ಸೋಯಾ ಚಂಕ್ಸ್
ಮಶ್ರೂಮ್
ಈರುಳ್ಳಿ
ಟೊಮೆಟೊ
ಶುಂಟಿ-ಬೆಳ್ಳುಳ್ಳಿ ಪೇಸ್ಟ್
ಹಸಿಮೆಣಸಿನಕಾಯಿ
ಮೊಸರು
ಅಚ್ಚಖಾರದ ಪುಡಿ
ಧನಿಯಾ ಪುಡಿ
ಗರಂ ಮಸಾಲೆ
ಅರಿಶಿನ ಪುಡಿ
ಸಾಸಿವೆ & ಜೀರಿಗೆ
ಪಲಾವ್ ಎಲೆ, ಏಲಕ್ಕಿ, ಲವಂಗ, ಚಕ್ಕೆ
ಎಣ್ಣೆ ಅಥವಾ ತುಪ್ಪ
ಕೊತ್ತಂಬರಿ ಸೊಪ್ಪು
ಉಪ್ಪು
ಮೊದಲು ಒಂದು ಪಾತ್ರೆಯಲ್ಲಿ ನೀರು ಕಾಯಿಸಿ, ಅದಕ್ಕೆ ಸ್ವಲ್ಪ ಉಪ್ಪು ಮತ್ತು ಸೋಯಾ ಚಂಕ್ಸ್ ಹಾಕಿ ಐದು ನಿಮಿಷ ಕುದಿಸಿ. ನಂತರ ಗ್ಯಾಸ್ ಆಫ್ ಮಾಡಿ, ಸೋಯಾ ತಣ್ಣಗಾದ ಮೇಲೆ ಅದರಲ್ಲೇ ಇರೋ ನೀರನ್ನೆಲ್ಲಾ ಕೈಯಿಂದ ಚೆನ್ನಾಗಿ ಹಿಂಡಿ ತೆಗೆದು ಒಂದು ಬೌಲ್‌ನಲ್ಲಿ ಇಟ್ಟುಕೊಳ್ಳಿ.
ಈಗ ಬಾಣಲೆಗೆ ಎಣ್ಣೆ ಅಥವಾ ತುಪ್ಪ ಹಾಕಿ ಬಿಸಿ ಮಾಡಿ. ಎಣ್ಣೆ ಕಾದ ಮೇಲೆ ಸಾಾಸಿವೆ, ಜೀರಿಗೆ, ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ ಹಾಕಿ. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ, ಚೆನ್ನಾಗಿ ಹುರಿಯಿರಿ. ಈರುಳ್ಳಿ ಬೆಂದ ಮೇಲೆ ಶುಂಟಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗೋವರೆಗೆ ಹುರಿಯಿರಿ. ಆಮೇಲೆ ಟೊಮೆಟೊ ಪೇಸ್ಟ್ ಹಾಕಿ, ಎಣ್ಣೆ ತೇಲುವವರೆಗೆ ಬೇಯಿಸಿ. ಈಗ ಸಾಫ್ಟ್ ಆಗಿರೋ ಮಸಾಲೆಗೆ ಅರಿಶಿನ, ಅಚ್ಚಖಾರದ ಪುಡಿ, ಧನಿಯಾ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮಸಾಲೆ ಚೆನ್ನಾಗಿ ಬೆಂದ ಮೇಲೆ, ಗ್ಯಾಸ್ ಉರಿ ಸಣ್ಣಗೆ ಮಾಡಿ ಮೊಸರು ಸೇರಿಸಿ ಮಿಕ್ಸ್ ಮಾಡಿ. ಈಗ ನೀರು ಹಿಂಡಿಟ್ಟ ಸೋಯಾ ಚಂಕ್ಸ್ ಮತ್ತು ಕಟ್ ಮಾಡಿಟ್ಟ ಮಶ್ರೂಮ್ ಹಾಕಿ, ಮಸಾಲೆ ಎಲ್ಲದಕ್ಕೂ ಹಿಡಿಯುವಂತೆ ಚೆನ್ನಾಗಿ ಹುರಿಯಿರಿ. ನಿಮಗೆ ಗ್ರೇವಿ ಎಷ್ಟು ಗಟ್ಟಿಯಾಗಿ ಬೇಕೋ ಅಷ್ಟು ನೀರು ಸೇರಿಸಿ ಮುಚ್ಚಳ ಮುಚ್ಚಿ 7-8 ನಿಮಿಷ ಸಣ್ಣ ಉರಿಯಲ್ಲಿ ಬೇಯಲು ಬಿಡಿ. ಮಶ್ರೂಮ್ ಮತ್ತು ಸೋಯಾ ಮಸಾಲೆಯನ್ನು ಚೆನ್ನಾಗಿ ಹೀರಿಕೊಳ್ಳಲಿ.
ಅಷ್ಟೇ! ಬಿಸಿ ಬಿಸಿಯಾದ ಸೋಯಾ-ಮಶ್ರೂಮ್ ಗ್ರೇವಿ ಈಗ ಸಿದ್ಧ.



