ಹಾಲು
ಕಸ್ಟರ್ಡ್ ಪೌಡರ್
ಸಕ್ಕರೆ
ಐಸ್ ಕ್ಯೂಬ್ಸ್
ಗೋಡಂಬಿ, ಬಾದಾಮಿ, ಪಿಸ್ತಾ
ಅರ್ಧ ಕಪ್ ತಂಪಾದ ಹಾಲಿಗೆ ಕಸ್ಟರ್ಡ್ ಪೌಡರ್ ಹಾಕಿ ಗಂಟಿಲ್ಲದಂತೆ ಚೆನ್ನಾಗಿ ಮಿಕ್ಸ್ ಮಾಡಿ ಇಟ್ಟುಕೊಳ್ಳಿ. ಉಳಿದ ಹಾಲನ್ನು ಪಾತ್ರೆಯಲ್ಲಿ ಕಾಯಿಸಿ, ಸಕ್ಕರೆ ಸೇರಿಸಿ ಮಿಕ್ಸ್ ಮಾಡಿ. ಹಾಲು ಕುದಿ ಬಂದ ಮೇಲೆ ಉರಿ ಕಮ್ಮಿ ಮಾಡಿ. ಈಗ ಮಿಕ್ಸ್ ಮಾಡಿಟ್ಟ ಕಸ್ಟರ್ಡ್ ಹಾಲನ್ನು ಕುದಿಯುತ್ತಿರುವ ಹಾಲಿಗೆ ಸ್ವಲ್ಪ ಸ್ವಲ್ಪವೇ ಸುರಿಯುತ್ತಾ ಚೆನ್ನಾಗಿ ಕೈಯಾಡಿಸಿ. 2-3 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿದರೆ ಹಾಲು ಗಟ್ಟಿಯಾಗುತ್ತದೆ. ಈ ಕಸ್ಟರ್ಡ್ ಮಿಶ್ರಣವನ್ನು ಪೂರ್ತಿಯಾಗಿ ಆರಲು ಬಿಡಿ. ನಂತರ 1 ಗಂಟೆ ಫ್ರಿಡ್ಜ್‌ನಲ್ಲಿಟ್ಟು ಚೆನ್ನಾಗಿ ಕೂಲ್ ಮಾಡಿ. ತಣ್ಣಗಾದ ಕಸ್ಟರ್ಡ್ ಹಾಲು ಮತ್ತು ಐಸ್ ಕ್ಯೂಬ್ಸ್ ಅನ್ನು ಮಿಕ್ಸಿ ಜಾರ್‌ಗೆ ಹಾಕಿ 1 ನಿಮಿಷ ಬ್ಲೆಂಡ್ ಮಾಡಿದರೆ ಮಿಲ್ಕ್‌ಶೇಕ್ ಸಿದ್ದ.
ಗ್ಲಾಸ್‌ಗೆ ಮಿಲ್ಕ್‌ಶೇಕ್ ಹಾಕಿ, ಮೇಲೆ ಕತ್ತರಿಸಿದ ಬಾದಾಮಿ, ಗೋಡಂಬಿ, ಪಿಸ್ತಾ ಚೂರುಗಳನ್ನು ಹಾಕಿ ಕುಡಿಯಲು ಕೊಟ್ಟರೆ ಕ್ರೀಮಿ ಮತ್ತು ಟೇಸ್ಟಿ ಕಸ್ಟರ್ಡ್ ಮಿಲ್ಕ್‌ಶೇಕ್ ರೆಡಿ!



