September 14, 2026
Monday, September 14, 2026
spot_img

ದಿನಭವಿಷ್ಯ: ಜವಾಬ್ದಾರಿಗಳು ಬೆಟ್ಟದಷ್ಟಿದ್ದರೂ ಹೆದರಬೇಡಿ; ನಿಮ್ಮೊಳಗಿನ ಶಕ್ತಿಯನ್ನು ನಂಬಿ, ಸ್ನೇಹಿತರ ಹೆಗಲಿದೆ

ಮೇಷ
ಕುಟುಂಬದಲ್ಲಿ ಹೆಚ್ಚು ಜವಾಬ್ದಾರಿ. ಕಷ್ಟವೆಂದು ತೋರಬಹುದು. ನಿಮ್ಮ ಸಾಮರ್ಥ್ಯದ ಕುರಿತು ವಿಶ್ವಾಸವಿರಲಿ. ಸ್ನೇಹಿತರ ಜತೆ ಕಳೆಯುವ ಅವಕಾಶ.
ವೃಷಭ
ಸಾಂಸಾರಿಕ ವಿಷಯದಲ್ಲಿ ತುಸು ಉದ್ವಿಗ್ನತೆ ಉಂಟಾದೀತು. ಸಹನೆಯಿಂದ ನಿಭಾಯಿಸಿ. ವೃತ್ತಿಯ ಮೇಲೆ ಪ್ರತಿಕೂಲ ಪರಿಣಾಮ.  
ಮಿಥುನ
ಕೌಟುಂಬಿಕ ಸಂಬಂಧ ಉತ್ತಮ. ಭಿನ್ನಮತ ನಿವಾರಣೆ. ವೃತ್ತಿಯಲ್ಲಿ ಕಂಡುಬಂದ ಬಿಕ್ಕಟ್ಟಿಗೆ ಪರಿಹಾರದ ಲಕ್ಷಣ ತೋರಲಿದೆ.
ಕಟಕ
 ಮನೆಯಲ್ಲಿ ಶಾಂತಿ, ಸೌಹಾರ್ದ. ವೃತ್ತಿಯಲ್ಲಿ ಕೂಡ ಸಮಾಧಾನದ ಬೆಳವಣಿಗೆ. ನಿಮ್ಮ ಕೆಲಸವು ಇತರರಿಂದ ಮೆಚ್ಚುಗೆ ಪಡೆಯುವುದು.    
ಸಿಂಹ
ವೃತ್ತಿಯ ಒತ್ತಡ. ಅದರಿಂದ ಹೊರಬಂದು ಮೆಚ್ಚಿನ ಹವ್ಯಾಸದಲ್ಲಿ ತೊಡಗಿ. ಬಿಡುವು ಮಾಡಿಕೊಳ್ಳಿ. ಅದರಲ್ಲಿ ಸಂತೋಷ ಕಾಣುವಿರಿ.  
ಕನ್ಯಾ
ಬಿಗುಮಾನ, ಜಡತ್ವ ಬಿಟ್ಟು ವ್ಯವಹರಿಸಿದರೆ ಕಾರ್ಯದಲ್ಲಿ ಸಫಲತೆ. ನಿಮ್ಮ ವ್ಯಕ್ತಿತ್ವ ಇತರರನ್ನು ಆಕರ್ಷಿಸುವುದು. ಆರ್ಥಿಕ ಸಂಕಷ್ಟ ನಿವಾರಣೆ.  
ತುಲಾ
ಖಾಸಗಿ ಬದುಕಲ್ಲಿ ಭಾವನಾತ್ಮಕ ಏರುಪೇರು. ಆಪ್ತರಿಂದ ನಿಮ್ಮ ಅಹವಾಲು ನಿರಾಕರಣೆ. ವೃತ್ತಿಯಲ್ಲಿ ಮಿಶ್ರ ಫಲ. ಲಾಭ- ನಷ್ಟದ ಸಮ್ಮಿಶ್ರಣ.      
ವೃಶ್ಚಿಕ
ಯಾವುದೇ ವಿಚಾರದಲ್ಲಿ ನಿಮ್ಮ ನಿಲುವಿಗೇ ಅಂಟಿಕೊಳ್ಳುವ ಜಿಗುಟುತನ ಬಿಡಿ. ಕೆಲ ವಿಚಾರಗಳಲ್ಲಿ ಹೊಂದಾಣಿಕೆ ಬೇಕು.        
ಧನು
ಸಹೋದ್ಯೋಗಿಗಳ ಜತೆ ಸಂವಹನ ಕೊರತೆ. ಬಾಂಧವ್ಯದಲ್ಲಿ ಬಿಕ್ಕಟ್ಟು. ಪ್ರತಿಕೂಲ ಪರಿಸ್ಥಿತಿಗೆ ಎದೆಗುಂದದಿರಿ. ಧೈರ್ಯದಿಂದ ಎದುರಿಸಿ.    
ಮಕರ
ಸಾಧಿಸಬಯಸುವ ಗುರಿ ಸನಿಹವಾಗಲಿದೆ. ಕಷ್ಟಗಳು ಎದುರಾದರೂ ಅವು ಪರಿಹಾರ ಕಾಣುವವು. ಹಣದ ಬಿಕ್ಕಟ್ಟು ನಿವಾರಣೆ. ಆತ್ಮೀಯರ ಸಹಕಾರ.        
ಕುಂಭ
ಕುಟುಂಬ ಸದಸ್ಯರ ಜತೆ ಭಿನ್ನಮತ. ವಾಗ್ವಾದ ಸಂಭವ. ವಿಕೋಪಕ್ಕೆ ಕೊಂಡೊಯ್ಯದಿರಿ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿ.              
ಮೀನ
ಕಠಿಣ ಹೊಣೆಗಾರಿಕೆ ಹೆಗಲೇರಿದರೂ ಅನ್ಯರ ಸಹಕಾರದಿಂದ ಕಾರ್ಯ ಪ್ರಾಪ್ತಿ. ವಿದ್ಯಾರ್ಥಿಗಳಿಗೆ ಪ್ರತಿಕೂಲ ಬೆಳವಣಿಗೆ. ಹಣದ ಬಿಕ್ಕಟ್ಟು ಪರಿಹಾರ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !