ಮೇಷ
ಸಂತೋಷದ ದಿನ. ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಫಲ ಸಿಗಲಿದೆ. ಆಧ್ಯಾತ್ಮಿಕ ತುಡಿತ. ಹೂಡಿಕೆಯಲ್ಲಿ ಲಾಭ. ಕೌಟುಂಬಿಕ ಸಮ್ಮಿಲನ.
ವೃಷಭ
ಸರಿಯಾಗಿ ಯೋಜಿಸಿ ಕಾರ್ಯ ಎಸಗಿ. ಇಲ್ಲವಾದರೆ ಪ್ರಯತ್ನ ನಿಷಲ. ವೈಯಕ್ತಿಕ ಸಮಸ್ಯೆಯೊಂದು ಶೀಘ್ರ ಪರಿಹಾರ ಕಾಣಲಿದೆ.
ಮಿಥುನ
ನಿರಾಳವಾಗಿರಿ. ಸಮಸ್ಯೆ ಕಾಡಿದರೂ ಬೇಗ ಪರಿಹಾರ ಕಾಣುವುದು. ಕೌಟುಂಬಿಕ ಮನಸ್ತಾಪ ಕೂಡಾ ನಿವಾರಣೆ. ಆರ್ಥಿಕ ಲಾಭ ಸಂಭವ.
ಕಟಕ
ಸ್ಪಷ್ಟ ಚಿಂತನೆಯಿಂದ ಯಶಸ್ಸು. ಯಾವುದೇ ವಿಚಾರದಲ್ಲಿ ಗೊಂದಲ ಮಾಡಿಕೊಳ್ಳದಿರಿ. ಆರ್ಥಿಕ ಬಿಕ್ಕಟ್ಟು ಒದಗಿದರೂ ಬೇಗ ಶಮನವಾಗಲಿದೆ.
ಸಿಂಹ
ಕ್ಲಿಷ್ಟ ಪರಿಸ್ಥಿತಿ ಎದುರಿಸುವಿರಿ. ತಾಳ್ಮೆ ಯಿಂದ ನಿಭಾಯಿಸಿ. ಹೆಚ್ಚುವರಿ ಹೊಣೆಗಾರಿಕೆ. ಅಪೇಕ್ಷಿತ ಸಹಕಾರ ಸಿಗಲಾರದು.
ಕನ್ಯಾ
ನಿಮ್ಮ ಗುರಿಗೆ ಕೆಲವಾರು ಅಡ್ಡಿಗಳು. ಇತರರ ಜತೆ ಅನವಶ್ಯ ಮಾತು ಆಡಲು ಹೋಗಬೇಡಿ. ಆರೋಗ್ಯ ಸ್ಥಿರ. ಆರ್ಥಿಕ ಉನ್ನತಿ.
ತುಲಾ
ಸಂತೋಷ ಕಸಿಯುವ ಸನ್ನಿವೇಶ ನಿರ್ಮಾಣ. ಏಕಾಗ್ರತೆ ನಾಶ. ಉದ್ಯಮಕ್ಕೆ ಸಂಬಂಧಿಸಿ ಎಚ್ಚರದ ನಿರ್ಧಾರ ತೆಗೆದುಕೊಳ್ಳಿ.
ವೃಶ್ಚಿಕ
ನಿರೀಕ್ಷಿತ ಫಲ ಸಿಗದು. ಕೆಲ ವಿಷಯಗಳಲ್ಲಿ ಹಿನ್ನಡೆ. ವಾಗ್ವಾದಕ್ಕೆ ಇಳಿಯದಿರಿ. ಮನೆಯಲ್ಲಿ ಸ್ವಾಸ್ಥ್ಯ ಸಮಸ್ಯೆ. ಧನವ್ಯಯ.
ಧನು
ಆತ್ಮವಿಶ್ವಾಸ ಹೆಚ್ಚಿಸುವ ಬೆಳವಣಿಗೆ. ಬಹುಕಾಲದ ಬಳಿಕ ಆಪ್ತರೊಬ್ಬರ ಭೇಟಿ.ನಿಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ ಸಿಗಲಿದೆ.
ಮಕರ
ಮನೆ ಅಥವಾ ವಾಹನ ಖರೀದಿ ಭಾಗ್ಯ. ಉದ್ಯಮದಲ್ಲಿ ಯಶಸ್ಸು. ಕಿರಿಕಿರಿ ಸೃಷ್ಟಿಸಿದ್ದ ವಿವಾದ ಸುಖಾಂತ್ಯ ಕಾಣಲಿದೆ. ಮಾನಸಿಕ ನಿರಾಳತೆ.
ಕುಂಭ
ಶುಭಪ್ರದ ದಿನ ನಿಮ್ಮ ಪಾಲಿಗೆ. ಎಲ್ಲ ಕಾರ್ಯ ಸುಸೂತ್ರ. ವಿಶ್ವಾಸ ವೃದ್ಧಿ. ವ್ಯವಹಾರದಲ್ಲಿ ಅನಿರೀಕ್ಷಿತ ಲಾಭ ಪಡೆಯುವಿರಿ. ಕೌಟುಂಬಿಕ ನೆಮ್ಮದಿ.
ಮೀನ
ವಾಗ್ವಾದವು ಮನಸ್ಸಿನ ಶಾಂತಿ ಕದಡಲಿದೆ. ಸಮಚಿತ್ತ ಬೆಳೆಸಿಕೊಳ್ಳಿ. ಆರೋಗ್ಯದ ಬಗ್ಗೆ ಚಿಂತೆ ಅನವಶ್ಯ. ಅನಿರೀಕ್ಷಿತ ಧನಲಾಭ.



