ಹೊಸದಿಗಂತ ಡಿಜಿಟಲ್ ಡೆಸ್ಕ್
ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಥಿಯೇಟರ್ಗೆ ಬಂದಾಗ ಇದ್ದ ಹೈಪ್ ನೋಡಿದ್ರೆ, ಇದು ಬಾಕ್ಸ್ ಆಫೀಸ್ ಸುನಾಮಿನೇ ಎಬ್ಬಿಸುತ್ತೆ ಎಂದು ಎಲ್ಲರೂ ಅಂದುಕೊಂಡಿದ್ರು. ಆದ್ರೆ, ಈಗಿನ್ನ ಕಲೆಕ್ಷನ್ ಲೆಕ್ಕಾಚಾರ ನೋಡಿದ್ರೆ ಕಥೆ ಪೂರ್ತಿ ಉಲ್ಟಾ ಹೊಡೆದಿದೆ. ಸಿನಿಮಾ ಈಗ ಥಿಯೇಟರ್ಗಳಲ್ಲಿ ತನ್ನ ಓಟವನ್ನು ಮುಗಿಸುವ ಹಂತಕ್ಕೆ ಬಂದಿದ್ದು, ಭಾರತದಲ್ಲಿ 267 ಕೋಟಿ ಮತ್ತು ವಿದೇಶಗಳಿಂದ ಸುಮಾರು 45.50 ಕೋಟಿ ಕಲೆಕ್ಷನ್ ಮಾಡಿದೆ. ಅಂದ್ರೆ, ವರ್ಲ್ಡ್ವೈಡ್ ಟೋಟಲ್ ಕಲೆಕ್ಷನ್ 312.50 ಕೋಟಿ ಅಷ್ಟೇ.

ನಿಜ ಹೇಳ್ಬೇಕಂದ್ರೆ, ಈ ಸಿನಿಮಾದ ಕಥೆ ಮೊದಲ ವೀಕೆಂಡ್ ಮುಗಿಯೋಷ್ಟರಲ್ಲೇ ಕ್ಲೋಸ್ ಆಗಿಹೋಗಿತ್ತು. ರಿಲೀಸ್ ಆದ ಮೊದಲ ದಿನವೇ ಭಾರತದಲ್ಲೇ ಬರೋಬ್ಬರಿ 112 ಕೋಟಿ ಕಲೆಕ್ಟ್ ಮಾಡಿ, ಅಚ್ಚರಿ ಪಡಿಸಿದ್ದು ನಿಜ. ಆದ್ರೆ, ಥಿಯೇಟರ್ನಿಂದ ಆಚೆ ಬಂದ ಜನರಿಂದ ಪಾಸಿಟಿವ್ ಟಾಕ್ ಸಿಗಲಿಲ್ಲ. ಆಡಿಯನ್ಸ್ ರೆಸ್ಪಾನ್ಸ್ ಡಲ್ ಆದ ತಕ್ಷಣ, ಎರಡನೇ ದಿನದಿಂದಲೇ ಕಲೆಕ್ಷನ್ ಡೌನ್ ಆಯ್ತು. ವಾರದ ದಿನಗಳಲ್ಲಿ ಜನ ಥಿಯೇಟರ್ ಕಡೆ ಮುಖ ಮಾಡಲೇ ಇಲ್ಲ. ಆದರೂ, ಆ ಫಸ್ಟ್ ವೀಕ್ ಪೂರ್ತಿ ಸೇರಿ ಭಾರತದಲ್ಲಿ 256 ಕೋಟಿ ಗಳಿಸಿತ್ತು.

ಆದ್ರೆ ಅಸಲಿ ಪೆಟ್ಟು ಬಿದ್ದಿದ್ದೇ ಎರಡನೇ ವಾರದಲ್ಲಿ. ಮೇಜರ್ ಥಿಯೇಟರ್ಗಳಿಂದ ಸಿನಿಮಾ ಎತ್ತಂಗಡಿ ಆಯ್ತು. 2ನೇ ವಾರದಲ್ಲಿ ಸಿನಿಮಾ ಕಲೆಕ್ಟ್ ಮಾಡಿದ್ದು ಜಸ್ಟ್ 9 ಕೋಟಿ. ಇನ್ನು ಮೂರನೇ ವೀಕೆಂಡ್ ಬರೋಷ್ಟರಲ್ಲೇ ಕಲೆಕ್ಷನ್ ಬರಿ 75 ಲಕ್ಷಕ್ಕೆ ಬಂದು ನಿಂತಿದೆ. ಇದ್ರಲ್ಲೂ ಮುಕ್ಕಾಲು ಭಾಗ ಹಣ ಬಂದಿರೋದು ನಮ್ಮ ಕರ್ನಾಟಕದಿಂದಲೇ.

ಬಾಕ್ಸ್ ಆಫೀಸ್ ಕಥೆ ಹೀಗಿದ್ರೆ, ನಿರ್ಮಾಪಕರ ಜೇಬಿಗೆ ಬಿದ್ದ ನಷ್ಟವೇ ಬೇರೆ. ಬಜೆಟ್ ಮತ್ತು ಕಲೆಕ್ಷನ್ ಲೆಕ್ಕ ಹಾಕಿದ್ರೆ, ಈ ಸಿನಿಮಾ ಸುಮಾರು 300 ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದೆ ಎಂದು ಟ್ರೇಡ್ ರಿಪೋರ್ಟ್ ಹೇಳ್ತಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಇಷ್ಟೊಂದು ದೊಡ್ಡ ಮಟ್ಟದ ಫೈನಾನ್ಷಿಯಲ್ ಲಾಸ್ ಅನುಭವಿಸಿದ ಸಿನಿಮಾ ಬಹುಶಃ ಬೇರೊಂದಿಲ್ಲ. ದೊಡ್ಡ ಬಜೆಟ್, ದೊಡ್ಡ ಹೈಪ್ ಇದ್ದರೂ, ಕಂಟೆಂಟ್ ಜನರಿಗೆ ಕನೆಕ್ಟ್ ಆಗದಿದ್ರೆ ಬಾಕ್ಸ್ ಆಫೀಸ್ನಲ್ಲಿ ರಿಸಲ್ಟ್ ಏನಾಗುತ್ತೆ ಅನ್ನೋದಕ್ಕೆ ‘ಟಾಕ್ಸಿಕ್’ ರಿಸಲ್ಟೇ ಸಾಕ್ಷಿ.



