September 20, 2026
Sunday, September 20, 2026
spot_img

Food | ಹಣ್ಣಾದ ಬಾಳೆಹಣ್ಣು ಬಿಸಾಡ್ಬೇಡಿ.. ಬಾಯಲ್ಲಿ ನೀರೂರಿಸೋ ಸ್ಪೆಷಲ್ ಹಲ್ವಾ ಮಾಡಿ

ಹಣ್ಣಾದ ಬಾಳೆಹಣ್ಣು

ಬೆಲ್ಲ

ತುಪ್ಪ

ಏಲಕ್ಕಿ ಪುಡಿ

ಗೋಡಂಬಿ, ದ್ರಾಕ್ಷಿ

ಮೊದಲು ಬಾಳೆಹಣ್ಣಿನ ಸಿಪ್ಪೆ ತೆಗೆದು ಹಣ್ಣನ್ನು ಮಿಕ್ಸಿ ಜಾರ್‌ಗೆ ಹಾಕಿ ನಯವಾಗಿ ರುಬ್ಬಿಕೊಳ್ಳಿ. ಬಾಣಲೆಗೆ ಒಂದೆರಡು ಚಮಚ ತುಪ್ಪ ಹಾಕಿ, ಗೋಡಂಬಿ-ದ್ರಾಕ್ಷಿ ಹಾಕಿ ಹೊಂಬಣ್ಣ ಬರೋವರೆಗೆ ಹುರಿದು ಪಕ್ಕಕ್ಕೆ ಎತ್ತಿಟ್ಟುಕೊಳ್ಳಿ. ಅದೇ ಬಾಣಲೆಗೆ ರುಬ್ಬಿಟ್ಟ ಬಾಳೆಹಣ್ಣಿನ ಪೇಸ್ಟ್ ಹಾಕಿ, ಸಣ್ಣ ಉರಿಯಲ್ಲೇ ಚೆನ್ನಾಗಿ ಕೈಯಾಡಿಸಿ. ಬಾಳೆಹಣ್ಣಿನ ಹಸಿ ವಾಸನೆ ಹೋಗಿ, ತುಪ್ಪದ ಜೊತೆ ಮಿಕ್ಸ್ ಆಗಲಿ. ಈಗ ಬೆಲ್ಲ ಹಾಕಿ ಚೆನ್ನಾಗಿ ತಿರುಗಿಸಿ. ಬೆಲ್ಲ ಕರಗಿ ಹಲ್ವಾ ಗಟ್ಟಿಯಾಗೋಕೆ ಶುರುವಾಗುತ್ತದೆ. ಹಲ್ವಾ ತಳ ಬಿಡೋಕೆ ಶುರುವಾದಾಗ, ಉಳಿದ ತುಪ್ಪ ಮತ್ತು ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ. ಹಲ್ವಾ ಬಾಣಲೆಗೆ ಅಂಟದೆ ಉಂಡೆಯಂತೆ ಬರುವಾಗ ಹುರಿದಿಟ್ಟ ಗೋಡಂಬಿ-ದ್ರಾಕ್ಷಿ ಸೇರಿಸಿ ಗ್ಯಾಸ್ ಆಫ್ ಮಾಡಿ.

ಅಷ್ಟೇ.. ಬಿಸಿಬಿಸಿಯಾದ, ಘಮಘಮ ಅನ್ನೋ ಬಾಳೆಹಣ್ಣಿನ ಹಲ್ವಾ ರೆಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !