September 22, 2026
Tuesday, September 22, 2026
spot_img

ದಿನಭವಿಷ್ಯ | ಮನಸ್ಸಿಗೆ ಸಿಗಲಿದೆ ನಿರಾಳತೆ: ಹೊಸ ವಿಷಯಗಳತ್ತ ಗಮನ ಹರಿಸಲು ಇಂದು ಸೂಕ್ತ ಸಮಯ

ಮೇಷ
ನಿರಾಳ ಮನಸ್ಸು. ಇನ್ನಿತರ ವಿಷಯಗಳ ಬಗ್ಗೆ ಗಮನ ಹರಿಸಲು ಅವಕಾಶ ಸಿಗಲಿದೆ. ಆರೋಗ್ಯ ಸಮಸ್ಯೆ ನಿವಾರಣೆ. ಧನಲಾಭ.
ವೃಷಭ
ದಂಪತಿಗೆ ಶುಭದಿನ. ಉದ್ಯೋಗ ಅಪೇಕ್ಷಿತರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಏಕಾಂಗಿಗಳಿಗೆ ಸಂಗಾತಿ ಲಭ್ಯ. ಹಣಕಾಸು ವ್ಯವಹಾರ ಸುಗಮ.
ಮಿಥುನ
ಕಳೆದ ಕೆಲವು ದಿನಗಳ ವೃತ್ತಿ ಒತ್ತಡ ಕಡಿಮೆಯಾಗಲಿದೆ. ಸಂಬಂಧದಲ್ಲಿ ಮೂರನೇ ವ್ಯಕ್ತಿ ಪ್ರವೇಶಕ್ಕೆ ಅವಕಾಶ ಕೊಡಬೇಡಿ. ಧನಾಗಮ.    
ಕಟಕ
 ಫಲಪ್ರದ ದಿನ. ಕಡಿಮೆ ಶ್ರಮದಲ್ಲಿ ಕಾರ್ಯ ಸಂಪೂರ್ಣ. ಪ್ರೀತಿಪಾತ್ರರ ಕಡೆಗೆ ಹೆಚ್ಚು ಗಮನ ಕೊಡಿ. ಸಂಬಂಧ ದಲ್ಲಿ ತೊಡಕು ಸಂಭವ.    
ಸಿಂಹ
 ವ್ಯವಸ್ಥಿತವಾಗಿ ಕೆಲಸ ಮಾಡಿ. ಇಲ್ಲವಾದರೆ ಗೊಂದಲಕ್ಕೆ ಸಿಲುಕುವಿರಿ.  ಅನಿರೀಕ್ಷಿತ ಖರ್ಚು ಹೆಚ್ಚಲಿದೆ. ಕೌಟುಂಬಿಕ ಆಶಯ ಈಡೇರಿಕೆ.  
ಕನ್ಯಾ
ಇಂದು ಅದೃಷ್ಟ ನಿಮ್ಮ ಜತೆಗಿಲ್ಲ. ವೃತ್ತಿ ಒತ್ತಡ ಅಽಕ. ಆರ್ಥಿಕ ವ್ಯವಹಾರ ಹಿನ್ನಡೆ ಕಂಡೀತು. ಉದಾಸ ಭಾವ. ಆರೋಗ್ಯ ಸಮಸ್ಯೆ.
ತುಲಾ
 ದಂಪತಿ ಮಧ್ಯೆ ಸಣ್ಣ ವಿಷಯಕ್ಕೆ ವಾಗ್ವಾದ ನಡೆದೀತು. ಹೊಂದಾಣಿಕೆ ಮುಖ್ಯ. ಖರ್ಚು ಅಧಿಕ ಚಿಂತೆಗೆ ಕಾರಣ. ಆರೋಗ್ಯ ಸ್ಥಿರತೆಯ ಸಮಾಧಾನ.
ವೃಶ್ಚಿಕ
 ವ್ಯವಹಾರದಲ್ಲಿ ತಪ್ಪಭಿಪ್ರಾಯ ಮೂಡದಂತೆ ಎಚ್ಚರ ವಹಿಸಿ. ಬಂಧು ಭೇಟಿ ಸಂತಸ ತರಲಿದೆ. ಭಾವನಾತ್ಮಕ ಏರುಪೇರು.        
ಧನು
ಅತಿ ಒತ್ತಡದಿಂದ ಬಸವಳಿಯುವಿರಿ. ಮಧ್ಯಾಹ್ನದ ವೇಳೆಗೆ ನಿರಾಳತೆ ಸಿಗಲಿದೆ. ಕೌಟುಂಬಿಕ ಬೆಂಬಲ. ಆರೋಗ್ಯ ಸಮಸ್ಯೆ.              
ಮಕರ
ನಿಮಗಿದು ಪೂರಕ ದಿನವಲ್ಲ. ಹೊಸ ಸವಾಲು ಹುಟ್ಟಿಕೊಳ್ಳಲಿದೆ. ಹಣದ ವಿಚಾರದಲ್ಲಿ ಎಚ್ಚರ ವಹಿಸಿ. ಸಂಬಂಧದಲ್ಲಿ ಏರುಪೇರು ಸಾಧ್ಯತೆ.  
ಕುಂಭ
ಅಪೇಕ್ಷಿಸಿದ ಪ್ರಗತಿ ಕಾಣುವಿರಿ. ಪ್ರಮುಖ ನಿರ್ಧಾರ ಕೃತಿಗಿಳಿಸಲು ಸಕಾಲ. ಹಳೆಯ ಹೂಡಿಕೆ ಧನಲಾಭ ತರಲಿದೆ. ಜ್ವರದ ಸಮಸ್ಯೆ ಕಾಡಬಹುದು.      
 ಮೀನ
ಪ್ರೀತಿಗೆ ಹಿರಿಯರ ಸಮ್ಮತಿ ಸಿಗಬಹುದು. ವೃತ್ತಿ ಕಾರ್ಯದಲ್ಲಿ ತೊಡಕು. ಹಿರಿಯರಿಗೆ ಉಸಿರಾಟದ ಸಮಸ್ಯೆ ಕಾಣಿಸಬಹುದು. ಆರ್ಥಿಕ ಉನ್ನತಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !