ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ನ ಫೇಮಸ್ ಸ್ಟಾರ್ಸ್ ಆದ ರಣ್ಬೀರ್ ಕಪೂರ್, ಆಲಿಯಾ ಭಟ್ ಹಾಗೂ ಶಾರುಖ್ ಖಾನ್ ಸ್ಟೀಲ್ನ ಜಾಹೀರಾತೊಂದಲ್ಲಿ ಭಾಗಿಯಾಗಿದ್ದಾರೆ. ಇಲ್ಲಿ ಪರಸ್ಪರ ತಮ್ಮ ಸಿನಿಮಾಗಳನ್ನು ಇಟ್ಟುಕೊಂಡು ಎಲ್ಲರೂ ಕಾಲೆಳೆದುಕೊಳ್ಳುತ್ತಿದ್ದು, ಜನರಿಗೆ ಜಾಹೀರಾತು ತುಂಬಾನೇ ಎಂಟರ್ಟೈನಿಂಗ್ ಎನ್ನಿಸಿದೆ.
ಶಾರುಖ್, ರಣ್ಬೀರ್ ಹಾಗೂ ಆಲಿಯಾ ಸಿಮೆಂಟ್ ಕಂಪನಿಯ ಮಾಲೀಕನನ್ನು ಭೇಟಿ ಮಾಡುತ್ತಾರೆ. ಮಾಲೀಕರು ಜಾಹೀರಾತಿನಲ್ಲಿ ʼತೇರಾ ಪ್ಯಾರ್ ಪ್ಯಾರ್ ಪ್ಯಾರ್ ಹುಕ್ಕಾ ಬಾರ್ ʼ ಹಾಡಿಗೆ ಸ್ಟೀಲ್ ರಾಡ್ ಹಿಡಿದುಕೊಂಡು ಡ್ಯಾನ್ಸ್ ಮಾಡಬೇಕು ಎಂದು ಹೇಳುತ್ತಾರೆ. ಆದ ಆಲಿಯಾ, ಶಾರುಖ್ ಹಾಗೂ ರಣ್ಬೀರ್ ಈ ಐಡಿಯಾ ಚೆನ್ನಾಗಿಲ್ಲ ಎಂದು ಹೇಳುತ್ತಾರೆ.
ನಂತರ ಶಾರುಖ್ ಖಾನ್ ನನ್ನ ಬಳಿ ಐಡಿಯಾ ಒಂದಿದೆ. ಒಬ್ಬ ಡಾನ್ ಮನೆಯ ಒಳಗೆ ಇರುತ್ತಾನೆ. ಆತನ ಮನೆಯನ್ನು ಸಾವಿರ ಮಂದಿ ಸುತ್ತುವರಿಯುತ್ತಾರೆ. ಮನೆ ಮೇಲೆ ದಾಳಿ ನಡೆಸುತ್ತಾರೆ. ಆದರೆ ಯಾರಿಂದಲೂ ಮನೆಯ ಒಳಕ್ಕೆ ಬರೋದಕ್ಕೆ ಆಗುವುದೇ ಇಲ್ಲ. ಏಕೆಂದರೆ ಮನೆ ನಿಮ್ಮ ಕಂಪನಿಯ ಸ್ಟೀಲ್ ಬಳಸಿ ಕಟ್ಟಲಾಗಿದೆ ಎನ್ನುವ ಐಡಿಯಾ ನೀಡುತ್ತಾರೆ.
ಈ ರೀತಿಯ ಜಾಹೀರಾತನ್ನು ಜನ ನೋಡೋದಿಲ್ಲ. ನನ್ನ ಐಡಿಯಾ ಕೇಳಿ ಎಂದು ರಣ್ಬೀರ್ ಎದ್ದು ನಿಲ್ಲುತ್ತಾರೆ. ಒಬ್ಬ ಫೇಮಸ್ ರಾಕ್ಸ್ಟಾರ್ ಇರುತ್ತಾನೆ. ಆತ ಸ್ಟೇಜ್ ಮೇಲೆ ಪರ್ಫಾರ್ಮ್ ಮಾಡುತ್ತಾನೆ. ಎಷ್ಟು ಕುಣಿದಾಡಿದರೂ ಸ್ಟೇಜ್ ಗಟ್ಟಿಯಾಗಿರುತ್ತದೆ. ಏಕೆಂದರೆ ನಿಮ್ಮ ಕಂಪನಿಯ ಸ್ಟೀಲ್ ಬಳಸಿ ಸ್ಟೇಜ್ ಕಟ್ಟಲಾಗಿದೆ ಎಂದು ಹೇಳುತ್ತಾರೆ. ಅದಕ್ಕೆ ಆಲಿಯಾ ಭಟ್ ʼಓ ನಾದಾನ್ ಪರಿಂದೆ ಸ್ವಲ್ಪ ಕೂತ್ಕೋʼ ಎಂದು ಕಮೆಂಟ್ ಮಾಡುತ್ತಾರೆ.
ತದನಂತರ ಆಲಿಯಾ, ಒಬ್ಬ ಸ್ಟ್ರಾಂಗ್ ಹುಡುಗಿ ಇರುತ್ತಾಳೆ. ಆಕೆ ತನ್ನ ತಮ್ಮನನ್ನು ಕರೆದುಕೊಂಡು ಹೋಗಲು ಜೈಲಿಗೆ ಬಂದಿರುತ್ತಾಳೆ. ಎಷ್ಟು ಕಷ್ಟಪಟ್ಟರೂ ಜೈಲಿನ ಒಳಗೆ ಹೋಗೋಕಾಗೋದಿಲ್ಲ. ಏಕೆಂದರೆ ನಿಮ್ಮ ಕಂಪನಿಯ ಸ್ಟೀಲ್ ಬಳಸಿ ಜೈಲನ್ನು ಕಟ್ಟಲಾಗಿದೆ ಎಂದು ಹೇಳುತ್ತಾರೆ. ಆಗ ಶಾರುಖ್ ಇಂಥ ಜಾಹೀರಾತು ನೋಡೋದಕ್ಕೆ ಯಾರಿಗೂ ಜಿಗ್ರಾ ಇರೋದಿಲ್ಲ ಎಂದು ತಮಾಷೆ ಮಾಡಿದ್ದಾರೆ.
ನಂತರ ಮೂವರು ಯಾವ ಐಡಿಯಾ ಇಷ್ಟ ಆಯ್ತು ಎಂದು ಕೇಳುತ್ತಾರೆ. ಆಗ ಡೈರೆಕ್ಟರ್ ಮೌನವಾಗಿರುತ್ತಾರೆ. ಒಂದು ನಿಮಿಷದ ನಂತರ ಮೂವರೂ ತೇರಾ ಪ್ಯಾರ್ ಪ್ಯಾರ್ ಪ್ಯಾರ್ ಹುಕ್ಕಾ ಬಾರ್ ಹಾಡಿಗೆ ಸ್ಟೀಲ್ ರಾಡ್ ಹಿಡಿದುಕೊಂಡು ಡ್ಯಾನ್ಸ್ ಮಾಡುತ್ತಾರೆ.



