September 12, 2026
Saturday, September 12, 2026
spot_img

ಬೆಂಗಳೂರಲ್ಲಿ ಕಾಸು, ಊರಲ್ಲಿ ಮನಸ್ಸು! ಹಬ್ಬ ಅಂತಿದ್ದ ಹಾಗೆ ಊರಿಗೆ ಓಡೋಕೆ ತಯಾರಾದ ಸಿಲಿಕಾನ್‌ ಸಿಟಿ ಮಂದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಯಾವಾಗ ರಜೆ ಸಿಕ್ರೂ ಸಾಕು ಊರಿಗೆ ಹೋಗೋಣ ಎಂದು ಹಾತೊರೆಯುವ ಅನಿವಾಸಿ ಬೆಂಗಳೂರಿಗರಿಗೆ ದೊಡ್ಡ ಹಬ್ಬಗಳು ಬಂತೆಂದರೆ ಭಾರೀ ಖುಷಿ. ಕಂಪನಿಗಳಿಗೆ ಒಂದು ತಿಂಗಳ ಮುನ್ನವೇ ರಜೆ ಮೇಲ್‌ ಹಾಕಿ, ನಂತರದ ಕ್ಷಣವೇ ಟಿಕೆಟ್‌ ಬುಕ್‌ ಮಾಡಿಕೊಂಡು ನೆಮ್ಮದಿಯ ಕಡೆ ಹೊರಟುಬಿಡುತ್ತಾರೆ. ಆದರೆ ಹಲವು ಕಂಪನಿಗಳಲ್ಲಿ ರಜೆ ಕೊಡಿ ಎಂದಾಗ ನೋಡೋಣ ಎಂದೋ, ಶುಕ್ರವಾರ ಕೆಲಸ ಮಾಡಿ ಹೋಗಿ ಎಂದೋ ಹೇಳಿರುತ್ತಾರೆ. ಅಂತವರು ಯಾವ ಟಿಕೆಟ್‌ ಕೂಡ ಬುಕ್‌ ಮಾಡದೇ ಕಡೆಯ ಕ್ಷಣಕ್ಕೆ ಸಿಕ್ಕ ಬಸ್‌ ಹತ್ತಿಕೊಂಡು ಹೋಗಿಬಿಡ್ತಾರೆ. ಇನ್ನು ಕೆಲವರು ತುಂಬಾ ಸ್ಮಾರ್ಟ್‌, ಜನ ಹಬ್ಬದ ಹಿಂದಿನ ದಿನ ಊರಿಗೆ ಹೋಗ್ತಾರೆ ಅಂತ ಒಂದು ದಿನ ಮುನ್ನವೇ ಊರಿಗೆ ಹೊರಡುತ್ತಾರೆ. ಈ ವೇಳೆ ಬಸ್‌ಗಳಿಗಾಗಿ ಕಾದು ಹೈರಾಣಾಗುತ್ತಾರೆ.

ಇಂಥದ್ದೇ ಸನ್ನಿವೇಶವನ್ನು ಬೆಂಗಳೂರಿಗರು ಎದುರಿಸುತ್ತಿದ್ದಾರೆ. ಸಾವಿರಾರು ಊರುಗಳಿಂದ ರಾಜ್ಯಗಳಿಂದ ಬೆಂಗಳೂರಿಗೆ ಬಂದ ಜನರು ತಮ್ಮೂರಿಗೆ ಹೊರಡೋಕೆ ಬಸ್‌ಗಾಗಿ ಕಾದು ನಿಂತಿದ್ದ ವಿಡಿಯೋವೊಂದು ವೈರಲ್‌ ಆಗಿದೆ. ಅದು ಬರೀ ಬಸ್‌ ಬರುವ ಒಂದು ಪಾಯಿಂಟ್‌ನ ವಿಡಿಯೋ ಆಗಿದೆ. ಇದೇ ರೀತಿ ಇನ್ನೆಷ್ಟು ಕಡೆ ಇನ್ನೆಷ್ಟು ಜನ ಊರು ಬಿಟ್ಟಿದ್ದಾರೋ ಯಾರಿಗೂ ಗೊತ್ತಿಲ್ಲ.

ಕರ್ನಾಟಕ ಪೋರ್ಟ್‌ಫೊಲಿಯೋ ಎಂಬ ಟ್ವಿಟರ್‌ ಅಕೌಂಟ್‌ನಿಂದ ಈ ವಿಡಿಯೋ ಪೋಸ್ಟ್‌ ಆಗಿದೆ. ಈ ವಾರ ಇಡೀ ಸಿಟಿ ಖಾಲಿ ಇರುವಂತೆ ಕಾಣಿಸುತ್ತದೆ. ಲಕ್ಷಾಂತರ ಜನ ಏಕಕಾಲಕ್ಕೆ ಊರು ಬಿಡ್ತಿದ್ದಾರೆ. ಇನ್ನೇನು ವಾರವಾದ್ರೂ ಬರುವ ಲಕ್ಷಣ ಇಲ್ಲದಷ್ಟು ಲಗೇಜ್‌ ತುಂಬಿಕೊಂಡಿದ್ದಾರೆ. ಊರಿಗೆ ಹೋಗುವವರು ಹೋಗಲಿ, ಬೆಂಗಳೂರಿನಲ್ಲೇ ಉಳಿಯುವವರು ಮೂರು ದಿನ ಟ್ರಾಫಿಕ್‌ ಇಲ್ಲದ ಬೆಂಗಳೂರನ್ನು ಎಂಜಾಯ್‌ ಮಾಡಬಹುದು ಎಂದು ಬರೆದುಕೊಂಡಿದ್ದಾರೆ.

ಬೆಳಗಿನ ಜಾವ ಅಪ್‌ಲೋಡ್‌ ಮಾಡಿದ ವಿಡಿಯೋ ಇದಾಗಿದ್ದು, 64 ಸಾವಿರಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದ್ದಾರೆ. ಬೆಳಗಿನ ಆರು ಗಂಟೆಗೆ ಇಷ್ಟು ಜನ ಇದ್ದಾರೆ ಎಂದರೆ ಅದೆಷ್ಟು ಮಂದಿ ಊರು ಬಿಟ್ಟಿರಬಹುದೋ ಗೊತ್ತಿಲ್ಲ. ಲೋಕಲ್‌ ಜನರನ್ನು ಬಿಟ್ಟು ಊರಿಗೆ ಹೋದ ಯಾರೂ ವಾಪಾಸ್‌ ಬರೋದು ಬೇಡಪ್ಪ ಎಂದು ಬೆಂಗಳೂರಿಗನೊಬ್ಬ ಕಮೆಂಟ್‌ ಮಾಡಿದ್ದಾನೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !