September 16, 2026
Wednesday, September 16, 2026
spot_img

FOOD | ಊಟದ ರುಚಿ ಹೆಚ್ಚಿಸುವ ಮೂಲಂಗಿ ಮೊಸರು ಬಜ್ಜಿ: ಮನೆಯಲ್ಲೇ ಸುಲಭವಾಗಿ ಟ್ರೈ ಮಾಡಿ

ಮೂಲಂಗಿ ಬಳಸಿ ಮಾಡುವ ಈ ಮೊಸರು ಬಜ್ಜಿ ಅನ್ನ, ಪಲಾವ್, ಅಥವಾ ಯಾವುದೇ ರೀತಿಯ ಬಾತ್ ಐಟಂ ಮಾಡಿದ್ರೆ ಅದ್ರ ಜೊತೆಗೆ ತಿನ್ನೋದಕ್ಕೆ ನೆಕ್ಸ್ಟ್ ಲೆವೆಲ್ ಆಗಿರುತ್ತೆ. ಮೂಲಂಗಿ ತಿನ್ನದೇ ಇರೋರು ಕೂಡ ಈ ಮೊಸರು ಬಜ್ಜಿಯನ್ನು ಕೇಳಿ ಕೇಳಿ ಹಾಕಿಸ್ಕೊಂಡು ತಿಂತಾರೆ ನೋಡಿ.

ಏನೆಲ್ಲಾ ಬೇಕು?

ಮೂಲಂಗಿ – 1 ಮಧ್ಯಮ ಗಾತ್ರ
ದಪ್ಪ ಮೊಸರು – 1 ಕಪ್
ಹಸಿಮೆಣಸಿನಕಾಯಿ – 1–2
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ
ಎಣ್ಣೆ – 1 ಟೀಸ್ಪೂನ್
ಸಾಸಿವೆ – ½ ಟೀಸ್ಪೂನ್
ಉದ್ದಿನಬೇಳೆ – ½ ಟೀಸ್ಪೂನ್
ಜೀರಿಗೆ – ¼ ಟೀಸ್ಪೂನ್
ಇಂಗು – ಒಂದು ಚಿಟಿಕೆ
ಕರಿಬೇವು – ಸ್ವಲ್ಪ

ಮಾಡೋದು ಹೇಗೆ?

ಮೂಲಂಗಿಯನ್ನು ತುರಿದು ಸ್ವಲ್ಪ ಉಪ್ಪು ಹಾಕಿ 5 ನಿಮಿಷ ಹಾಗೆಯೆ ಬಿಡಿ. ನಂತರ ಅದ್ರಲ್ಲಿ ಬಂದಿರುವ ನೀರನ್ನು ಹಿಂಡಿ ತೆಗೆದುಕೊಳ್ಳಿ.

ಒಂದು ಬೌಲ್‌ನಲ್ಲಿ ಮೊಸರನ್ನು ಚೆನ್ನಾಗಿ ಕದಡಿ, ಮೂಲಂಗಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಸೇರಿಸಿ ಇಟ್ಟುಕೊಳ್ಳಿ.

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಉದ್ದಿನಬೇಳೆ, ಜೀರಿಗೆ, ಇಂಗು ಹಾಗೂ ಕರಿಬೇವು ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಯನ್ನು ಮೊಸರು ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕಲಸಿ. ಮಾಡಿದ ತಕ್ಷಣ ತಿಂದ್ರೆ ರುಚಿ ಹೆಚ್ಚು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !