September 20, 2026
Sunday, September 20, 2026
spot_img

ದಿನಭವಿಷ್ಯ | ವದಂತಿಗಳಿಂದ ಆಪ್ತರನ್ನು ಶಂಕಿಸದಿರಿ; ಹಿರಿಯರ ಆರೋಗ್ಯದ ಮೇಲಿರಲಿ ವಿಶೇಷ ನಿಗಾ

ಮೇಷ
 ಉದ್ಯೋಗದ ಒತ್ತಡ ಇಂದಿಲ್ಲ. ಸಂಬಂಧವನ್ನು ಜಾಣತನದಿಂದ ಕಾಪಾಡಿ. ವದಂತಿ ನಂಬಿ ಆಪ್ತರ ಬಗ್ಗೆ ಶಂಕಿಸದಿರಿ. ಹಿರಿಯರಿಗೆ ಉಸಿರಾಟದ ಸಮಸ್ಯೆ.
ವೃಷಭ
ಇತರರ ಜತೆ ಸಂವಹನ ಸಾಧಿಸುವಲ್ಲಿ ಯಶಸ್ಸು. ಇದರಿಂದ ನಿಮ್ಮ ಕೆಲಸ ಸುಗಮ. ಆಪ್ತರ ಜತೆ ಪ್ರವಾಸ ಸಾಧ್ಯತೆ. ಆರ್ಥಿಕ ಉನ್ನತಿ.  
ಮಿಥುನ
ಪಾಲುದಾರಿಕೆ ಕಡಿದುಕೊಳ್ಳದಿರಿ. ಸೌಹಾರ್ದತೆ ಮುಖ್ಯ. ವಿರೋಧ ಕಟ್ಟಿಕೊಳ್ಳದಿರಿ. ಕೌಟುಂಬಿಕ ಸೌಹಾರ್ದ. ಆರ್ಥಿಕ ಪ್ರಗತಿ.
ಕಟಕ
 ಕಾಲಮಿತಿಯಲ್ಲಿ ಕೆಲಸ ಪೂರೈಸಿ. ಟೀಕೆಗೆ ಎರವಾಗಬೇಡಿ. ವೃತ್ತಿ ಬದಲಾವಣೆಯ ಅವಕಾಶ ತೆರೆದಿದೆ. ಹೊಸ ಹೂಡಿಕೆ ಒಳಿತು ತಾರದು.
ಸಿಂಹ
ನಿಮ್ಮ ಕೆಲಸ ನೀವು ಮಾಡುತ್ತಿರಿ. ಟೀಕೆಗೆ ಹೆದರಬೇಕಿಲ್ಲ. ಆರ್ಥಿಕ ತೊಡಕು ನಿವಾರಣೆ. ಕೌಟುಂಬಿಕ ಶಾಂತಿ ಕೆಡಲು ಅವಕಾಶ ಕೊಡದಿರಿ.
ಕನ್ಯಾ
ಆಪ್ತರ ಜತೆಗಿನ ಉದ್ವಿಗ್ನತೆ ಹೆಚ್ಚಲಿದೆ. ಮನಶ್ಯಾಂತಿ ದೂರ. ವೃತ್ತಿಯಲ್ಲಿ ಅಹಿತ ಪ್ರಸಂಗ ಎದುರಿಸುವಿರಿ. ಖರ್ಚು ಹೆಚ್ಚಲಿದೆ.
ತುಲಾ
ವೃತ್ತಿಯ ಒತ್ತಡವು ನೆಮ್ಮದಿ ಕೆಡಿಸಬಹುದು. ಆತ್ಮೀಯರ ಜತೆ ಕಾಲ ಕಳೆಯಿರಿ. ಕೆಲವರ ವರ್ತನೆ ಅಸಹನೀಯ ಎನಿಸಿದರೂ ತಾಳಿಕೊಳ್ಳಿ.      
ವೃಶ್ಚಿಕ
ನಿಮ್ಮ ಕ್ಷೇತ್ರದಲ್ಲಿ ನಿಮಗೆ ಪ್ರತಿಸ್ಪರ್ಧೆ ಹುಟ್ಟಿಕೊಳ್ಳಲಿದೆ. ನಿಮ್ಮ ನಿರ್ವಹಣೆ ಉತ್ತಮ ಪಡಿಸಿ. ಕೌಟುಂಬಿಕ ಸಾಮರಸ್ಯ, ಸೌಹಾರ್ದ.      
ಧನು
ಹಲವಾರು ಹೊಣೆ ನಿಮ್ಮ ಹೆಗಲೇರುವುದು. ಸೂಕ್ತ ನೆರವೂ ಲಭ್ಯ. ಹೊಟ್ಟೆ ಸಂಬಂಧ ಅಸೌಖ್ಯ ಕಾಡಬಹುದು. ಸ್ವಂತ ವ್ಯವಹಾರ ಲಾಭಕರ.      
ಮಕರ
ಸಣ್ಣ ವಿಷಯಕ್ಕೆ ಮನೆಯಲ್ಲಿ ವಾಗ್ವಾದ ನಡೆದೀತು. ಮಾತಿಗೆ ಮಾತು ಕೂಡಿಸಬೇಡಿ. ವೃತ್ತಿ ಒತ್ತಡ ನಿವಾರಣೆ, ಗುರಿ ಈಡೇರಿಕೆ.        
ಕುಂಭ
ಹರ್ಷತರುವ ಬೆಳವಣಿಗೆ. ಆದರೂ ನಿಮಗೆ ಆನಂದಿಸುವ ಮನಸ್ಸಿಲ್ಲ. ಪ್ರೀತಿಯಲ್ಲಿ ತೊಡಕು. ಖರ್ಚು ಹೆಚ್ಚಳದ ಆತಂಕ.              
ಮೀನ
ನಿಮ್ಮ ಸುತ್ತ ಸೌಹಾರ್ದಮಯ ಪರಿಸರ. ನಿರೀಕ್ಷಿಸಿದ ಆರ್ಥಿಕ ಪ್ರಗತಿ ಸಾಧ್ಯವಾಗದು. ಗಾಯದ ಸಮಸ್ಯೆ ಸಂಭವ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !