November 11, 2026
Wednesday, November 11, 2026
spot_img

CINE | ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ ‘ರಾಮಾಯಣ’: 6 ದಿನಕ್ಕೆ ವಿಶ್ವಾದ್ಯಂತ 823 ಕೋಟಿ ರೂ. ಕಲೆಕ್ಷನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಣಬೀರ್ ಕಪೂರ್ ಮತ್ತು ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ: ಭಾಗ 1’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಮುಂದುವರಿಸಿದೆ. ಸೋಮವಾರ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ದಾಖಲೆಯನ್ನು ಬರೆದಿದ್ದ ಸಿನಿಮಾ, ಮಂಗಳವಾರದಂದು ಗಳಿಕೆಯಲ್ಲಿ ಶೇ.12.5ರಷ್ಟು ಇಳಿಕೆ ಕಂಡಿದೆ. ಆದರೂ ವಿಶ್ವಾದ್ಯಂತ ಚಿತ್ರದ ಒಟ್ಟು ಗಳಿಕೆ 823.50 ಕೋಟಿ ರೂ. ತಲುಪಿರುವುದು ಸಿನಿಪ್ರೇಮಿಗಳ ಗಮನ ಸೆಳೆದಿದೆ.

ಆರನೇ ದಿನವೂ 94 ಕೋಟಿ ರೂ. ಗಳಿಕೆ

ವರದಿಗಳ ಪ್ರಕಾರ, ಸೋಮವಾರ 107.50 ಕೋಟಿ ರೂ. ಗಳಿಸಿದ್ದ ಚಿತ್ರ ಮಂಗಳವಾರ 94.10 ಕೋಟಿ ರೂ. ಸಂಗ್ರಹಿಸಿದೆ. ಈ ಮೂಲಕ ಆರು ದಿನಗಳ ಭಾರತದಲ್ಲಿನ ನಿವ್ವಳ ಗಳಿಕೆ 440.45 ಕೋಟಿ ರೂ.ಗೆ ಏರಿಕೆಯಾಗಿದೆ. ಭಾರತದ ಒಟ್ಟು ಗಳಿಕೆ 526.50 ಕೋಟಿ ರೂ. ತಲುಪಿದೆ. ಜಾಗತಿಕ ಮಾರುಕಟ್ಟೆಯಲ್ಲಿಯೂ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ಇದನ್ನೂ ಓದಿ:

ಬೆಂಗಳೂರಿನಲ್ಲಿ ಹಿಂದಿ 3D ಆವೃತ್ತಿಗೆ ಭರ್ಜರಿ ಪ್ರತಿಕ್ರಿಯೆ

ಚಿತ್ರದ ಹಿಂದಿ ಆವೃತ್ತಿಯ ಮಂಗಳವಾರದ ಒಟ್ಟಾರೆ ಪ್ರದರ್ಶನದ ಆಕ್ಯುಪೆನ್ಸಿ ಶೇ.54.6ರಷ್ಟಿತ್ತು. ಆದರೆ ಬೆಂಗಳೂರಿನಲ್ಲಿ ಹಿಂದಿ 3D ಆವೃತ್ತಿಗೆ ಶೇ.90.5ರಷ್ಟು ಆಕ್ಯುಪೆನ್ಸಿ ದಾಖಲಾಗಿದ್ದು, 265 ಪ್ರದರ್ಶನಗಳಲ್ಲಿ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಜೈಪುರದಲ್ಲಿ ಶೇ.73, ಮುಂಬೈನಲ್ಲಿ ಶೇ.66.3 ಹಾಗೂ ದೆಹಲಿ-ಎನ್‌ಸಿಆರ್‌ನಲ್ಲಿ ಶೇ.57.8ರಷ್ಟು ಆಕ್ಯುಪೆನ್ಸಿ ವರದಿಯಾಗಿದೆ. ಕನ್ನಡ ಆವೃತ್ತಿಯಲ್ಲೂ ಶೇ.80.7ರಷ್ಟು ಆಕ್ಯುಪೆನ್ಸಿ ದಾಖಲಾಗಿದೆ.

4,000 ಕೋಟಿ ರೂ. ಬಜೆಟ್‌ನ ಮಹತ್ವಾಕಾಂಕ್ಷಿ ಸಿನಿಮಾ

ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ ಹಾಗೂ ಯಶ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ. ಸಾಯಿ ಪಲ್ಲವಿ ಸೀತೆಯಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ನಟಿಸಿದ್ದಾರೆ. ಸುಮಾರು 4,000 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರ 2026ರ ಜಾಗತಿಕ ಗಳಿಕೆಯಲ್ಲಿ ಮೂರನೇ ಸ್ಥಾನಕ್ಕೇರಿದೆ. ‘ಧುರಂಧರ್: ದಿ ರಿವೆಂಜ್’ ಮತ್ತು ‘ಜೈಲರ್ 2’ ಮಾತ್ರ ಇದಕ್ಕಿಂತ ಮುಂದಿವೆ.

Must Read

Skip to toolbar