September 29, 2026
Tuesday, September 29, 2026
spot_img

ನನ್ನ ಹೆಂಡತಿಗೆ ಅಸಹ್ಯ ಆಗುವಂತಹ ಮೆಸೇಜ್‌ ಮಾಡುವಷ್ಟು ಧೈರ್ಯನಾ? ರೇಣುಕಾಸ್ವಾಮಿ ಮರ್ಮಾಂಗಕ್ಕೆ ಒದ್ದಿದ್ದ ನಟ ದರ್ಶನ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಶ್‌ ಮೊದಲ ದಿನದ ವಿಚಾರಣೆಯಲ್ಲಿ ಮೂರು ಗಂಟೆಗಳ ಕಾಲ ಕೊಲೆಯ ದಿನ ಏನಾಯ್ತು ಎನ್ನುವ ಮಾಹಿತಿಯನ್ನು ನೀಡಿದ್ದಾರೆ.

ರೇಣುಕಾಸ್ವಾಮಿ ನಮ್ಮ ಕೈಗೆ ಸಿಕ್ಕಿದ್ದು ಹೇಗೆ? ಆತನನ್ನು ಕೊಂದಿದ್ದು ಹೇಗೆ? ದರ್ಶನ್‌ಗೆ ಪವಿತ್ರಾ ಗೌಡ ಏನಾಗಬೇಕು ಎಂಬುವ ಎಲ್ಲ ಮಾಹಿತಿಯನ್ನು ಪದರ ಪದರವಾಗಿ ಬಿಚ್ಚಿಟ್ಟಿದ್ದಾರೆ. ಪವಿತ್ರಾ ಗೌಡಗೆ ಮೆಸೇಜ್‌ ಮಾಡಿದ್ದ ರೇಣುಕಾಸ್ವಾಮಿಯನ್ನು ಸುಳ್ಳು ಹೇಳಿ ಪಟ್ಟಣಗೆರೆ ಶೆಡ್‌ಗೆ ಕರೆತರಲಾಗಿತ್ತು. ಮೊದಲು ವಾರ್ನಿಂಗ್‌ ಕೊಟ್ಟು, ನಾಲ್ಕು ಬಾರಿಸಿ ಕಳಿಸುವ ಇರಾದೆ ಇತ್ತು ಎಂದು ಹೇಳಿದ್ದಾರೆ.

ಪವಿತ್ರಾ ನನ್ನ ಹೆಂಡತಿ ಕಣೋ ಎಂದಿದ್ದ ದರ್ಶನ್‌

ದರ್ಶನ್‌ ಶೆಡ್‌ ಬಳಿ ಬರುತ್ತಿದ್ದಂತೆಯೇ ಅವನನ್ನು ನೋಡಿ ಕೆಂಡಾಮಂಡಲವಾದರು. ಸರಿಯಾಗಿ ಬಾರಿಸಿದರು, ಕೆಟ್ಟ ಕೆಟ್ಟ ಪದಗಳಿಂದ ಬೈದರು. ತದನಂತರ ಪವಿತ್ರಾರನ್ನು ತೋರಿಸಿ ಇವಳು ಯಾರು ಗೊತ್ತಾ? ಎಂದು ರೇಣುಕಾಸ್ವಾಮಿಯನ್ನು ಪ್ರಶ್ನಿಸಿದರು. ರೇಣುಕಾಸ್ವಾಮಿ ಕ್ಷಮಿಸಿ ಸರ್‌ ಎಂದು ಕೈಮುಗಿದು ಕೇಳಿಕೊಂಡ. ಆಗ ದರ್ಶನ್‌ ಮತ್ತೊಮ್ಮೆ ಏರುಧ್ವನಿಯಲ್ಲಿ ಇವಳು ಯಾರು ಗೊತ್ತಾ? ಎಂದು ಪ್ರಶ್ನಿಸಿದರು. ರೇಣುಕಾಸ್ವಾಮಿ ಅಳುತ್ತಿದ್ದ. ಪವಿತ್ರಾರನ್ನು ಹತ್ತಿರ ಎಳೆದು ಅವರ ಹೆಗಲ ಮೇಲೆ ಕೈ ಹಾಕಿ ಇವಳು ನನ್ನ ಹೆಂಡತಿ. ನನ್ನ ಹೆಂಡತಿಗೆ ಕೆಟ್ಟ ಮೆಸೇಜ್‌ ಮಾಡುವಷ್ಟು ಧೈರ್ಯನಾ? ಎಂದು ಗದರಿ ಆತನ ಮರ್ಮಾಂಗಕ್ಕೆ ಜೋರಾಗಿ ಒದ್ದರು ಎಂದು ಪ್ರದೋಶ್‌ ಹೇಳಿಕೊಂಡಿದ್ದಾರೆ.

Must Read