September 23, 2026
Wednesday, September 23, 2026
spot_img

ಬಿರಿಯಾನಿ ಮಾಡೋದಕ್ಕೆ ಕಷ್ಟವಾದರೆ ಒನ್‌ ಪಾಟ್‌ ಚಿಕನ್‌ ರೈಸ್‌ ಮಾಡಿ ನೋಡಿ, ರುಚಿ ಅದ್ಭುತ

ಸಾಮಾಗ್ರಿಗಳು

ಚಿಕನ್‌ ಬ್ರೆಸ್ಟ್‌ ಅಥವಾ ಮಾಮೂಲಿ ಚಿಕನ್‌
ಈರುಳ್ಳಿ
ಹಸಿಮೆಣಸು
ಶುಂಠಿ ಬೆಳ್ಳುಳ್ಳಿ ಪೇಸ್ಟ್‌
ಚಕ್ಕೆ ಲವಂಗ ಏಲಕ್ಕಿ
ತುಪ್ಪ, ಎಣ್ಣೆ
ಉಪ್ಪು, ಪೆಪ್ಪರ್‌, ಬಿರಿಯಾನಿ ಪುಡಿ
ಅಕ್ಕಿ ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ
ಮೊದಲು ಪ್ಯಾನ್‌ಗೆ ತುಪ್ಪ, ಎಣ್ಣೆ ಹಾಕಿ, ಜೊತೆಗೆ ಜೀರಿಗೆ, ಚಕ್ಕೆ, ಲವಂಗ, ಏಲಕ್ಕಿ ಹಾಕಿ ಬಾಡಿಸಿ
ಆನಂತರ ಹಸಿಮೆಣಸಿನಕಾಯಿ, ಈರುಳ್ಳಿ ಹಾಕಿ ಚೆನ್ನಾಗಿ ಬಾಡಿಸಿ
ತದನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಹಾಕಿ ಮಿಕ್ಸ್‌ ಮಾಡಿ
ಆಮೇಲೆ ಚಿಕನ್‌ ಹಾಕಿಕೊಳ್ಳಿ, ಇದು ಬೇಯಿಸಿಕೊಳ್ಳಿ. ಮೇಲೆ ಪೆಪ್ಪರ್‌ ಪುಡಿ, ಉಪ್ಪು, ಬಿರಿಯಾನಿ ಪುಡಿ ಹಾಕಿ ಮಿಕ್ಸ್‌ ಮಾಡಿ
ಚಿಕನ್‌ ಬೆಂದ ನಂತರ ಒಂದು ಲೋಟ ಅಕ್ಕಿ ಹಾಗೂ ಎರಡು ಲೋಟ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ
ನಂತರ ಕೊತ್ತಂಬರಿ ಸೊಪ್ಪು ಹಾಗೂ ನಿಂಬೆರಸ ಹಾಕಿ ಮುಚ್ಚಿ
ಚಿಕನ್‌ ರೈಸ್‌ ಬೇಯಲು ಬಿಡಿ, ಬೆಂದ ನಂತರ ಈರುಳ್ಳಿ ಜೊತೆ ಬಿಸಿ ಬಿಸಿ ತಿನ್ನಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !