ಮೇಷ
ಕೆಲವರ ನಡೆನುಡಿ ನಿಮ್ಮ ಮನಸ್ಸಿಗೆ ಒಪ್ಪಿಗೆ ಆಗದಿರಬಹುದು. ಆದರೂ ಹೊಂದಾಣಿಕೆ ಸಾಧಿಸಿ. ಸಂಘರ್ಷದಿಂದ ಕೆಲಸ ಆಗಲಾರದು.
ವೃಷಭ
ಈ ದಿನವು ನಿಮಗೆ ಪೂರಕವಾಗಿ ಆರಂಭವಾಗದಿದ್ದರೂ ಬಳಿಕ ಎಲ್ಲವೂ ಸುಸೂತ್ರವಾಗಲಿದೆ. ಸಮಸ್ಯೆ ಪರಿಹಾರ.
ಮಿಥುನ
ಖಾಸಗಿ ಹಿತಾಸಕ್ತಿಗೆ ಗಮನ ಕೊಡಲು ಸಾಧ್ಯವಾಗದ ಸ್ಥಿತಿ. ಇತರರ ಕಾರ್ಯ ಮಾಡುವುದರಲ್ಲೆ ಕಳೆಯುವಿರಿ. ಹಣದ ಅಡಚಣೆ ನಿವಾರಣೆ.
ಕಟಕ
ಅತಿಯಾದ ಭಾವುಕ ವರ್ತನೆ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಅನ್ಯರ ಟೀಕೆಗೆ ಹೆಚ್ಚು ಗಮನ ಕೊಡದಿರಿ.
ಸಿಂಹ
ಕುಟುಂಬದ ನೆಮ್ಮದಿ ಹಾಳಾಗುವ ಕಾರ್ಯದಿಂದ ದೂರವಿರಿ. ಚಾಡಿಮಾತು ನಂಬದಿರಿ. ಸೌಹಾರ್ದದಿಂದ ಸಮಸ್ಯೆ ಪರಿಹರಿಸಿ.
ಕನ್ಯಾ
ನಿಮ್ಮ ಹಳೆಯ ಕಾರ್ಯವೊಂದು ಈಗ ಪರಿಣಾಮ ಬೀರಲಿದೆ. ತಪ್ಪೆಸಗಿದ್ದರೆ ಸರಿಪಡಿಸಲು ಯತ್ನಿಸಿ. ಉದ್ಯಮದ ಅಡ್ಡಿ ಪರಿಹಾರ.
ತುಲಾ
ಎಲ್ಲ ಇದ್ದೂ ಏಕೋ ನೆಮ್ಮದಿ ದೂರವಾದ ಮನಸ್ಥಿತಿ ನಿಮ್ಮದು. ಆಪ್ತರ ವರ್ತನೆಯಿಂದ ಬೇಸರ. ಕೆಲವು ಪರಿಸ್ಥಿತಿ ನಿಭಾಯಿಸಲು ಆಗದು.
ವೃಶ್ಚಿಕ
ಕೆಲವರ ವರ್ತನೆ ನಿಮ್ಮ ಮನಶ್ಯಾಂತಿ ಕಲಕಬಹುದು. ನಿಮ್ಮ ವ್ಯವಹಾರದಲ್ಲಿ ಅವರು ಮೂಗು ತೂರಿಸುತ್ತಾರೆ. ಅವಕಾಶ ನೀಡದಿರಿ.
ಧನು
ಅಪನಿಂದೆ ಕೇಳುವಿರಿ. ನಿಮ್ಮ ವರ್ತನೆಯು ಅದಕ್ಕೆ ಕಾರಣವೆ ಎಂದು ಪರಿಶೀಲಿಸಿಕೊಳ್ಳಿ. ಹಣದ ಸಮಸ್ಯೆ ನಿವಾರಣೆ.
ಮಕರ
ಬೆರೆತು ಬಾಳಲು ಕಲಿಯಿರಿ. ಎಲ್ಲರಿಂದ ದೂರವಾಗದಿರಿ. ಕೌಟುಂಬಿಕ ಸಮಸ್ಯೆ ಶಾಂತಿಯಿಂದ ಬಗೆಹರಿಸಿರಿ.
ಕುಂಭ
ಒಂದು ಚಿಂತೆ ಮುಗಿದೊಡನೆ ಮತ್ತೊಂದು ಚಿಂತೆ ಕಾಡುವುದು. ಆತ್ಮೀಯರ ಒಡನಾಟ ನೆಮ್ಮದಿ ತರಲಿದೆ.
ಮೀನ
ಅತಿಯಾದ ಕೆಲಸದ ಒತ್ತಡ. ಸುಲಲಿತ ಕಾರ್ಯವೂ ಕಷ್ಟಕರವಾಗಿ ಪರಿಣಮಿಸುವುದು. ಉದ್ವಿಗ್ನ ಮನಸ್ಥಿತಿ. ಕೌಟುಂಬಿಕ ಸಹಕಾರ.



