September 30, 2026
Wednesday, September 30, 2026
spot_img

ಪ್ಯಾರಿಸ್ ಫ್ಯಾಷನ್ ಶೋ ಮುಗಿಸಿ ಮುಂಬೈಗೆ ಮರಳಿದ ವಿಶ್ವಸುಂದರಿ: ವೈರಲ್ ಆಯ್ತು ‘ಗ್ರ್ಯಾಂಡ್ ಏರ್‌ಪೋರ್ಟ್ ಲುಕ್’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ಯಾರಿಸ್‌ನಲ್ಲಿ ನಡೆದ ಪ್ರತಿಷ್ಠಿತ ‘ಲಾರಿಯಲ್ ಪ್ಯಾರಿಸ್ ಲೇ ಡೆಫಿಲೆ’ ಫ್ಯಾಷನ್ ಶೋನಲ್ಲಿ ತಮ್ಮ ಅದ್ಭುತ ವಿನ್ಯಾಸದ ಕಪ್ಪು ಕೌಚರ್ ಡ್ರೆಸ್ ಹಾಗೂ ಬೋಲ್ಡ್ ರೆಡ್ ಹೇರ್‌ನೊಂದಿಗೆ ರ‍್ಯಾಂಪ್ ವಾಕ್ ಮಾಡಿದ್ದ ಬಾಲಿವುಡ್‌ನ ಬ್ಯೂಟಿ ಐಶ್ವರ್ಯಾ ರೈ ಬಚ್ಚನ್, ಈಗ ಭಾರತಕ್ಕೆ ರಿಟರ್ನ್ ಬಂದಿದ್ದಾರೆ. ಪ್ಯಾರಿಸ್‌ನಲ್ಲಿ ತಮ್ಮ ರಾಯಲ್ ಲುಕ್‌ನಿಂದ ಇಡೀ ಜಗತ್ತಿನ ಗಮನ ಸೆಳೆದಿದ್ದ ಈ ಸುಂದರಿ, ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ತಮ್ಮ ಅಲ್ಟ್ರಾ-ಸ್ಟೈಲಿಶ್ ಹಾಗೂ ಕ್ಲಾಸಿಕ್ ಏರ್‌ಪೋರ್ಟ್ ಲುಕ್ ಮೂಲಕ ಮತ್ತೊಮ್ಮೆ ಫ್ಯಾಷನ್ ಪ್ರಿಯರ ಕಣ್ಣು ಕೋರೈಸುವಂತೆ ಮಾಡಿದ್ದಾರೆ.

ರ‍್ಯಾಂಪ್ ಮೇಲೆ ವೈಭವದ ಉಡುಪಿನಲ್ಲಿ ಮಿಂಚಿದ್ದ ಐಶ್ವರ್ಯಾ, ಪ್ರಯಾಣದ ವೇಳೆ ತೀರಾ ಸರಳ ಹಾಗೂ ಆರಾಮದಾಯಕವಾದ ‘ಕ್ವೈಟ್ ಗ್ಲಾಮರ್’ ಶೈಲಿಯನ್ನು ಆಯ್ಕೆ ಮಾಡಿಕೊಂಡಿದ್ದರು.

https://www.instagram.com/reel/Dd5M_hnTSLX/?utm_source=ig_web_button_share_sheet

ಐಶ್ವರ್ಯಾ ಏರ್‌ಪೋರ್ಟ್ ಲುಕ್ ಹೈಲೈಟ್ಸ್

ಐಶ್ವರ್ಯಾ ರೈ ಅವರ ಏರ್‌ಪೋರ್ಟ್ ಲುಕ್‌ನ ಮುಖ್ಯ ಆಕರ್ಷಣೆ ಎಂದರೆ ಅವರು ಧರಿಸಿದ್ದ ಪ್ಲಮ್ ಬಣ್ಣದ ಲೆದರ್ ಡಬಲ್-ಬ್ರೆಸ್ಟೆಡ್ ಟ್ರೆಂಚ್ ಕೋಟ್. ಈ ಬಣ್ಣ ಮತ್ತು ಕೋಟ್‌ನ ರಚನೆ ಅವರಿಗೆ ಒಂದು ರಾಯಲ್ ಲುಕ್ ನೀಡುತ್ತಿತ್ತು.

ಪೋಲಿಷ್ಡ್ ಲೆದರ್ ಕೋಟ್‌‌ಗೆ ಬ್ಯಾಲೆನ್ಸ್ ನೀಡಲು ಅವರು ಡಾರ್ಕ್ ಇಂಡಿಗೋ ಬಣ್ಣದ ಫ್ಲೇರ್ಡ್ ಜೀನ್ಸ್ ಆಯ್ಕೆ ಮಾಡಿಕೊಂಡಿದ್ದರು. ಈ ಕಾಂಬಿನೇಷನ್ ಅವರಿಗೆ ಕ್ಯಾಶುಯಲ್ ಜೊತೆಗೆ ಎಲಿಗೆಂಟ್ ಸ್ಪರ್ಶ ನೀಡಿತು.

ಉಡುಪಿಗೆ ತಕ್ಕಂತೆ ಕಪ್ಪು ಬಣ್ಣದ ಲೆದರ್ ಬೂಟ್‌ಗಳು ಹಾಗೂ ಕಡು ಕಂದು ಬಣ್ಣದ ದೊಡ್ಡ ಹ್ಯಾಂಡ್‌ಬ್ಯಾಗ್ ಹಿಡಿದಿದ್ದರು. ಕೈಯಲ್ಲಿ ಧರಿಸಿದ್ದ ಸ್ಮಾರ್ಟ್‌ವಾಚ್ ಅವರ ಲುಕ್‌ಗೆ ಮಾಡರ್ನ್ ಸ್ಪರ್ಶ ನೀಡಿತ್ತು.

ಪ್ಯಾರಿಸ್ ಫ್ಯಾಷನ್ ವೀಕ್‌‌ಗಾಗಿ ಅವರು ಮಾಡಿಸಿಕೊಂಡಿದ್ದ ‘ಚೆರ್ರಿ-ರೆಡ್’ ಹೇರ್ ಕಲರ್, ಅವರು ಧರಿಸಿದ್ದ ಪ್ಲಮ್ ಕೋಟ್‌ಗೆ ಅಚ್ಚುಕಟ್ಟಾಗಿ ಹೊಂದುಕೊಳ್ಳುತ್ತಿತ್ತು. ಸಿಂಪಲ್ ಮೇಕಪ್‌ನೊಂದಿಗೆ ತಮ್ಮ ಸಿಗ್ನೇಚರ್ ರೆಡ್ ಲಿಪ್‌ಸ್ಟಿಕ್ ಹಾಕಿ, ನೈಸರ್ಗಿಕ ಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದರು.

ಯಾವುದೇ ಆಡಂಬರವಿಲ್ಲದೆ, ಕೇವಲ ಒಂದು ಸ್ಟೈಲಿಶ್ ಟ್ರೆಂಚ್ ಕೋಟ್ ಮತ್ತು ಸರಿ ಹೊಂದುವ ಆಕ್ಸೆಸರೀಸ್‌ ಬಳಸಿ ಫ್ಯಾಷನ್ ಐಕಾನ್ ಆಗಿ ಹೇಗೆ ಕಂಗೊಳಿಸಬಹುದು ಎಂಬುದನ್ನು ಐಶ್ವರ್ಯಾ ರೈ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

Must Read