ಮೇಷ
ವೃತ್ತಿಯಲ್ಲಿ ನಿಮಗೆ ಅನುಕೂಲಕರ ಪರಿಸ್ಥಿತಿ. ಕೌಟುಂಬಿಕ ಶಾಂತಿ. ಕೆಲ ವಿಷಯಗಳಿಗೆ ತಲೆ ಕೆಡಿಸಿಕೊಳ್ಳದಿರುವುದೇ ಒಳಿತು. ಧನಾಗಮನ.
ವೃಷಭ
ಸಮಯಕ್ಕೆ ಮೊದಲೆ ಕಾರ್ಯ ಸಂಪೂರ್ಣ. ನಿರಾಳತೆ. ಹಣದ ಕೊರತೆ ನೀಗಲಿದೆ. ಸಾಂಸಾರಿಕ ಸಮಸ್ಯೆಯೊಂದು ಪರಿಹಾರದ ಸಾಧ್ಯತೆ.
ಮಿಥುನ
ಫಲಪ್ರದ ದಿನ. ಕಾರ್ಯ ಸಫಲತೆ. ಗುರಿ ಈಡೇರಿಕೆ. ಕೌಟುಂಬಿಕ ಸಾಮರಸ್ಯ. ಪ್ರೀತಿಯ ಅಹವಾಲಿಗೆ ಪೂರಕ ಸ್ಪಂದನೆ ಸಿಗಲಿದೆ.
ಕಟಕ
ಅಽಕ ಕೆಲಸದ ಹೊರೆ. ಯೋಜಿಸಿ ಕಾರ್ಯವೆಸಗಿ. ಸಂಗಾತಿ ಜತೆ ವಾಗ್ವಾದ.ಬಾಂಧವ್ಯ ಕೆಡಲು ಅವಕಾಶ ಕೊಡಬೇಡಿ. ಧನವ್ಯಯ.
ಸಿಂಹ
ಅಸಾಧ್ಯವಾದುದನ್ನು ಸಾಧಿಸಬಲ್ಲಿರಿ. ಆದರೆ ಬದ್ಧತೆ ಮುಖ್ಯ. ಕೆಲವು ವಿಷಯ ಕಡೆಗಣಿಸಬೇಡಿ. ಕಾಟಾಚಾರದ ಧೋರಣೆ ಬಿಟ್ಟುಬಿಡಿ.
ಕನ್ಯಾ
ಹರ್ಷೋಲ್ಲಾಸ ಇಂದು ತುಂಬಲಿದೆ. ಬಯಸಿದ ಕಾರ್ಯ ಪೂರ್ಣ. ಅಡ್ಡಿ ನಿವಾರಣೆ. ಹೊಸ ಸಂಬಂಧ ಮೊಳೆಯಬಹುದು.
ತುಲಾ
ನಿಮ್ಮ ಕಾರ್ಯದಲ್ಲಿ ಪ್ರಾಮಾಣಿಕತೆ ಇರಲಿ. ಟೀಕೆ ಸಹಜ. ಅಧ್ಯಾತ್ಮದ ಒಲವು ಮೂಡಬಹುದು. ಏಕಾಂಗಿಗಳಿಗೆ ಪ್ರೇಮ ಸಾಫಲ್ಯ.
ವೃಶ್ಚಿಕ
ಇತರರು ನೀಡುವ ಸಲಹೆಗೆ ಗಮನ ಕೊಡಿ. ಅದರಲ್ಲೇ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಬಹುದು. ಸಹೋದ್ಯೋಗಿಯಿಂದ ಕಿರಿಕಿರಿ ಎದುರಿಸುವಿರಿ.
ಧನು
ದಿನದ ಅಂತ್ಯಕ್ಕೆ ನಿಮಗೆ ಪ್ರತಿಕೂಲ ಬೆಳವಣಿಗೆ ಸಂಭವ. ಎಚ್ಚರದ ಹೆಜ್ಜೆಯಿಡಿ. ಆರ್ಥಿಕ ಒತ್ತಡ ಚಿಂತೆ ಕಾರಣವಾದೀತು.
ಮಕರ
ನೀವು ಕೈಯಿಟ್ಟ ಕ್ಷೇತ್ರದಲ್ಲಿ ನಿಮ್ಮ ಸಾಮರ್ಥ್ಯ ತೋರುವಿರಿ. ಸ್ವಉದ್ಯಮದಲ್ಲಿ ಯಶಸ್ಸು. ಇತರರು ಅಸೂಯೆ ಕಾರಬಹುದು, ಎಚ್ಚರ.
ಕುಂಭ
ನಿಮ್ಮ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿ ಮೆಚ್ಚುಗೆ ಗಳಿಸುವಿರಿ. ದೂರ ಪ್ರಯಾಣ ನಿಮಗೆ ಒಳಿತು ತರಲಿದೆ. ಸಂಗಾತಿ ಹುಡುಕಾಟ ಸಫಲ.
ಮೀನ
ನಿಮ್ಮ ಪತನ ಬಯಸುತ್ತಿರುವ ಸಹೋದ್ಯೋಗಿ ಬಗ್ಗೆ ಎಚ್ಚರದ ಕಣ್ಣಿಡಿ. ಹಿರಿಯರ ಕಿವಿಮಾತು ಕೇಳಿ. ಧನವ್ಯಯ ಹೆಚ್ಚು.



