ಸಾಮಾಗ್ರಿಗಳು
ಕ್ಯಾಪ್ಸಿಕಂ
ಕಡ್ಲೆ ಹಿಟ್ಟು
ಅಕ್ಕಿ ಹಿಟ್ಟು
ಸೋಡಾಪುಡಿ
ಉಪ್ಪು
ಓಂ ಕಾಳು
ಖಾರದಪುಡಿ
ಎಣ್ಣೆ
ಈರುಳ್ಳಿ
ಕೊತ್ತಂಬರಿ ಸೊಪ್ಪು
ಕ್ಯಾರೆಟ್ ತುರಿ
ಮಾಡುವ ವಿಧಾನ
ಮೊದಲು ಬಟ್ಟಲಿಗೆ ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಉಪ್ಪು, ಖಾರದಪುಡಿ, ಓಂಕಾಳು, ಸೋಡಾಪುಡಿ ಹಾಕಿ ಮಿಕ್ಸ್ ಮಾಡಿ
ಇದಕ್ಕೆ ನೀರನ್ನು ಹಾಕಿ ಮೀಡಿಯಂ ಗಟ್ಟಿ ಹದಕ್ಕೆ ತಂದುಕೊಳ್ಳಿ
ಆನಂತರ ಕಾದ ಎಣ್ಣೆಗೆ ಹಿಟ್ಟಿನಲ್ಲಿ ಅದ್ದಿದ ಕ್ಯಾಪ್ಸಿಕಂ ಇಡಿಯಾಗಿ ಹಾಕಿ
ಮುಕ್ಕಾಲು ಬೆಂದ ನಂತರ ಇದನ್ನು ಹೊರಕ್ಕೆ ತೆಗೆಯಿರಿ, ತದನಂತರ ಕ್ಯಾಪ್ಸಿಕಂನ್ನು ಕತ್ತರಿಸಿ
ಮತ್ತೊಮ್ಮೆ ಎಣ್ಣೆಗೆ ಹಾಕಿ ಚೆನ್ನಾಗಿ ರೋಸ್ಟ್ ಮಾಡಿದ್ರೆ ಬಜ್ಜಿ ರೆಡಿ. ಇದಕ್ಕೆ ಕೊತ್ತಂಬರಿ, ಈರುಳ್ಳಿ ಹಾಗೂ ಕ್ಯಾರೆಟ್ ತುರಿ ಹಾಕಿ, ಉಪ್ಪು, ಖಾರದಪುಡಿ ಹಾಕಿದ್ರೆ ಬಜ್ಜಿ ರೆಡಿ
ಬಿಸಿ ಬಿಸಿ ಕಾಫಿ ಅಥವಾ ಟೀ ಜೊತೆ ಕಟ್ ಕ್ಯಾಪ್ಸಿಕಂ ಬಜ್ಜಿ ಎಂಜಾಯ್ ಮಾಡಿ



