September 25, 2026
Friday, September 25, 2026
spot_img

ಸಂಕಷ್ಟದಲ್ಲಿ ಅಟ್ಟಿಕಾ ಗೋಲ್ಡ್‌ ಕಂಪನಿ: ಇಡಿ ಆಯ್ತು, ಇದೀಗ ಐಟಿ ದಾಳಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇತ್ತೀಚೆಗಷ್ಟೇ ಅಟ್ಟಿಕಾ ಗೋಲ್ಡ್‌ ಕಂಪನಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಆದಾಯ ತೆರಿಗೆ ಇಲಾಖೆಯೂ ದಾಳಿ ನಡೆಸಿದೆ.

ನಿನ್ನೆ ರಾತ್ರಿಯಷ್ಟೇ ಇಡಿ ದಾಳಿ ಪೂರ್ಣಗೊಂಡಿದ್ದು, ಇಂದು ಅಟ್ಟಿಕಾ ಗೋಲ್ಡ್‌ನ 19 ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಿನ್ನದ ಅಕ್ರಮ ಸಾಗಣೆ ಮತ್ತು ಆರ್ಥಿಕ ವಂಚನೆಗೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್‌ ಕಂಪನಿ ಮತ್ತು ಅದಕ್ಕೆ ಸಂಬಂಧಿಸಿದ ಇತರೆ ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ನಿನ್ನೆ ದಾಳಿ ಮಾಡಿದ್ದರು.

ಅಟ್ಟಿಕಾ ಗೋಲ್ಡ್ ಕಂಪನಿಯ ವ್ಯವಹಾರದಲ್ಲಿನ ಅಕ್ರಮಗಳು, ನೇರವಾಗಿ ಗ್ರಾಹಕರಿಂದ ಚಿನ್ನ ಖರೀದಿ ಸೇರಿದಂತೆ ಹಲವು ಆರೋಪಗಳು ಕೇಳಿಬಂದಿದ್ದವು. ಈ ಆರೋಪಗಳಿಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿಯನ್ನು ಕಲೆಹಾಕುವ ನಿಟ್ಟಿನಲ್ಲಿ ಇಡಿ ದಾಳಿ ನಡೆದಿತ್ತು. ಇದೀಗ ಐಟಿ ಅಧಿಕಾರಿಗಳು ಕೂಡ ಕಂಪನಿಯ ಹಣಕಾಸು ವ್ಯವಹಾರ ಮತ್ತು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ.

Must Read