ಬೆಳಗ್ಗೆ ಎದ್ದ ತಕ್ಷಣ ‘ಖಾಲಿ ಹೊಟ್ಟೆಯಲ್ಲಿ ಜಿಮ್ಗೆ ಹೋಗಿ ಬೆವರು ಹರಿಸಿದರೆ ಬೇಗ ತೂಕ ಕಮ್ಮಿ ಆಗುತ್ತೆ, ಹೊಟ್ಟೆ ಬೊಜ್ಜು ಕರಗುತ್ತೆ’ ಎಂದು ಯಾರೋ ಹೇಳಿದ್ದನ್ನು ಕೇಳಿ ನೀವೂ ಟ್ರೈ ಮಾಡ್ತಿದ್ದೀರಾ? ಹೀಗೆ ಖಾಲಿ ಹೊಟ್ಟೆಯಲ್ಲಿ ವರ್ಕೌಟ್ ಮಾಡೋದಕ್ಕೆ ಸೈನ್ಸ್ ಭಾಷೆಯಲ್ಲಿ ‘ಫಾಸ್ಟೆಡ್ ವರ್ಕೌಟ್’ ಅಂತಾರೆ. ಆದ್ರೆ ಇದು ನಿಜಕ್ಕೂ ನಿಮ್ಮ ದೇಹಕ್ಕೆ ಒಳ್ಳೆಯದಾ?
ಖಾಲಿ ಹೊಟ್ಟೆ ವರ್ಕೌಟ್ ಪ್ಲಸ್ ಪಾಯಿಂಟ್ಸ್
ರಾತ್ರಿ ಪೂರ್ತಿ ನಿದ್ದೆ ಮಾಡಿ ಬೆಳಗ್ಗೆ ಏಳುವಾಗ ಹೊಟ್ಟೆಯಲ್ಲಿ ಗ್ಲೂಕೋಸ್ ಕಮ್ಮಿ ಇರುತ್ತೆ. ಈ ಟೈಮ್ನಲ್ಲಿ ಎಕ್ಸರ್ಸೈಸ್ ಮಾಡಿದಾಗ, ದೇಹವು ಶಕ್ತಿಗಾಗಿ ಸ್ಟೋರೇಜ್ ಆಗಿರೋ ಕೊಬ್ಬನ್ನು ಬಳಸಿಕೊಳ್ಳಲು ಶುರು ಮಾಡುತ್ತೆ. ಇದರಿಂದ ಫ್ಯಾಟ್ ಬರ್ನ್ ಬೇಗ ಆಗುತ್ತೆ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವಾಕಿಂಗ್ ಅಥವಾ ಎಕ್ಸರ್ಸೈಸ್ ಮಾಡೋದ್ರಿಂದ ದೇಹದಲ್ಲಿ ಇನ್ಸುಲಿನ್ ಮಟ್ಟ ಬ್ಯಾಲೆನ್ಸ್ ಆಗಿ, ಶುಗರ್ ಕಂಟ್ರೋಲ್ನಲ್ಲಿ ಇಡಲು ಸಹಾಯವಾಗುತ್ತೆ.
ಮೈನಸ್ ಪಾಯಿಂಟ್ಸ್ & ರಿಸ್ಕ್
ಹೊಟ್ಟೆಯಲ್ಲಿ ಶಕ್ತಿಯೇ ಇಲ್ಲದಿರುವಾಗ ಭಾರೀ ಎಕ್ಸರ್ಸೈಸ್ ಅಥವಾ ವೆಯಿಟ್ ಲಿಫ್ಟಿಂಗ್ ಮಾಡಿದ್ರೆ ತಲೆಸುತ್ತು ಬರೋದು, ಮೈ ಕೈ ನಡುಗೋದು, ವಾಂತಿ ಬಂದ ಹಾಗೆ ಆಗೋದು ಖಂಡಿತ.
ಕೇವಲ ಕೊಬ್ಬು ಅಷ್ಟೇ ಅಲ್ಲ, ಶಕ್ತಿ ಸಿಗದಿದ್ದಾಗ ದೇಹವು ನೀವು ಕಷ್ಟಪಟ್ಟು ಬೆಳಸಿದ ಮಾಂಸಖಂಡಗಳನ್ನು ಕರಗಿಸಲು ಶುರು ಮಾಡುತ್ತೆ.
ಹೊಟ್ಟೆಗೆ ಏನೂ ಬಿದ್ದಿಲ್ಲ ಅಂದರೆ ಜಿಮ್ನಲ್ಲಿ 100% ಎಫರ್ಟ್ ಹಾಕೋಕೆ ಆಗಲ್ಲ. ಅರ್ಧದಲ್ಲೇ ಎನರ್ಜಿ ಡೌನ್ ಆಗಿಬಿಡುತ್ತೆ.
ಯಾರು ಖಾಲಿ ಹೊಟ್ಟೆಯಲ್ಲಿ ವರ್ಕೌಟ್ ಮಾಡಬೋದು?
ವಾಕಿಂಗ್ ಮಾಡೋರು, ಯೋಗ ಅಥವಾ ಜಾಗಿಂಗ್ ಮಾಡೋರು ಖಾಲಿ ಹೊಟ್ಟೆಯಲ್ಲಿ ಮಾಡಬಹುದು. ಇದರಿಂದ ದೇಹಕ್ಕೆ ದೊಡ್ಡ ತೊಂದರೆಯಾಗಲ್ಲ.
ಯಾರು ಖಾಲಿ ಹೊಟ್ಟೆಯಲ್ಲಿ ವರ್ಕೌಟ್ ಮಾಡಲೇಬಾರದು?
ಹೆವಿ ಜಿಮ್ ಮಾಡುವವರು, ಹೆವಿ ವೆಯಿಟ್ ಎತ್ತುವವರು, ಹೈ-ಇಂಟೆನ್ಸಿಟಿ ರನ್ನಿಂಗ್ ಮಾಡೋರು ಮತ್ತು ಶುಗರ್ ಅಥವಾ ಲೋ ಬಿಪಿ ಇರುವವರು ಖಾಲಿ ಹೊಟ್ಟೆಯಲ್ಲಿ ಎಕ್ಸರ್ಸೈಸ್ ಮಾಡಲೇಬಾರದು.
ಹಾಗಿದ್ರೆ ಏನು ಮಾಡಬೇಕು?
ಖಾಲಿ ಹೊಟ್ಟೆಯಲ್ಲಿ ಜಿಮ್ಗೆ ಹೋಗಿ ಸುಸ್ತಾಗುವ ಬದಲು, ವರ್ಕೌಟ್ಗೆ 20-30 ನಿಮಿಷ ಮುಂಚೆ ಒಂದು ಬಾಳೆಹಣ್ಣು, 4-5 ನೆನೆಸಿದ ಬಾದಾಮಿ, ಅಥವಾ ಒಂದು ಲೋಟ ಎಳೆನೀರು ಕುಡಿದು ಹೋದರೆ ದೇಹಕ್ಕೆ ಇನ್ಸ್ಟಂಟ್ ಎನರ್ಜಿ ಸಿಗುತ್ತೆ. ಇದರಿಂದ ನೀವು ಜಿಮ್ನಲ್ಲಿ ಸಖತ್ ಪವರ್ಫುಲ್ ಆಗಿ ಎಕ್ಸರ್ಸೈಸ್ ಮಾಡಬಹುದು.
ನಿಮ್ಮ ಬಾಡಿ ಟೈಪ್ಗೆ ಯಾವುದು ಸೂಟ್ ಆಗುತ್ತೋ ಅದನ್ನು ನೋಡಿ ಫಾಲೋ ಮಾಡಿ. ಶರೀರಕ್ಕೆ ತೊಂದರೆ ಕೊಟ್ಟು ಫಿಟ್ನೆಸ್ ಮಾಡೋದಕ್ಕಿಂತ, ಬಾಡಿಗೆ ಎನರ್ಜಿ ಕೊಟ್ಟು ಹೆಲ್ದಿಯಾಗಿರೋದೇ ಅಸಲಿ ಫಿಟ್ನೆಸ್.



