

ಸೋಶಿಯಲ್ ಮೀಡಿಯಾದಲ್ಲಿ ಫುಲ್‌ ವೈರಲ್‌: ರೆಟ್ರೋ ಲುಕ್‌ನಲ್ಲಿ ಮಿಂಚಿದ ಪಿಯೂಷ್ ಗೋಯಲ್, ಕಿರಣ್ ರಿಜಿಜು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಳೆಯ ನೆನಪುಗಳನ್ನು ಮರುಕಳಿಸುವ ಹೊಸದೊಂದು ಟ್ರೆಂಡ್ ಸಖತ್ ವೈರಲ್ ಆಗುತ್ತಿದೆ. AI ತಂತ್ರಜ್ಞಾನವನ್ನು ಬಳಸಿ ಜನರು ತಮ್ಮ ಇಂದಿನ ಫೋಟೋಗಳನ್ನು 1980ರ ದಶಕದ ರೆಟ್ರೋ ಶೈಲಿಗೆ ಬದಲಾಯಿಸಿಕೊಳ್ಳುತ್ತಿದ್ದಾರೆ. ಈ “ಚಾಟ್‌ಜಿಪಿಟಿ 80s ಫೋಟೋ ಟ್ರೆಂಡ್” ಈಗ ಕೇವಲ ಸೆಲೆಬ್ರಿಟಿಗಳು, ಇನ್‌ಫ್ಲುಯೆನ್ಸರ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ, ಭಾರತದ ರಾಜಕಾರಣಿಗಳೂ ಸಹ ಈ ಕ್ರೇಜ್‌ಗೆ ಫಿದಾ ಆಗಿದ್ದಾರೆ.

ಎಐ ಟ್ರೆಂಡ್‌ಗೆ ಫಿದಾ ಆದ ರಾಜಕೀಯ ನಾಯಕರು

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ತಮ್ಮ ಎಐ ಫೋಟೋವನ್ನು ಹಂಚಿಕೊಂಡು, “80ರ ದಶಕದ ವೈಬ್‌ಗೆ ಕನೆಕ್ಟ್ ಆಗುತ್ತಿದ್ದೇನೆ ” ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ಅವರು ಗ್ರೇ ಕಲರ್ ಸೂಟ್, ವೈಟ್ ಶರ್ಟ್ ಮತ್ತು ರೇಬನ್ ಕನ್ನಡಕ ಧರಿಸಿ ಹಳೆಯ ಬಾಲಿವುಡ್ ಹೀರೊ ತರಹ ಕಾಣುತ್ತಿದ್ದಾರೆ.

ಅದೇ ರೀತಿಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಕಾರಿನ ಪಕ್ಕದಲ್ಲಿ ನಿಂತಿರುವ ತಮ್ಮ ರೆಟ್ರೋ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. “ಎಲ್ಲರೂ ಯಾಕೆ 80ರ ದಶಕದ ವೈಬ್‌ಗೆ ಮರಳುತ್ತಿದ್ದಾರೆ? ನಾನು ಕೂಡ ಅನಿವಾರ್ಯವಾಗಿ ಆ ನೆನಪುಗಳಿಗೆ ಶರಣಾಗಬೇಕಾಯಿತು!” ಎಂದು ತಮಾಷೆಯಾಗಿ ಬರೆದಿದ್ದಾರೆ.

ಇನ್ನು,ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಕೂಡ ಈ ರೇಸ್‌ಗೆ ಧುಮುಕಿದ್ದು, ಹಳೆಯ ನೆನಪುಗಳಿರುವ ಯಾವುದೇ ಟ್ರೆಂಡ್ ಬಂದರೂ ನಾನು ಭಾಗಿಯಾಗುತ್ತೇನೆ. ಮತ್ತೆ 80ರ ದಶಕಕ್ಕೆ ಬಂದಂತಾಗಿದೆ ಎಂದು ತಮ್ಮ ಫೋಟೋ ಹಂಚಿಕೊಂಡಿದ್ದಾರೆ.

ಏನಿದು ‘AI 80s’ ಫೋಟೋ ಟ್ರೆಂಡ್ ಜಾದೂ?

ಇದು ನಮ್ಮ ಇಂದಿನ ಸಾಮಾನ್ಯ ಫೋಟೋಗೆ ಕೇವಲ ಫಿಲ್ಟರ್ ಹಾಕುವ ಕೆಲಸವಲ್ಲವೇ ಅಲ್ಲ. ಇದರ ಹಿಂದೆ ಇರುವುದು ಕೃತಕ ಬುದ್ಧಿಮತ್ತೆಯ ಅದ್ಭುತ ತಂತ್ರಜ್ಞಾನ. ಬಳಕೆದಾರರು ಎಐ ಇಮೇಜ್ ಜನರೇಟರ್ ಸಾಫ್ಟ್‌ವೇರ್‌ಗಳಿಗೆ ತಮ್ಮ ಇಂದಿನ ಫೋಟೋವನ್ನು ನೀಡಿ, ʼನನ್ನನ್ನು 1980ರ ದಶಕದ ಭಾರತೀಯ ಶೈಲಿಯಲ್ಲಿ ಮರುಸೃಷ್ಟಿಸುʼ ಎಂದು ಒಂದು ಸಣ್ಣ ಪ್ರಾಮ್ಟ್  ನೀಡಿದರೆ ಸಾಕು, ಎಐ ತನ್ನ ಮ್ಯಾಜಿಕ್ ಆರಂಭಿಸುತ್ತದೆ.

ಇದನ್ನೂ ಓದಿ:

ಇದು ವ್ಯಕ್ತಿಯ ಮುಖದ ಲಕ್ಷಣವನ್ನು ಕಿಂಚಿತ್ತೂ ಬದಲಾಯಿಸದೆ, ಅವರ ಉಡುಪು, ಹೇರ್‌ಸ್ಟೈಲ್, ಹಿನ್ನೆಲೆ ಮತ್ತು ಲೈಟಿಂಗ್ ಅನ್ನು ಸಂಪೂರ್ಣವಾಗಿ 80ರ ದಶಕಕ್ಕೆ ತಕ್ಕಂತೆ ಬದಲಾಯಿಸಿ ಹೊಸ ಚಿತ್ರವನ್ನೇ ಸೃಷ್ಟಿಸುತ್ತದೆ. ಈ ಫೋಟೋಗಳು ಹಳೆಯ ನೆನೆಪುಗಳನ್ನು ಕಣ್ಣಿಗೆ ಕಟ್ಟುವಂತೆ ಮಾಡುತ್ತಿದೆ. ಹಾಗಾಗಿಯೇ ಈ ಟ್ರೆಂಡ್ ಇಷ್ಟೊಂದು ವೈರಲ್ ಆಗುತ್ತಿದೆ.

Must Read