September 12, 2026
Saturday, September 12, 2026
spot_img

ಸೆಪ್ಟೆಂಬರ್‌ ತಿಂಗಳಿನಲ್ಲಿ ಟ್ರಾವೆಲ್‌ ಮಾಡೋದಕ್ಕೆ ಈ ಐದು ಪ್ಲೇಸ್‌ ಬೆಸ್ಟ್‌! ಯಾವುದು ನೋಡಿ

ಸೆಪ್ಟೆಂಬರ್‌ ತಿಂಗಳಿನಲ್ಲಿ ಟ್ರಾವೆಲ್‌ ಮಾಡೋ ಪ್ಲಾನ್‌ ಮಾಡಿದ್ದೀರಾ? ಟ್ರಿಪ್‌ ಮಾಡೋಕೆ ಇದು ಬೆಸ್ಟ್‌ ಟೈಮ್‌. ಫ್ಯಾಮಿಲಿ ಅಥವಾ ಸ್ನೇಹಿತರ ಜೊತೆ ಟ್ರಿಪ್‌ಗೆ ಹೋಗಬೇಕು, ಬಜೆಟ್‌ ರೆಡಿ ಇದೆ ಆದರೆ ಎಲ್ಲಿಗೆ ಹೋಗೋದು ಗೊತ್ತಾಗ್ತಾ ಇಲ್ಲ ಅನ್ನೋದಾದ್ರೆ ಮಿಸ್‌ ಮಾಡದೇ ಈ ಆರ್ಟಿಕಲ್‌ ಸಂಪೂರ್ಣ ಓದಿ. ಯಾವ ಜಾಗಕ್ಕೆ ಹೋದರೆ ಯಾವ ರೀತಿ ಅನುಭವ ಪಡೆಯಬಹುದು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ..

ಈ ಸಮಯದಲ್ಲಿ ಸುತ್ತಾಟಕ್ಕಿಂತ ಒಂದು ಕಡೆ ಇದ್ದು ಚಿಲ್‌ ಮಾಡೋದು ಬೆಸ್ಟ್‌. ಭಾರತದ ಸೌಂದರ್ಯವನ್ನು ಸವಿಯೋದಕ್ಕೆ ಈ ಸಮಯ ಪರ್ಫೆಕ್ಟ್‌ ಆಗಿದೆ. ತುಂಬಾ ದೂರ ಬೇಡ ಜಾಸ್ತಿ ಬಜೆಟ್‌ ಇಲ್ಲ ಅಂದ್ರೆ ಮಿಸ್‌ ಮಾಡದೇ ಕೂರ್ಗ್‌ಗೆ ಹೋಗಿಬನ್ನಿ. ಮಂಜಿನಲ್ಲಿ ಮುಚ್ಚಿಕೊಂಡ ಕಾಫಿ ಎಸ್ಟೇಟ್‌, ಧೋ ಎಂದು ಹರಿಯುವ ಜಲಪಾತಗಳು, ಕೂಲ್‌ ಕೂಲ್‌ ವೆದರ್‌ ಇಷ್ಟವಾಗೋದ್ರಲ್ಲಿ ಅನುಮಾನವೇ ಇಲ್ಲ.

ಸ್ವಲ್ಪ ಬಜೆಟ್‌ ಜಾಸ್ತಿನೇ ಇದೆ ಅನ್ನೋದಾದ್ರೆ ರಾಜಸ್ಥಾನದ ಉದಯಪುರಕ್ಕೆ ಭೇಟಿ ಕೊಡಿ. ರೊಮ್ಯಾಂಟಿಕ್‌ ವೆದರ್‌, ತುಂಬಿದ ಕೆರೆಗಳು ಅದ್ಭುತವಾಗಿದೆ. ಈ ಸಮಯದಲ್ಲಿ ರಾಜಸ್ಥಾನಕ್ಕೆ ಕಡಿಮೆ ಜನ ಭೇಟಿ ನೀಡುವ ಕಾರಣ ಅರಮನೆಗಳಲ್ಲಿ ಕ್ರೌಡ್‌ ಇರೋದಿಲ್ಲ.

ನಮಗೆ ಹಿಮ ಬೇಕು ಅನ್ನೋದಾದ್ರೆ ಲೇ ಲಡಾಕ್‌ಗೆ ಭೇಟಿ ನೀಡಿ. ರಸ್ತೆಗಳು ಓಪನ್‌ ಆಗಿರುತ್ತವೆ. ಹಿಮ ಎಷ್ಟು ಬೇಕೋ ಅಷ್ಟೇ ಇರುತ್ತದೆ. ಪ್ರತಿಯೊಂದನ್ನು ವಾತಾವರಣದ ಸಮಸ್ಯೆ ಇಲ್ಲದೆ ಈಗ ಎಂಜಾಯ್‌ ಮಾಡಬಹುದು.

ಉತ್ತರಾಖಂಡದ ವ್ಯಾಲಿ ಆಫ್‌ ಫ್ಲವರ್ಸ್‌ಗೆ ಭೇಟಿ ನೀಡೋಕೆ ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ ಉತ್ತಮ ಸಮಯವಾಗಿದೆ. ಯುನೆಸ್ಕೋ ವರ್ಲ್ಡ್‌ ಹೆರಿಟೇಜ್‌ ಸೈಟ್‌ನ ಟ್ರೆಕ್ಕಿಂಗ್‌ ಮಾಡಬಹುದು. ನೀವೆಂದೂ ನೋಡಿರದ ಬಣ್ಣಬಣ್ಣದ ಹೂವುಗಳನ್ನು ಈಗ ನೋಡಬಹುದಾಗಿದೆ.

ನಮಗೆ ಹಸಿರು ಬೆಟ್ಟಗಳನ್ನು ನೋಡುವ ಆಸೆ ಆದರೆ ಕೂರ್ಗ್‌ ಬೇಡ ಅನ್ನೋದಾದ್ರೆ ಅರುಣಾಚಲ ಪ್ರದೇಶದ ಝಿರೊ ವ್ಯಾಲಿಗೆ ಭೇಟಿ ನೀಡಿ. ಇಲ್ಲಿ ಔಟ್‌ಡೋರ್‌ ಮ್ಯೂಸಿಕ್‌ ಫೆಸ್ಟಿವಲ್‌ಗಳು ನಡೆಯುತ್ತವೆ. ಸುತ್ತಮುತ್ತಲೂ ಹಸಿರು ತುಂಬಿರುವ ಈ ವ್ಯಾಲಿ ನಿಮ್ಮ ಟ್ರಿಪ್‌ನ್ನು ಮೆಮೋರಬಲ್‌ ಮಾಡುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !