September 15, 2026
Tuesday, September 15, 2026
spot_img

ಬರದ ತೀವ್ರತೆ ಹೆಚ್ಚಾಗಲಿದೆ! ಜನರು ಮೆಂಟಲಿ ಪ್ರಿಪೇರ್‌ ಆಗಬೇಕು ಎಂದ ಸಿಎಂ ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದ ಮಳೆಗಾಲ ಅಂತ್ಯಕ್ಕೆ ಬಂದರೂ ಎಷ್ಟೋ ಜಿಲ್ಲೆಗಳ ಜನರು ಮಳೆಯನ್ನು ನೋಡಿಯೂ ಇಲ್ಲ! ಹಲವು ಜಿಲ್ಲೆಗಳಲ್ಲಿ ಹದಿನೈದು ದಿನಕ್ಕೊಮ್ಮೆ ಮಾತ್ರ ಮಳೆ ಬಿದ್ದಿದ್ದು, ಸೆಪ್ಟೆಂಬರ್‌ನಲ್ಲಿಯೇ ಬೇಸಿಗೆ ಅನುಭವವಾಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ತೀವ್ರ ಬರ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಹಾಗೂ ನೀರು, ವಿದ್ಯುತ್‌ ಸಮಸ್ಯೆ ತಪ್ಪಿದ್ದಲ್ಲ. ಇದಕ್ಕೆ ರಾಜ್ಯದ ಜನ ಮಾನಸಿಕವಾಗಿ ಸಿದ್ಧರಾಗಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿ, ರಾಜ್ಯದಲ್ಲಿ ಮಳೆ ಬಿದ್ದಿಲ್ಲ, ಬೀಳೋ ಚಾನ್ಸ್‌ ಕೂಡ ತುಂಬಾ ಕಡಿಮೆ. ಈ ಸಮಯದಲ್ಲಿ ರಾಜಕೀಯ ಬದಿಗಿಟ್ಟು ಮಂದೆ ಬರುವ ಪರಿಸ್ಥಿತಿಯನ್ನು ಅವಲೋಕನ ಮಾಡಬೇಕು. ಶಾಸಕರು ಆತಂಕಪಡುವ ಅಗತ್ಯವಿಲ್ಲ ಹಾಗೂ ರಾಜಕೀಯ ಉದ್ದೇಶಕ್ಕಾಗಿ ಪ್ರತಿಭಟನೆ ನಡೆಸಬಾರದು ಎಂದು ಮನವಿ ಮಾಡಿದರು. ಪ್ರತಿಪಕ್ಷಗಳು ಪರಿಸ್ಥಿತಿಯನ್ನು ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸುತ್ತಿವೆ ಎಂದು ಅವರು ಆರೋಪಿಸಿದರು.

ಕೇಂದ್ರ ಸರ್ಕಾರದ ತಂಡ ರಾಜ್ಯದ ಪರಿಸ್ಥಿತಿಯನ್ನು ಹತ್ತಿರದಿಂದ ನೋಡಬೇಕು. ವರದಿ ಸಿದ್ಧಪಡಿಸುವ ಮುನ್ನ ಗ್ರೌಂಡ್‌ ರಿಪೋರ್ಟ್‌ ಪಡೆಯಬೇಕು. ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿದ್ದರೂ ಕೆಲ ಪ್ರದೇಶಗಳಲ್ಲಿ ಮಾತ್ರ ಅಲ್ಪ ಪ್ರಮಾಣದ ಮಳೆಯಾಗಿದೆ. ಕೆಲ ಪ್ರದೇಶಗಳಲ್ಲಿ ಅಧ್ಯಯನ ಪೂರ್ಣಗೊಂಡಿದ್ದು, ವರದಿಗಳು ಬಂದಿವೆ. ಉಳಿದ ಪ್ರದೇಶಗಳ ವರದಿಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಕುಡಿಯುವ ನೀರಿನ ಪೂರೈಕೆಗೆ ಎಲ್ಲ ವ್ಯವಸ್ಥೆಗಳನ್ನು ಮಾಡುತ್ತೇವೆ. ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ವಿಶೇಷ ಅಧಿವೇಶನ ಕರೆಯುತ್ತಿದ್ದೇವೆ. ಜನರು ಮುಂಬರುವ ದಿನಗಳಿಗೆ ಜನರು ಮೆಂಟಲಿ ಪ್ರಿಪೇರ್‌ ಆಗಬೇಕು ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !