ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಆಟೋ ಡ್ರೈವರ್ಗಳಿಗೆ ʼಭಯ್ಯಾ ಎಚ್ಎಸ್ಆರ್ ಚಲೋಗೆ?ʼ ಎಂದು ಕೇಳಿದರೆ ಎಲ್ಲಿಲ್ಲದ ಕೋಪ! ಅದೇ ಅರ್ದಂಬರ್ಧ ಆದರೂ ಪರವಾಗಿಲ್ಲ ಕನ್ನಡ ಕಲಿಯುವ ಆಸಕ್ತಿ ತೋರುವ ಹೆಣ್ಣುಮಕ್ಕಳ ಬಗ್ಗೆ ಸಾಫ್ಟ್ ಕಾರ್ನರ್ ಇರುತ್ತದೆ. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಬಳಿ ಇಬ್ಬರು ಪರಭಾಷಿ ಯುವತಿಯರು ಹಾಗೂ ಆಟೋ ಡ್ರೈವರ್ ನಡುವೆ ಮಧ್ಯರಸ್ತೆಯಲ್ಲಿ ಹೊಡೆದಾಟವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಕನ್ನಡದ ವಿಷಯವಾಗಿಯೋ ಅಥವಾ ಹಣದ ವಿಷಯವಾಗಿಯೋ ಹುಡುಗಿಯರು ಹಾಗೂ ಆಟೋ ಚಾಲಕನ ನಡುವೆ ಮಾತಿನ ಜಟಾಪಟಿ ಆರಂಭವಾಗಿದೆ. ತದನಂತರ ಜಗಳ ಹೆಚ್ಚಾಗಿದ್ದು, ಮೂವರು ಯುವತಿಯರು ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ಯುವತಿಯರು ಪಾನಮತ್ತರಾಗಿದ್ದು, ರಸ್ತೆಯುದ್ದಕ್ಕೂ ಚಾಲಕನಿಗೆ ಕಿರಿಕಿರಿ ಮಾಡುತ್ತಿದ್ದರು ಎನ್ನಲಾಗಿದೆ.
ಸಹಿಸುವಷ್ಟು ಸಹಿಸಿಕೊಂಡ ನಂತರ ಚಾಲಕನೂ ತಿರುಗಿಬಿದ್ದಿದ್ದು, ಹುಡುಗಿಯರಿಗೂ ಬಾರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಆಟೋ ಚಾಲಕನ ವಿರುದ್ಧ ಪರಭಾಷಿ ಪುಂಡ ಹೆಂಗಸರ ದೌರ್ಜನ್ಯ ಎಂದು ಕ್ಯಾಪ್ಷನ್ ನೀಡಲಾಗಿದೆ.
ನೂರಾರು ರೀತಿ ಕಮೆಂಟ್ಸ್
ಪರಭಾಷಿಕರೋ ನಮ್ಮವರೋ ಈ ರೀತಿ ಹೆಣ್ಣುಮಕ್ಕಳನ್ನು ಹೊಡೆಯೋದು ತಪ್ಪಲ್ವಾ ಎಂದು ಕೆಲವರು ಪ್ರಶ್ನಿಸಿದ್ದಾರೆ. ಪರಭಾಷಿಕರು ಒಂದಕ್ಷರ ಕನ್ನಡ ಮಾತನಾಡೋದಿಲ್ಲ, ಇದರ ಮೇಲೆ ಕಿರುಕುಳ ಕೊಟ್ಟರೆ ಆಟೋದವರು ಹೇಗೆ ಸಹಿಸಿಕೊಳ್ತಾರೆ? ಆಟೋ ಚಾಲಕನ ಹಾವಭಾವ ನೋಡಿದರೆ ಹೊಡೆಸಿಕೊಂಡು ಸುಸ್ತಾಗಿ ವಾಪಾಸ್ ದಾಳಿ ಮಾಡುತ್ತಿರುವಂತೆ ಕಾಣಿಸುತ್ತಿದೆ ಎಂದು ಕೆಲವರು ಸಪೋರ್ಟ್ ಮಾಡಿದ್ದಾರೆ.



