ಸಾಮಾಗ್ರಿಗಳು
ಚಿಕನ್ ಬ್ರೆಸ್ಟ್
ಎಣ್ಣೆ
ತುಪ್ಪ
ಚಕ್ಕೆ ಲವಂಗ ಏಲಕ್ಕಿ
ಈರುಳ್ಳಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಪೆಪ್ಪರ್
ಬಿರಿಯಾನಿ ಪುಡಿ
ಉಪ್ಪು
ಅಕ್ಕಿ
ಮಾಡುವ ವಿಧಾನ
ಮೊದಲು ಚಿಕನ್ ಬ್ರೆಸ್ಟ್ನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ನಿಮಗೆ ಬಿರಿಯಾನಿಯಲ್ಲಿ ಪೀಸ್ ಎಷ್ಟು ದೊಡ್ಡದಾಗಿ ಸಿಕ್ಕರೆ ಇಷ್ಟವಾಗುತ್ತದೆಯೋ ಅದೇ ಸೈಝ್ಗೆ ಕತ್ತರಿಸಿ ಇಟ್ಟುಕೊಳ್ಳಿ
ಆನಂತರ ಪ್ಯಾನ್ಗೆ ಎಣ್ಣೆ, ಚಕ್ಕೆ, ಲವಂಗ, ಏಲಕ್ಕಿ, ಹಸಿಮೆಣಸು ಹಾಕಿ ಬಾಡಿಸಿ. ಇದು ಸ್ವಲ್ಪ ಬಾಡಿದ ನಂತರ ಈರುಳ್ಳಿ ಹಾಕಿ
ಈರುಳ್ಳಿ ಟ್ರಾನ್ಸ್ಪರೆಂಟ್ ಆದ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ ಉಪ್ಪು ಹಾಕಿ ಮಿಕ್ಸ್ ಮಾಡಿ
ನಂತರ ಪೆಪ್ಪರ್ ಹಾಗೂ ಬಿರಿಯಾನಿ ಪುಡಿ ಹಾಕಿ
ಆನಂತರ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ, ನಂತರ ಚಿಕನ್ ಹಾಕಿ ಬಾಡಿಸಿ
ಚಿಕನ್ ಬೆಂದ ನಂತರ ಅರ್ಧ ಲೋಟ ಅಕ್ಕಿ ಹಾಕಿ, ಒಂದು ಲೋಟ ನೀರು ಹಾಕಿ
ಸಣ್ಣ ಉರಿಯಲ್ಲಿ ಹದಿನೈದರಿಂದ ಇಪ್ಪತ್ತು ನಿಮಿಷ ಬೇಯಿಸಿದ್ರೆ ಚಿಕನ್ ಬಿರಿಯಾನಿ ರೆಡಿ. ಇದು ಮಸಾಲೆಯುಕ್ತ ಬಿರಿಯಾನಿ ಅಲ್ಲ, ಆದರೆ ನಿತ್ಯವೂ ತಿನ್ನಬಹುದು ಎನ್ನುವಂತಹ ರುಚಿಯನ್ನು ನೀಡುತ್ತದೆ.



