ಬ್ರೆಡ್ ಸ್ಲೈಸ್
ಚೀಸ್
ಆಲೂಗಡ್ಡೆ
ಈರುಳ್ಳಿ
ಹಸಿಮೆಣಸಿನಕಾಯಿ
ಖಾರದ ಪುಡಿ
ಗರಂ ಮಸಾಲ
ಚಾಟ್ ಮಸಾಲ
ಕೊತ್ತಂಬರಿ ಸೊಪ್ಪು
ಮೈದಾ ಹಿಟ್ಟು
ಬ್ರೆಡ್ ಕ್ರಂಬ್ಸ್
ಉಪ್ಪು
ಎಣ್ಣೆ
ಒಂದು ಬೌಲ್ನಲ್ಲಿ ಬೇಯಿಸಿದ ಆಲೂಗಡ್ಡೆ, ಈರುಳ್ಳಿ, ಹಸಿಮೆಣಸಿನಕಾಯಿ, ಖಾರದ ಪುಡಿ, ಗರಂ ಮಸಾಲ, ಚಾಟ್ ಮಸಾಲ, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು, ಆಲೂಗಡ್ಡೆ ಮಿಶ್ರಣವನ್ನು ಸಣ್ಣ ಉಂಡೆ ಮಾಡಿ, ಮಧ್ಯದಲ್ಲಿ ತುರಿದ ಚೀಸ್ ಇಟ್ಟು ಮತ್ತೆ ರೌಂಡ್ ಆಗಿ ಕವರ್ ಮಾಡಿ. ಬ್ರೆಡ್ ಅಂಚುಗಳನ್ನು ಕಟ್ ಮಾಡಿ, ಬ್ರೆಡ್ ಅನ್ನು ನೀರಿನಲ್ಲಿ ಅದ್ದಿ ನೀರನ್ನು ಪೂರ್ತಿ ಹಿಂಡಿ ತೆಗೆಯಿರಿ. ಈ ಬ್ರೆಡ್ ಒಳಗೆ ಆಲೂ-ಚೀಸ್ ಉಂಡೆಯನ್ನು ಇಟ್ಟು ಪೂರ್ತಿಯಾಗಿ ಮುಚ್ಚಿ ಲಾಲಿಪಾಪ್ ಆಕಾರಕ್ಕೆ ಉಂಡೆ ಮಾಡಿ.
ಒಂದು ಸಣ್ಣ ಬೌಲ್ನಲ್ಲಿ ಮೈದಾ ಹಿಟ್ಟಿಗೆ ಸ್ವಲ್ಪ ನೀರು ಹಾಕಿ ತೆಳುವಾದ ಪೇಸ್ಟ್ ಮಾಡಿ. ಬ್ರೆಡ್ ಉಂಡೆಯನ್ನು ಈ ಮೈದಾ ಪೇಸ್ಟ್ನಲ್ಲಿ ಅದ್ದಿ, ನಂತರ ಬ್ರೆಡ್ ಕ್ರಂಬ್ಸ್ನಲ್ಲಿ ಹಾಕಿ. ಬಿಸಿ ಎಣ್ಣೆಯಲ್ಲಿ ಈ ಉಂಡೆಗಳನ್ನು ಹಾಕಿ, ಗೋಲ್ಡನ್ ಬ್ರೌನ್ ಬರುವವರೆಗೆ ಮಧ್ಯಮ ಉರಿಯಲ್ಲಿ ಫ್ರೈ ಮಾಡಿ. ಎಣ್ಣೆಯಿಂದ ತೆಗೆದ ಮೇಲೆ, ಪ್ರತಿಯೊಂದು ಉಂಡೆಯ ಮಧ್ಯಕ್ಕೆ ಒಂದೊಂದು ಐಸ್ ಕ್ರೀಮ್ ಕಡ್ಡಿ ಚುಚ್ಚಿದರೆ ಬಿಸಿ ಬಿಸಿ ಬ್ರೆಡ್ ಚೀಸ್ ಲಾಲಿಪಾಪ್ ರೆಡಿ!



