September 25, 2026
Friday, September 25, 2026
spot_img

ಗೆಳತಿ ಜೊತೆ ಬಂದು ಗಣಪತಿ ದೇವರ ದರುಶನ ಪಡೆದ ಬಾಲಿವುಡ್‌ ನಟ ಗೋವಿಂದ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್‌ ನಟ ಗೋವಿಂದ ತಮ್ಮ ವೈವಾಹಿಕ ಜೀವನದ ವಿಷಯವಾಗಿ ಸದ್ಯ ಸುದ್ದಿಯಲ್ಲಿದ್ದಾರೆ. ಪ್ರತೀ ಬಾರಿಯೂ ಮುಂಬೈನ ಫೇಮಸ್‌ ಲಾಲ್‌ಬಾಗ್‌ಚಾ ರಾಜಾ ಗಣಪತಿ ದರುಶನಕ್ಕೆ ಪತ್ನಿ ಜೊತೆ ಆಗಮಿಸುತ್ತಿದ್ದ ಗೋವಿಂದ ಈ ಬಾರಿ ತಮ್ಮ ಗೆಳತಿ ಕೋಮಲ್‌ ರಾಣಿ ಸ್ವರಣ್‌ಕರ್‌ ಜೊತೆ ಆಗಮಿಸಿದ್ದಾರೆ.

ಗೋವಿಂದ ಹಾಗೂ ಸುನೀತಾ ಅಹುಜಾ ದಂಪತಿಯ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಚಾರ. ಇವರ ಸಂಬಂಧದಲ್ಲಿ ಬಿರುಕು ಮೂಡಲು ಮೂರನೇ ವ್ಯಕ್ತಿಯೇ ಕಾರಣ ಎಂದು ಹೇಳಲಾಗುತ್ತಿದೆ. ಗೋವಿಂದ ಕೋ ಸ್ಟಾರ್‌ ಕೋಮಲ್‌ ಜೊತೆ ಓಡಾಟ ಹೆಚ್ಚಾದ ಕಾರಣ ಸುನೀತಾ ಗರಂ ಆಗಿದ್ದರು ಎನ್ನಲಾಗಿದೆ.

ಇದಕ್ಕೆ ಪುಷ್ಠಿ ನೀಡುವಂತೆ ಗೋವಿಂದಾ ಹಾಗೂ ಕೋಮಲ್‌ ಒಟ್ಟಿಗೇ ಕಾಣಿಸಿಕೊಂಡಿದ್ದಾರೆ. ಸದಾ ಪತ್ನಿಯ ಜೊತೆ ಬಂದು ಗಣಪತಿಯ ದರುಶನ ಪಡೆಯುತ್ತಿದ್ದ ಗೋವಿಂದ ಈ ಬಾರಿ ಕೋಮಲ್‌ ಜೊತೆ ಬಂದಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಈ ಹಿಂದೆ ಸುನೀತಾ ಒಮ್ಮೆ ಏರ್‌ಪೋರ್ಟ್‌ನಲ್ಲಿ ನಾಯಿಯ ಜೊತೆ ಕಾಣಿಸಿಕೊಂಡಿದ್ದರು. ಪ್ಯಾಪರಾಝಿಗಳು ಮಾತನಾಡಿಸಿದಾಗ, ಮನುಷ್ಯರನ್ನು ನಂಬೋದಕ್ಕಿಂತ ಈ ರೀತಿ ನಾಯಿಗಳನ್ನು ನಂಬುವುದು ಉತ್ತಮ. ಅವು ನಮಗೆ ಎಂದಿಗೂ ಮೋಸ ಮಾಡೋದಿಲ್ಲ ಎಂದು ಹೇಳಿದ್ದರು.

Must Read