ಹೊಸದಿಗಂತ ವರದಿ ಯಲ್ಲಾಪುರ:
ಪಟ್ಟಣದ ಸಬಗೇರಿ ಬಳಿ ನಾರಾಯಣಪುರ ಅರಣ್ಯ ಸರ್ವೆ ನಂ. 4ಎ ನಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಸಾಗಿಸಿರುವ ಘಟನೆ ನಡೆದಿದೆ.
ಕಳ್ಳರು ಹಸಿ ಹಾಗೂ ಉತ್ತಮ ತಿರುಳಿಲ್ಲದ ಮರಗಳನ್ನು ಕಡಿದು, ಕೆಲವು ಭಾಗಗಳನ್ನು ಸಾಗಿಸಿ, ತುದಿ ಹಾಗೂ ಬುಡದ ಭಾಗಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಸಿ ಶ್ರೀಗಂಧದ ಬುಡದ ತುಂಡುಗಳು – 44 ಕೆ.ಜಿ,- ತಿರುಳಿಲ್ಲದ, ಹಸಿ ಮತ್ತು ಸಿಪ್ಪೆ ಸಹಿತ ತುಂಡುಗಳು – 85 ಕೆ.ಜಿ
ಒಟ್ಟು – 129 ಕೆ.ಜಿ ಶ್ರೀಗಂಧದ ತುಂಡುಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ.
ಆರೋಪಿತರು ಇನ್ನೂ ಪತ್ತೆಯಾಗಿಲ್ಲ. ಜೆಎಂಎಫ್ಸಿ ನ್ಯಾಯಾಲಯದ ಅನುಮತಿ ಪಡೆದು ಪ್ರಥಮ ವರ್ತಮಾನ ವರದಿ ಸಲ್ಲಿಸಲಾಗಿದ್ದು, ಆರೋಪಿಗಳಿಗಾಗಿ ತನಿಖೆ ಮುಂದುವರಿದಿದೆ.



