ಸಾಮಾಗ್ರಿಗಳು
ಗೋಧಿ ಹಿಟ್ಟು
ಕಡ್ಲೆಹಿಟ್ಟು
ಕಸೂರಿ ಮೇಥಿ
ಖಾರದಪುಡಿ
ಜೀರಿಗೆ
ಅರಿಶಿಣ
ಇಂಗು
ಎಣ್ಣೆ
ಉಪ್ಪು
ನೀರು
ಮಾಡುವ ವಿಧಾನ
ದೊಡ್ಡ ಪಾತ್ರೆಗೆ ಗೋಧಿ ಹಿಟ್ಟು, ಕಡಲೆ ಹಿಟ್ಟು, ಅಚ್ಚಕಾರದ ಪುಡಿ, ಅರಿಶಿನ, ಓಂ ಕಾಳು/ಜೀರಿಗೆ, ಕಸೂರಿ ಮೇಥಿ, ಇಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ 2 ಚಮಚ ಎಣ್ಣೆ ಹಾಕಿ. ನಂತರ ನೀರನ್ನು ಹಾಕುತ್ತಾ ಗಟ್ಟಿಯಾಗಿ ಕಲಸಿಕೊಳ್ಳಿ. ನಂತರ ಇದನ್ನು ಅರ್ಧಗಂಟೆ ನೆನೆಯಲು ಬಿಟ್ಟುಬಿಡಿ
ಆನಂತರ ಮತ್ತೊಮ್ಮೆ ಚೆನ್ನಾಗಿ ನಾದಿ, ನಂತರ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಗೋಧಿಹಿಟ್ಟಿಗೆ ಅದ್ದಿ ಚಪಾತಿ ರೀತಿ ತೆಳುವಾಗಿ ಲಟ್ಟಿಸಿ. ನಂತರ ಕಾದ ತವಾ ಮೇಲೆ ಹಾಕಿ ಸಣ್ಣ ಉರಿಯಲ್ಲಿ ಎರಡೂ ಕಡೆ ಬೇಯಿಸಿ ಒಣಗಲು ಬಿಡಿ.
ಒಣಗಿದ ನಂತರ ಗರಿಗರಿಯಾದ ಖಾಕ್ರಾ ತಯಾರಾಗುತ್ತದೆ. ಕ್ಲೀನ್ ಆಗಿ ಡಬ್ಬಿಯಲ್ಲಿ ಗಾಳಿಯಾಡದಂತೆ ಸ್ಟೋರ್ ಮಾಡಿ ಇಟ್ಟರೆ ಒಂದು ತಿಂಗಳವರೆಗೂ ಇದು ಹಾಳಾಗೋದಿಲ್ಲ.



