September 13, 2026
Sunday, September 13, 2026
spot_img

CINE | ಮಿರ್ಜಾಪುರ್, ಟಾಕ್ಸಿಕ್ ಮುಂದೆ ಗೆದ್ದು ಬೀಗಿದ ಸಿನಿಮಾ… ಆದ್ರೆ ಆಸ್ಕರ್ ರೇಸ್‌ನಿಂದ ಔಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ದೊಡ್ಡ ಸಿನಿಮಾಗಳೇ ಕ್ಲಿಕ್ ಆಗ್ತಿಲ್ಲ ಆದ್ರೆ, ಸೈಲೆಂಟ್ ಆಗಿ ಬಂದು ವೈಲೆಂಟ್ ಆಗಿ ಹಿಟ್ ಆಗಿರೋ ಸಿನಿಮಾ ಅಂದ್ರೆ ಅದು ‘ಹನುಮಾನ್ ಅಂಶ್’. ‘ಮಿರ್ಜಾಪುರ್ ದ ಮೂವಿ’, ‘ಟಾಕ್ಸಿಕ್’, ‘ಹೈವಾನ್’ ನಂತಹ ಬಿಗ್ ಬಜೆಟ್ ಸಿನಿಮಾಗಳು ಪೈಪೋಟಿಗೆ ನಿಂತಿದ್ದರೂ, ಈ ಸಿನಿಮಾ ಮಾತ್ರ ಥಿಯೇಟರ್‌ನಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣ್ತಾ ಜನಪ್ರಿಯತೆ ಗಿಟ್ಟಿಸಿಕೊಂಡಿದೆ. ಜನರ ವರ್ಡ್ ಆಫ್ ಮೌತ್ ಒಂದೇ ಸಾಕಿತ್ತು, ಈ ಸಿನಿಮಾ ಎಲ್ಲರ ಗಮನ ಸೆಳೆಯೋಕೆ.

ಆದ್ರೆ, ಈ ಖುಷಿ ಮಧ್ಯದಲ್ಲೇ ಫ್ಯಾನ್ಸ್‌ಗೆ ಒಂದು ಬೇಸರದ ಸುದ್ದಿ ಹೊರಬಿದ್ದಿದೆ. ಈ ವರುಷ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಅಧಿಕೃತವಾಗಿ ಕಳುಹಿಸುವ ಸಿನಿಮಾಗಳ ಪಟ್ಟಿಯಲ್ಲಿ ‘ಹನುಮಾನ್ ಅಂಶ್’ ಇರೋದಿಲ್ಲ. ಸೆಪ್ಟೆಂಬರ್ 7 ಕ್ಕೆ ಆಸ್ಕರ್‌ಗೆ ಸಿನಿಮಾ ಸಬ್ಮಿಟ್ ಮಾಡೋ ಕೊನೆ ದಿನವಾಗಿತ್ತು. ಆದ್ರೆ ಟೀಮ್‌ಗೆ ಈ ಆಸ್ಕರ್ ಡೆಡ್‌ಲೈನ್ ಬಗ್ಗೆ ಗೊತ್ತಿರಲಿಲ್ಲವಂತೆ.

ಈ ಬಗ್ಗೆ ಮಾತನಾಡಿದ ಚಿತ್ರದ ನಿರ್ಮಾಪಕಿ ನಮ್ರತಾ ಸಿಂಗ್ ಅಸಲಿ ವಿಚಾರ ಬಿಚ್ಚಿಟ್ಟಿದ್ದಾರೆ. “ಸೆಪ್ಟೆಂಬರ್ 7ಕ್ಕೇ ಆಸ್ಕರ್ ಅಪ್ಲೈ ಮಾಡೋ ಕೊನೆ ದಿನ ಇತ್ತು. ಆದ್ರೆ ಆ ವಿಷಯ ನಮಗೆ ಗೊತ್ತೇ ಇರಲಿಲ್ಲ. ಸಾವಿರಾರು ಜನ ಕಾಲ್ ಮಾಡಿ ಯಾಕೆ ಅಪ್ಲೈ ಮಾಡಿಲ್ಲ? ಎಂದು ಕೇಳಿದಾಗಲೇ ನಮಗೆ ವಿಷಯ ಗೊತ್ತಾಗಿದ್ದು. ನಮ್ಮದು ತುಂಬಾ ಚಿಕ್ಕ ಟೀಮ್, ಸದ್ಯಕ್ಕೆ ನಮಗೆ ಕೆಲಸದ ಒತ್ತಡ ಜಾಸ್ತಿ ಇದೆ, ಹಾಗಾಗಿ ಡೇಟ್ ಮಿಸ್ ಆಯ್ತು” ಎಂದು ವಿವರಿಸಿದ್ದಾರೆ.

ಪ್ರಸ್ತುತ ಸಿನಿಮಾ ಟೀಮ್ ಬೇರೆ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಮೊದಲ ಹಂತವಾಗಿ ತೆಲುಗು ಡಬ್ಬಿಂಗ್ ಕೆಲಸ ಮುಗಿದಿದ್ದು, ಮುಂದೆ ಬೇರೆ ಬೇರೆ ಭಾಷೆಗಳಿಗೂ ಡಬ್ ಮಾಡಿ ರಿಲೀಸ್ ಮಾಡೋ ಪ್ಲಾನ್‌ನಲ್ಲಿದ್ದಾರೆ. ಜೊತೆಗೆ, ವಿಶೇಷ ಚೇತನರಿಗೂ ಸಿನಿಮಾ ಸುಲಭವಾಗಿ ತಲುಪುವಂತೆ ಕೆಲಸ ಮಾಡಲಾಗುತ್ತಿದೆ.

ಆಸ್ಕರ್ ಕೈತಪ್ಪಿರಬಹುದು, ಆದ್ರೆ ಪ್ರೇಕ್ಷಕರ ಮನಸ್ಸಿನಲ್ಲಿ ‘ಹನುಮಾನ್ ಅಂಶ್’ ಈಗಾಗಲೇ ಆಸ್ಕರ್ ಗೆದ್ದಾಗಿದೆ ಅನ್ನೋದಂತೂ ಸುಳ್ಳಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !