September 20, 2026
Sunday, September 20, 2026
spot_img

ರಾಯಲ್ ಎನ್‌ಫೀಲ್ಡ್ ಏರಿದ ಶಿವಶ್ರೀ: ತೇಜಸ್ವಿ ಸೂರ್ಯ ಪತ್ನಿಯ ಹೊಸ ಅವತಾರ ನೋಡಿ ನೆಟ್ಟಿಗರು ಶಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಗೀತದ ವೇದಿಕೆಯಲ್ಲಿ ಮನಗೆದ್ದ ಶಿವಶ್ರೀ ಸ್ಕಂದಪ್ರಸಾದ್ ಇದೀಗ ಬೈಕ್ ರೈಡ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ, ಬೆಂಗಳೂರಿನ ರಸ್ತೆಗಳಲ್ಲಿ ರಾಯಲ್ ಎನ್‌ಫೀಲ್ಡ್ ಇ-ಬೈಕ್ ಸವಾರಿ ಮಾಡಿರುವ ವಿಡಿಯೋ ಹಂಚಿಕೊಂಡಿದ್ದು, ಕೆಲವೇ ಹೊತ್ತಿನಲ್ಲಿ ನೆಟ್ಟಿಗರ ಗಮನ ಸೆಳೆದಿದ್ದು, ಭರ್ಜರಿ ವೈರಲ್ ಆಗಿದೆ.

‘ನನ್ನ ಪತಿ ಮಾಡಿಸುವ ಕೆಲಸ’

ವಿಡಿಯೋದಲ್ಲಿ ಶಿವಶ್ರೀ ಹೆಲ್ಮೆಟ್ ಧರಿಸಿ ಆತ್ಮವಿಶ್ವಾಸದಿಂದ ಇ-ಬೈಕ್ ಸವಾರಿ ಮಾಡುತ್ತಿರುವುದು ನೋಡಬಹುದು. ವಿಶೇಷ ಅಂದ್ರೆ, ಈ ವಿಡಿಯೋಗೆ ಅವರು ಕೊಟ್ಟಿರೋ ಕ್ಯಾಪ್ಶನ್ ಕೂಡ ನೆಟ್ಟಿಗರ ಗಮನ ಸೆಳೆದಿದೆ. “Things my husband makes me do… And I also end up doing” ಎಂದು ಬರೆದುಕೊಂಡಿರುವ ಶಿವಶ್ರೀ, ತಮ್ಮ ಪತಿ ತೇಜಸ್ವಿ ಸೂರ್ಯ ಅವರನ್ನೂ ಪೋಸ್ಟ್‌ನಲ್ಲಿ ಟ್ಯಾಗ್ ಮಾಡಿದ್ದಾರೆ. ಈ ಮೂಲಕ ದಂಪತಿಯ ನಡುವಿನ ಹಾಸ್ಯಮಯ ಕ್ಷಣವೊಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಬಂದಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಶಿವಶ್ರೀ ಅವರ ಹೊಸ ಪ್ರಯತ್ನವನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ಕೆಲವರು ಬೆಂಗಳೂರಿನ ರಸ್ತೆಗಳಲ್ಲಿ ಬೈಕ್ ಸವಾರಿ ಮಾಡುವಾಗ ಹೆಲ್ಮೆಟ್ ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಸಲಹೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !