September 13, 2026
Sunday, September 13, 2026
spot_img

BRICS ಡಿನ್ನರ್‌ನಲ್ಲೂ ರಾಜಕೀಯ ಕದನ: ಔತಣದ ಮೆನು ಬಗ್ಗೆ ರಾಹುಲ್ ಗಾಂಧಿ-ಬಿಜೆಪಿ ವಾಕ್ಸಮರ

ಹೊಸದಿಗಂತ ಡಿಜಿಟಲ್ ಡೆಸ್ಕ್:

BRICS ಶೃಂಗಸಭೆಯ ವೇಳೆ ವಿದೇಶಿ ಗಣ್ಯರಿಗೆ ತಯಾರಿಸಿದ್ದ ಆಹಾರದ ವಿಚಾರ ಈಗ ವಿಪಕ್ಷದ ಕಣ್ಣು ಕುಕ್ಕಿದೆ. ಶೃಂಗಸಭೆಗೆ ಆಗಮಿಸಿದ ವಿದೇಶಿ ಗಣ್ಯರಿಗೆ ಸಸ್ಯಾಹಾರಿ ಭೋಜನದ ವ್ಯವಸ್ಥೆ ಮಾಡಲಾಗಿದ್ದು ಈ ವಿಚಾರಕ್ಕೆ ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ರಾಗ, ದೇಶದ ಬಹುಪಾಲು ಜನರು ಮಾಂಸಾಹಾರ ಸೇವನೆ ಮಾಡುತ್ತಾರೆ. ನನ್ನ ಸಹೋದರಿಯ (ಪ್ರಿಯಾಂಕಾ ಗಾಂಧಿ) ಕೈಯ ಛೋಲೆ ಭಟೂರೆ ಕೂಡ ಅಷ್ಟೇ ಅದ್ಭುತ ರುಚಿ ನೀಡುತ್ತದೆ ಎಂದು ಚೋಲೆ ಭಟೂರೆಯ ಫೋಟೋ ಹಂಚಿಕೊಂಡಿದ್ದಾರೆ.

BRICS ಶೃಂಗಸಭೆಯ ಆಹಾರದಲ್ಲಿ ಏನೆಲ್ಲಾ ಇತ್ತು?

ಪ್ರಧಾನಿ ಮೋದಿ ಅವರು BRICS ಶೃಂಗಸಭೆಯ ಸಂದರ್ಭದಲ್ಲಿ ಭಾರತ್ ಮಂಟಪದಲ್ಲಿ ನಾಯಕರಿಗಾಗಿ ವಿಶೇಷ ಸಸ್ಯಾಹಾರಿ ಔತಣಕೂಟ ಆಯೋಜಿಸಿದ್ದರು. ಖಾಂಡ್ವಿ, ಪನೀರ್ ಲಬಾಬ್ದಾರ್, ಗುಚ್ಚಿ ಮರ್ಮಿಕ್, ಸಿರಿಧಾನ್ಯ ಪುಲಾವ್, ಮಶ್ರೂಮ್ ಗಲೌಟಿ ಹಾಗೂ ಜಿಲೇಬಿ ಸೇರಿದಂತೆ ಹಲವು ಖಾದ್ಯಗಳನ್ನು ಮೆನುವಿನಲ್ಲಿ ಸೇರಿಸಲಾಗಿತ್ತು. ಸಿರಿಧಾನ್ಯಗಳಿಗೆ ವಿಶೇಷ ಆದ್ಯತೆ ನೀಡಲಾಗಿತ್ತು.

‘ರಾಗ’ಗೆ ರಿಜಿಜು ತಿರುಗೇಟು

ರಾಹುಲ್ ಗಾಂಧಿಗೆ ಕೇಂದ್ರ ಸಚಿವ ಕಿರಣ್ ರಿಜಿಜು ತಿರುಗೇಟು ನೀಡಿದ್ದು, BRICS ನಾಯಕರಿಗೆ ನೀಡಿದ ಆಹಾರದ ಮೆನು ಮೇಲೆಯೂ ಕಾಂಗ್ರೆಸ್ ರಾಜಕೀಯ ಮಾಡುತ್ತಿರುವುದು ಆಶ್ಚರ್ಯಕರವಾಗಿದೆ ಎಂದು ಅವರು ಟೀಕಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !