September 20, 2026
Sunday, September 20, 2026
spot_img

VVIPಗಳ ವೋಟರ್‌ ಲಿಸ್ಟ್‌ಗೂ SIR ಬಿಸಿ: ಜೈಶಂಕರ್ ದಂಪತಿ ಸೇರಿ ಗಣ್ಯರಿಗೆ ನೋಟಿಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ತೀವ್ರಗತಿಯಿಂದ ಸಾಗುತ್ತಿದ್ದು, ಇದೀಗ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಅವರ ಪತ್ನಿ ಕ್ಯೋಕೊ ಎಸ್. ಜೈಶಂಕರ್ ಅವರಿಗೂ ಚುನಾವಣಾ ಆಯೋಗದಿಂದ ನೋಟಿಸ್ ಬಂದಿದೆ.

ಹಿಂದಿನ SIR ದಾಖಲೆಗಳೊಂದಿಗೆ ಪ್ರಸ್ತುತ ಮತದಾರರ ಮಾಹಿತಿಯನ್ನು ಹೊಂದಿಸಲು ಸಾಧ್ಯವಾಗದಿರೋದ್ರಿಂದ ಅವರನ್ನು ‘Unmapped with Last SIR’ ವಿಭಾಗದಲ್ಲಿ ಗುರುತಿಸಲಾಗಿದೆ.

ಸಿಸೋಡಿಯಾ ಕುಟುಂಬಕ್ಕೂ ನೋಟಿಸ್

ಜೈಶಂಕರ್ ದಂಪತಿ ನವದೆಹಲಿ ವಿಧಾನಸಭಾ ಕ್ಷೇತ್ರದ ಸುಂದರ್ ಬಾಗ್ ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾರರಾಗಿ ನೋಂದಾಯಿತರಾಗಿದ್ದಾರೆ. ಇದೇ ವಿಭಾಗದಲ್ಲಿ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಅವರ ಕುಟುಂಬದ ಸದಸ್ಯರಿಗೂ ನೋಟಿಸ್ ನೀಡಲಾಗಿದೆ. ಸಿಸೋಡಿಯಾ ಅವರ ಪತ್ನಿ ಸೀಮಾ ಸಿಸೋಡಿಯಾ ಅವರ ದಾಖಲೆಗಳಲ್ಲಿ ಹೆಸರು ಹೊಂದಾಣಿಕೆಯಾಗದಿರುವುದು ಮತ್ತು ಪುತ್ರ ಮೀರ್ ಸಿಸೋಡಿಯಾ ಅವರ ದಾಖಲೆಯಲ್ಲಿ ಪೋಷಕರ ಹೆಸರಿನ ವ್ಯತ್ಯಾಸ ಕಂಡುಬಂದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:

Unmapped ಲಿಸ್ಟ್ ದೊಡ್ಡದಿದೆ

ಸಿಬಿಐ ನಿರ್ದೇಶಕ ಪ್ರವೀಣ್ ಸೂದ್, ಅವರ ಪತ್ನಿ ಹಾಗೂ ತಾಯಿ, ಮಾಜಿ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮತ್ತು ಅವರ ಪತ್ನಿಗೂ ಇದೇ ರೀತಿಯ ನೋಟಿಸ್ ನೀಡಲಾಗಿದೆ. ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ರಂಜನಾ ದೇಸಾಯಿ ಅವರ ಕುಟುಂಬದ ಸದಸ್ಯರಿಗೂ ನೋಟಿಸ್ ಜಾರಿಯಾಗಿದೆ. ಹಲವು ಹಿರಿಯ ಹಾಗೂ ನಿವೃತ್ತ ಅಧಿಕಾರಿಗಳ ಮತದಾರರ ದಾಖಲೆಗಳಲ್ಲಿಯೂ ಹೆಸರು, ಕುಟುಂಬದ ವಿವರ ಸೇರಿದಂತೆ ವಿವಿಧ ವ್ಯತ್ಯಾಸಗಳನ್ನು ಗುರುತಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !