September 11, 2026
Friday, September 11, 2026
spot_img

ದಿನಭವಿಷ್ಯ: ವೃತ್ತಿ ಜೀವನಕ್ಕೆ ಆದ್ಯತೆ ನೀಡಿ ಕುಟುಂಬವನ್ನು ನಿರ್ಲಕ್ಷಿಸದಿರಿ, ಅನಗತ್ಯ ಖರ್ಚು ಬೇಡ

ಮೇಷ
ವೃತ್ತಿ ಕೆಲಸಕ್ಕೇ ಆದ್ಯತೆ ನೀಡಿ ಕುಟುಂಬವನ್ನು ನಿರ್ಲಕ್ಷಿಸಬೇಡಿ. ಇತರರ ಪ್ರಗತಿಗೆ ಅಸೂಯೆ ಪಡಬೇಡಿ. ದುಂದುವೆಚ್ಚ ಕಡಿಮೆ ಮಾಡಿ.
ವೃಷಭ
ನಿರೀಕ್ಷಿಸಿದ ರೀತಿಯಲ್ಲೆ ನಿಮ್ಮ ಕಾರ್ಯ ಸಾಗಲಿದೆ. ಅಡ್ಡಿ ಬರದು. ಆರೋಗ್ಯ ಸಮಸ್ಯೆ ನಿವಾರಣೆ. ಆರ್ಥಿಕ ಹರಿವು ಉತ್ತಮಗೊಳ್ಳಲಿದೆ.
ಮಿಥುನ
ಪ್ರೀತಿಯ ವಿಚಾರ ಆದ್ಯತೆ ಪಡೆಯಲಿದೆ. ನಿಮ್ಮಿಷ್ಟದ ವ್ಯಕ್ತಿಯಿಂದ ಸೂಕ್ತ ಸ್ಪಂದನೆ ಪಡೆಯಲು ಸಫಲರಾಗುವಿರಿ. ವೃತ್ತಿ ಕಾರ್ಯ ಸುಲಲಿತ.
ಕಟಕ
ಕೆಲಸದಲ್ಲಿ ಒತ್ತಡ. ಹೆಚ್ಚುವರಿ ಹೊಣೆ. ಮಾತು ಜಗಳಕ್ಕೆ ಹೇತುವಾದೀತು. ಆತ್ಮೀಯರು ದೂರ ಸರಿದು ಬೇಸರ ಅನುಭವಿಸುವಿರಿ. ಆರ್ಥಿಕ ಹೊರೆ ಅಧಿಕ.
ಸಿಂಹ
ಅದೃಷ್ಟ ಇಂದು ನಿಮ್ಮ ಜತೆಗಿರದು. ಕುಟುಂಬಸ್ಥರ ಜತೆ ಮನಸ್ತಾಪ ಸಂಭವ. ಅನವಶ್ಯ ಟೀಕೆಗೆ ಗುರಿಯಾಗುವಿರಿ. ಸಂಯಮ ವಹಿಸಿರಿ.
ಕನ್ಯಾ
ವ್ಯವಹಾರದಲ್ಲಿ ನಿಮ್ಮಿಂದ ತಪ್ಪು ಘಟಿಸ ಬಹುದು. ಮನೆಯರ ಇಚ್ಛಾನುಸಾರ ನಡಕೊಳ್ಳಿ. ವಿರೋಧ ಸೂಚಿಸದಿರಿ. ಆರ್ಥಿಕ ಹೊರೆ ಹೆಚ್ಚಲಿದೆ.
ತುಲಾ
ಇತರರ ಆಮಿಷಕ್ಕೆ ಬಲಿಯಾಗಬೇಡಿ. ಯೋಚಿಸದೆ ಹೊಸ ಯೋಜನೆಗೆ ಹಣ ಹಾಕಬೇಡಿ. ದೈಹಿಕ ಕ್ಷಮತೆಗೆ ಆದ್ಯತೆ ಕೊಡಿ.
ವೃಶ್ಚಿಕ
ಏಕಕಾಲದಲ್ಲಿ ಕೆಲವಾರು ವಿಷಯ ಇತ್ಯರ್ಥ ಮಾಡಬೇಕಾದ ಒತ್ತಡ. ಗೊಂದಲ ಮಾಡಿಕೊಳ್ಳದಿರಿ. ಸಮಾಧಾನ ಚಿತ್ತವಿರಲಿ.
ಧನು
ಯಾರೊಂದಿಗೂ ಬೆರೆಯದ ನಿಮ್ಮ ಮನಸ್ಥಿತಿ ನಿಮ್ಮನ್ನು ಏಕಾಂಗಿ ಯಾಗಿಸಬಹುದು. ಇತರರ ಭಾವನೆಗೆ ಘಾಸಿ ಉಂಟು ಮಾಡುವಿರಿ.
ಮಕರ
ನಿಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಸೂಕ್ತ ಅವಕಾಶ ದೊರಕಲಿದೆ. ವ್ಯವಹಾರ ಸುಗಮ. ಅಡ್ಡಿ ನಿವಾರಣೆ. ಮಕ್ಕಳ ಸಾಧನೆ ತೃಪ್ತಿ ತರುವುದು.
ಕುಂಭ
ಹಳೆಯದನ್ನೇ ನೆನಪಿಸಿ ಕೊರಗಬೇಡಿ. ಭವಿಷ್ಯಕ್ಕೆ ಗಮನ ಕೊಡಿ. ನೋವು ನೀಡಿದವರನ್ನು ಮರೆತು ಬಿಡಿ. ಹಿರಿಯರಿಗೆ ಆರೋಗ್ಯ ಸಮಸ್ಯೆ.
ಮೀನ
ಸಕಾಲದಲ್ಲಿ ಕಾರ್ಯ ಪೂರ್ಣ. ಸಣ್ಣ ಪುಟ್ಟ ವಿಷಯಗಳೂ ಚಿಂತೆ ತರುತ್ತವೆ. ನೆಮ್ಮದಿ ದೂರ. ಕಿರಿಕಿರಿ. ಆಂಜನೇಯನ ಪ್ರಾರ್ಥನೆ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !