September 23, 2026
Wednesday, September 23, 2026
spot_img

ಚಳಿಗಾಲ, ಮಳೆಗಾಲಕ್ಕೆ ಬೆಸ್ಟ್ ಕಾಂಬಿನೇಶನ್ ಈ ಮಸಾಲಾ ಎಲೆಕೋಸು ಸೂಪ್ ರೆಸಿಪಿ

ಎಲೆಕೋಸು

ಈರುಳ್ಳಿ

ಟೊಮೆಟೊ

ಬೆಳ್ಳುಳ್ಳಿ

ಕ್ಯಾರೆಟ್

ಕ್ಯಾಪ್ಸಿಕಂ

ಎಣ್ಣೆ

ಪೆಪ್ಪರ್ ಪೌಡರ್

ಜೀರಿಗೆ

ಕೊತ್ತಂಬರಿ ಸೊಪ್ಪು

ಉಪ್ಪು

ಸ್ಟವ್ ಮೇಲೆ ಒಂದು ಪಾತ್ರೆ ಇಟ್ಟು, 1 ಚಮಚ ಎಣ್ಣೆ ಹಾಕಿ. ಕಾದ ನಂತರ ಜೀರಿಗೆ ಮತ್ತು ಜಜ್ಜಿದ ಬೆಳ್ಳುಳ್ಳಿ ಹಾಕಿ ಪರಿಮಳ ಬರುವವರೆಗೆ ಹುರಿಯಿರಿ. ನಂತರ ಹೆಚ್ಚಿದ ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿದು, ಕ್ಯಾರೆಟ್, ಕ್ಯಾಪ್ಸಿಕಂ ಹಾಗೂ ಎಲೆಕೋಸು ಹಾಕಿ 2-3 ನಿಮಿಷ ಸಣ್ಣ ಉರಿಯಲ್ಲಿ ಚನ್ನಾಗಿ ಬಾಡಿಸಿ. ಈಗ ಟೊಮೆಟೊ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ. ನಂತರ 3 ರಿಂದ 4 ಕಪ್ ನೀರು ಹಾಕಿ, ಪಾತ್ರೆ ಮುಚ್ಚಿ 8-10 ನಿಮಿಷ ತರಕಾರಿಗಳು ಮೆತ್ತಗಾಗುವವರೆಗೆ ಚನ್ನಾಗಿ ಕುದಿಸಿ. ಸೂಪ್ ಕುದಿ ಬಂದ ಮೇಲೆ ಕಾಳುಮೆಣಸಿನ ಪುಡಿ ಹಾಕಿ ಚನ್ನಾಗಿ ಕಲಿಸಿ. ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ, ಗ್ಯಾಸ್ ಆಫ್ ಮಾಡಿ.

ಬಿಸಿಬಿಸಿಯಾದ ಎಲೆಕೋಸು ಸೂಪ್ ಮೇಲೆ ಸ್ವಲ್ಪ ನಿಂಬೆರಸ ಹಿಂಡಿ ಕುಡಿದರೆ, ರುಚಿ ಅದ್ಭುತವಾಗಿರುತ್ತದೆ ಹಾಗೂ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !